ಸ್ವಿಜರ್‌ಲ್ಯಾಂಡ್ : ಜ್ಯೂರಿಚ್ ಜಾವೆಲಿನ್ ಎಸೆತ ಬೆಳ್ಳಿಗೆ ತಳ್ಳಲ್ಪಟ್ಟ ನೀರಜ್ ಚೋಪ್ರಾ

ಭಾರತದ ನೀರಜ್ ಚೋಪ್ರಾ ಅವರು ಸ್ವಿಜರ್‌ಲ್ಯಾಂಡಿನ ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.ಇದು ಡೈಮಂಡ್ ಲೀಗ್ ಪಂದ್ಯಾವಳಿಯಲ್ಲಿ ನೀರಜ್ ಚೋಪ್ರಾರಿಗೆ ದಕ್ಕಿರುವ ನಾಲ್ಕನೆಯ ಪದಕವಾಗಿದೆ. ಕೊನೆಯ ಮೂರರಲ್ಲಿ ಬೆಳ್ಳಿ ಹಿಡಿದ ಅವರು ರಜತ ಹ್ಯಾಟ್ರಿಕ್ ಗಳಿಸಿದರು. 2022 ರ ಡೈಮಂಡ್ ಲೀಗ್‌ನಲ್ಲಿ ಮಾತ್ರ ಅವರು ಚಿನ್ನ ಗೆದ್ದಿದ್ದರು. 2023, 2024 ಹಾಗೂ ಈ ವರುಷದ ಡೈಮಂಡ್ ಲೀಗ್‌ನಲ್ಲಿ ಅವರು ಈಟಿ ಎಸೆತz ಮೂಲಕ ಬೆಳ್ಳಿ ಪದಕ ಪಡೆದಿದ್ದಾರೆ. ಈ ವರುಷದ ದೋಹಾ ಕೂಟದಲ್ಲಿ ಜೀವನ ಶ್ರೇಷ್ಟ90.30 ಮೀಟರ್ ದೂರ ಜಾವೆಲಿನ್ ಎಸೆದಿದ್ದ ನೀರಜ್ ಚೋಪ್ರಾ ಇಲ್ಲಿ ಬಹಳ ಒದ್ದಾಡಿದಂತೆ ಬಳಲಿದಂತೆ ಕಂಡಿತು.

ಹಾಲಿ ಲೋಕ ಚಾಂಪಿಯನ್ ನೀರಜ್ ಅವರು ಮೂರು ಪ್ರಯತ್ನಗಳಲ್ಲಿ ಕ್ರಮವಾಗಿ 84.35 ಮೀಟರ್, 82 ಮೀಟರ್ ಹಾಗೂ 85.01 ಮೀಟರ್ ದೂರ ಮಾತ್ರ ಎಸೆದರು. ಜರ್ಮನಿಯ ವೆಬರ್ ಅವರು 91.51 ಮೀಟರ್ ದೂರ ಎಸೆದು ಬಂಗಾರ ಗೆದ್ದರು.
