ಹಣ್ಣಿನಲ್ಲಿ ಇಂಡೋನೇಶಿಯಾ ಸೋಲಿಸಿದ ಮಲೇಶಿಯಾ

ನೆಪೆಲಿಯಂ ಲೆಪ್ಪೆಸಿಯಂ ಎಂಬ ರಾಂಬುಟಾನ್ ಹಣ್ಣು ಜಾಗತಿಕವಾಗಿ ಅರ್ಧಕ್ಕರ್ಧ ಇಂಡೋನೇಶಿಯಾದಲ್ಲಿ ಬೆಳೆಯುತ್ತಿತ್ತು; ಆ ಸ್ಥಾನವನ್ನು ಈಗ ತಾಯ್‍ಲ್ಯಾಂಡ್ ಕಸಿದುಕೊಂಡಿದೆ.ರಾಂಬುಟಾನ್ ಮೂಲ ಕೊಂಗಣ ಎಂದರೆ ಆಗ್ನೇಯ ಏಶಿಯಾ. ಅರಬ್ ವ್ಯಾಪಾರಿಗಳು ನಡುಗಾಲದಲ್ಲಿ ಇದನ್ನು ಆಫ್ರಿಕಾದ ಜಾಂಜಿಬಾರ್ ಮೊದಲಾದ ಕಡೆಗೆ ಒಯ್ದರು. ಕಳೆದ ಶತಮಾನದಲ್ಲಿ ನಡುವಣ ಅಮೆರಿಕದ ದೇಶಗಳಿಗೆ ಈ ಉಷ್ಣವಲಯದ ಹಣ್ಣಿನ ಬೆಳೆ ವಿಸ್ತರಿಸಿದೆ.

OLYMPUS DIGITAL CAMERA

ದಶಕದ ಹಿಂದಿನವರೆಗೆ ಇಂಡೋನೇಶಿಯಾ ಮುಂದಿತ್ತು. ಕಳೆದೊಂದು ದಶಕದಿಂದ ತಾಯ್‍ಲ್ಯಾಂಡ್ ಹೊಸ ತಳಿಗಳ ಕ್ರಾಂತಿ ಮಾಡಿದೆ. ಇವರ ಆರ್ -334 ರಾಂಬುಟಾನ್ ಹಣ್ಣಿಗೆ ಲೋಕದೆಲ್ಲೆಡೆ ಪೂರೈಸಲಾಗದಷ್ಟು ಬೇಡಿಕೆ ಇದೆ.ಸದ್ಯ ತಾಯ್‍ಲ್ಯಾಂಡ್ 4.50 ಲಕ್ಷ ಟನ್, ಇಂಡೋನೇಶಿಯಾ 1.50 ಲಕ್ಷ ಟನ್, ಮಲೇಶಿಯಾ 65,000 ಟನ್ ರಾಂಬುಟಾನ್ ಬೆಳೆಯುತ್ತವೆ. ಫಿಲಿಪ್ಪೀನ್ಸ್, ವಿಯೆಟ್ನಾಂ ಇನ್ನೆರಡು ಪ್ರಮುಖ ರಾಂಬುಟಾನ್ ಬೆಳೆಯುವ ದೇಶಗಳಾಗಿವೆ.

OLYMPUS DIGITAL CAMERA
add - Rai's spices

Related Posts

Leave a Reply

Your email address will not be published.