ಮೂಡುಬಿದಿರೆ: ವಿಶ್ವ ತುಳುವೆರ್ ಸಂಘಟನೆ ಮಂಗಳೂರು ವತಿಯಿಂದ ಆಟಿ ಅಮಾವಾಸ್ಯೆ ಪ್ರಯುಕ್ತ ಕಷಾಯ ಮತ್ತು ಮೆಂತ್ಯೆ ಗಂಜಿ ವಿತರಣೆ

ವಿಶ್ವ ತುಳುವೆರ್ ಸಂಘಟನೆ ಮಂಗಳೂರು ವತಿಯಿಂದ ಮೂಡುಬಿದರೆಯ ಕಲ್ಲಬೆಟ್ಟುವಿನ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳಿಗೆ ಮತ್ತು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಸಾರ್ವಜನಿಕರಿಗೆ ಆಟಿದ ಅಮಾವಾಸ್ಯೆ ದಿನದ ಪ್ರಯುಕ್ತ ಕಷಾಯ ಮತ್ತು ಮೆಂತ್ಯೆ ಗಂಜಿ ವಿತರಣಾ ಕಾರ್ಯಕ್ರಮ ನಡೆಯಿತು.


ಸಾಮಾಜಿಕ ಕಳಕಳಿಯನ್ನು ಹೊಂದಿರುವ ವಿಶ್ವ ತುಳುವೆರ್ ಸಂಘಟನೆ ಮಂಗಳೂರು ತುಳುನಾಡಿನ ಸಾಂಪ್ರದಾಯಿಕ ಆಚರಣೆಯಾದ ಆಟಿ ಅಮಾವಾಸ್ಯೆಯ ದಿನದಂದು ಆಟಿ ಕಷಾಯ ಮತ್ತು ಮೆಂತ್ಯೆ ಗಂಜಿಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷರಾದ ದಯಾನಂದ ಶೆಟ್ಟಿ.ಉಪಾಧ್ಯಾಕ್ಷರಾದ ಐಟಿ ಡಾ. ಗಣೇಶ್ ಕುಮಾರ್, ಶಂಭು ಶೆಟ್ಟಿ, ಮಾರೂರ್ ಗುತ್ತು, ಕಾರ್ಯದರ್ಶಿ ಪಾರ್ಶ್ವನಾಥ್ ಅಲ್ವ, ಜಂಟಿ ಕಾರ್ಯದರ್ಶಿ ಸಾಯಿನಾಥ್, ಸದಸ್ಯರಾದ ಗಣೇಶ ಪೂಜಾರಿ ಬಲ್ಲಾಳ್ ಬಾಗ್.ವಿಜಯಪ್ರಭು. ಶ್ರೀಮತಿ ಡಾಲ್ಸಿ ಡಿಸೋಜಾ, ಯಶೋದರ್ ದೇವಾಡಿಗ ಮಾರೂರು, ಪ್ರವೀಣ್ ಶೆಟ್ಟಿ ಪುತ್ತಿಗೆ, ಸುನಿಲ್ ಶೆಟ್ಟಿ ಮಾರೂರು, ಸಂತೋಷ್ ಕೆ ಪುಚ್ಚೆಮೊಗರು, ಸುರೇಶ್ ದೇವಾಡಿಗ ಮಾರೂರು, ಮೊದಲಾದವರು ಉಪಸ್ಥಿತರಿದ್ದರು.