ಮಧ್ಯ ಪ್ರದೇಶ:ಎಲ್ಲರಿಗೂ ಎರಡು ಲಾಡು, ನನಗೆ ಒಂದು ಮುಖ್ಯಮಂತ್ರಿಗಳಿಗೆ ಸಾಮಾನ್ಯನಿಂದ ದೂರು

ಮಧ್ಯ ಪ್ರದೇಶದಲ್ಲಿ ಹಂಚಿದ ಲಾಡು ಪೊಟ್ಟಣದಲ್ಲಿ ಎಲ್ಲರಿಗೂ ಎರಡು ಲಾಡು ಸಿಕ್ಕರೆ, ಒಬ್ಬ ಸಾಮಾನ್ಯನಿಗೆ ಒಂದು ಲಾಡು ಸಿಕ್ಕಿತ್ತು. ಆತನು ಮುಖ್ಯಮಂತ್ರಿಗಳ ಸಹಾಯವಾಣಿಯಲ್ಲಿ ದೂರು ಸಲ್ಲಿಸಿದ; ಪಂಚಾಯತ್ ಒಂದು ಕಿಲೋ ಸಿಹಿ ತಪ್ಪು ದಂಡ ಕೊಟ್ಟಿತು.ಈ ಘಟನೆಯು ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯಲ್ಲಿಸ್ವಾತಂತ್ರ‍್ಯ ದಿನಾಚರಣೆಯಂದು ನಡೆದಿದೆ. ಕಮಲೇಶ್ ಕುಶ್ವಾಹನಿಗೆ ಮಾತ್ರ ಒಂದು ಲಾಡು ಕೊಡಲಾಗಿತ್ತು

ಆತನು ಒಂದಿದೆ, ಎರಡು ಕೊಡಿ ಎಂದರೂ ಸಂಘಟಕರು ಕೊಟ್ಟಿಲ್ಲ. ಆತನು ಕೂಡಲೆ ತಾರತಮ್ಯ ಮಾಡಿದ್ದಾರೆ ಎಂದು ಪಂಚಾಯತ್‌ನ ಮುಖ್ಯಮಂತ್ರಿಗಳ ಹೆಲ್ಪ್ ಲೈನ್‌ನಲ್ಲಿ ದೂರು ಸಲ್ಲಿಸಿದ್ದ. ತನ್ನ ಪ್ರತಿಭಟನೆಯನ್ನೂ ದಾಖಲಿಸಿದ್ದ.“ಇದು ನಮ್ಮ ಪಿಯೋನ್ ಮಾಡಿದ ಕಿತಾಪತಿ.ಆದ್ದರಿಂದ ಪಂಚಾಯತ್ ಒಂದು ಕಿಲೋ ಸಿಹಿಯನ್ನು ಕಮಲೇಶ್ ಕುಶ್ವಾಹ್‌ನಿಗೆ ಕೊಡಲು ತೀರ್ಮಾನ ತೆಗೆದುಕೊಂಡಿತು” ಎಂದು ಪಂಚಾಯತ್ ಕಾರ್ಯದರ್ಶಿ ರವೀಂದ್ರ ಶ್ರೀವಾತ್ಸವ ಹೇಳಿದ್ದಾರೆ. ಅದರಂತೆ ಒಂದು ಕಿಲೋ ಸ್ವೀಟ್ ತಪ್ಪುದಂಡ ಸಲ್ಲಿಸಲಾಯಿತು.
