ಅತಿ ಹೆಚ್ಚು ಬ್ಲೂ ಬೆರಿ ರಫ್ತು ಮಾಡುವ ದೇಶ ಯಾವುದು?

ಅತಿ ಹೆಚ್ಚು ಬ್ಲೂ ಬೆರಿ ರಫ್ತು ಮಾಡುವ ದೇಶ ಪೆರು; ಆಮದು ಮಾಡಿಕೊಂಡು ರಫ್ತು ಮಾಡುವ ದೇಶಗಳು ಯುಎಸ್‍ಎ ಹಾಗೂ ನೆದರ್‍ಲ್ಯಾಂಡ್ಸ್.

ಜಾಗತಿಕವಾಗಿ 10 ಲಕ್ಷ ಟನ್ ಬ್ಲೂ ಬೆರಿ ಪ್ರತಿ ವರುಷ ರಫ್ತು ಆಗುತ್ತದೆ. ಜಾಗತಿಕ ರಫ್ತು ಪ್ರಮಾಣದಲ್ಲಿ ಪೆರು ಪಾಲು 31 ಶೇಕಡಾ. ಚಿಲಿ, ಸ್ಪೆಯಿನ್, ಮೊರಾಕೊಗಳ ರಫ್ತು ಪಾಲು ತಲಾ 8 ಶೇಕಡಾ, ಯುಎಸ್‍ಎ ಲೋಕ ರಫ್ತು ಪ್ರಮಾಣ 7 ಶೇಕಡಾ.

blueberry

2010ರವರೆಗೆ ಪೆರು ದೇಶದಲ್ಲಿ ನೀಲಿ ಬೆರಿ ಬೆಳೆ ರಫ್ತು ಪ್ರಮಾಣ ನಗಣ್ಯವಿತ್ತು. ಅನಂತರ ಬಹು ವೇಗವಾಗಿ ಬೆಳೆದಿದೆ. 2023ರ ರಫ್ತು 2024ಕ್ಕೆ 57 ಶೇಕಡಾ ಅಧಿಕವಾಗಿದೆ. ಪೆರು ರಫ್ತು ಈಗ 3.27 ಲಕ್ಷ ಟನ್, ಇದರ ಗಳಿಕೆ 227 ಕೋಟಿ ಡಾಲರ್.

ಯುಎಸ್‍ಎ ಬೆಳೆಯುವುದಲ್ಲದೆ 36 ಶೇಕಡಾ ಬ್ಲೂ ಬೆರಿಯನ್ನು ಪೆರುವಿನಿಂದ ಆಮದು ಮಾಡಿಕೊಳ್ಳುತ್ತದೆ. ಸ್ಪೆಯಿನ್, ನೆದರ್‍ಲ್ಯಾಂಡ್ಸ್‍ಗಳು ಸಹ ಆಮದು ರಫ್ತು ಮಾಡುತ್ತವೆ. ನೆದರ್ ಲ್ಯಾಂಡ್ಸ್ ಗಳು ಬ್ಲೂ ಬೆರಿ ರಫ್ತು ಗಳಿಕೆ 61 ಲಕ್ಷ ಡಾಲರ್.

Related Posts

Leave a Reply

Your email address will not be published.