ಬ್ರಹ್ಮಾವರ: ಆ.9ರಂದು ದಿ.ಬಾಲಕೃಷ್ಣ ನಾಯಕ್ ಹಂದಾಡಿಯವರ ಪ್ರಥಮ ಸಂಸ್ಮರಣೆ, ಪುತ್ಥಳಿ ಅನಾವರಣ, ಸನ್ಮಾನ ಕಾರ್ಯಕ್ರಮ

ಚೌಕಿಮನೆಯ ಭೀಷ್ಮ ದಿ.ಬಾಲಕೃಷ್ಣ ನಾಯಕ್ ಹಂದಾಡಿಯವರ ಪ್ರಥಮ ಸಂಸ್ಮರಣೆ, ಪುತ್ಥಳಿ ಅನಾವರಣ , ಸನ್ಮಾನ ಕಾರ್ಯಕ್ರಮ ನೆನಪು ಚೌಕಿಮನೆಯ ಬೆಳಕಿನಲಿ ಆ.9ರಂದು ಸಂಜೆ 3.30ಕ್ಕೆ ಬ್ರಹ್ಮಾವರ ಬಂಟರ ಭವನದಲ್ಲಿ ಕಾರ್ಯಕ್ರಮವು ನಡೆಯಲಿದೆ.

ಕಾರ್ಯಕ್ರಮದಲ್ಲಿ ರಾಜೇಶ್ ಶ್ಯಾನುಭೋಗ್ ಅವರಿಂದ ಭಾವನಮನ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಇಂದ್ರಾಳಿ ಪ್ರಭಾಕರ ಆಚಾರ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಶ್ರೀಕ್ಷೇತ್ರ ಕಕ್ಕುಂಜೆ ಇಷ್ಟಸಿದ್ಧಿ ವಿನಾಯಕ ದೇವಸ್ಥಾನದ ಧರ್ಮದರ್ಶಿ, ಜ್ಯೋತಿಷ್ಯರು, ನಾಗಪಾತ್ರಿಗಳಾದ ನಾಗಾನಂದ ವಾಸುದೇವ ಆಚಾರ್ಯ ಕಕ್ಕುಂಜೆ ಅವರು ಪುತ್ಥಳಿ ಅನಾವರಣಗೊಳಿಸಲಿದ್ದಾರೆ. ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5.30ಕ್ಕೆ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘ 52ನೇ ಹೇರೂರು ಉಡುಪಿ ಇವರಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ನಡೆಯಲಿದೆ.
