ಜುಲೈ 24ರಂದು ಹೊಟೇಲ್ ಡಿಂಕಿ ಡೈನ್ ಆವರಣದಲ್ಲಿ ಆಟಿ ಅಮಾವಾಸ್ಯೆಯ ಕಷಾಯ ಮತ್ತು ಮೆಂತೆ ಗಂಜಿ ಉಚಿತವಾಗಿ ವಿತರಣೆ
ಹೊಟೇಲ್ ಡಿಂಕಿ ಡೈನ್ನ ಸಹಕಾರದಲ್ಲಿ ತುಳುವ ಬೊಳ್ಳಿ ಪ್ರತಿಷ್ಠಾನ ಸಂಸ್ಕಾರ ಭಾರತಿ ಮಂಗಳೂರು ಸಹಯೋಗದೊಂದಿಗೆ ಆಟಿ ಅಮಾವಾಸ್ಯೆಯ ವಿಶೇಷ ಕಷಾಯ ಮದ್ದನ್ನು ಉಚಿತವಾಗಿ ನೀಡುತ್ತಿದ್ದಾರೆ.
ಮಂಗಳೂರಿನ ಜನತೆಗೆ ಕಳೆದ 10 ವರ್ಷಗಳಿಂದ ಈ ಸೇವೆಯನ್ನು ತುಳುವ ಬೊಳ್ಳಿ ಪ್ರತಿಷ್ಠಾನ ಡಿಂಕಿ ಡೈನ್ ಹೋಟೆಲ್ ನ ಸಂಪೂರ್ಣ ಸಹಭಾಗಿತ್ವದೊಂದಿಗೆ ನಡೆಸಿಕೊಂಡು ಬರುತ್ತಿದೆ. ಈ ಬಾರಿ 11 ನೇ ವರ್ಷ ಎಲ್ಲರೂ ಬಂದು ಆಟಿ ಅಮಾವಾಸ್ಯೆಯ ಈ ವಿಶೇಷ ಕಷಾಯ ಮತ್ತು ಮೆಂತೆ ಗಂಜಿಯನ್ನು ಉಚಿತವಾಗಿ ಸ್ವೀಕರಿಸಿ. ಜುಲೈ 24 ರಂದು ಬೆಳಿಗ್ಗೆ 6 ಗಂಟೆಗೆ ಡಿಂಕಿಡೈನ್ ಆವರಣದಲ್ಲಿ ವಿತರಣೆ ನಡೆಯಲಿದೆ ಎಂದು ತುಳುವ ಬೊಳ್ಳಿ ಪ್ರತಿಷ್ಠಾನದ ದಯಾನಂದ ಕತ್ತಲ್ ಸಾರ್ ಮತ್ತು ಹೋಟೆಲ್ ಡಿಂಕಿ ಡೈನ್ ಮಾಲಕರಾದ ಸ್ವರ್ಣ ಸುಂದರ್ ಅವರು ತಿಳಿಸಿದ್ದಾರೆ.



















