ಪೋಲೆಂಡ್ ;ನೆಲಕ್ಕುರುಳಿದ ವಿಮಾನ ಎಫ್- 16 ಫೈಟರ್ ಜೆಟ್ ಪೈಲಟ್ ಸಾವು

ಮಧ್ಯ ಪೋಲೆಂಡಿನ ರಾಡೊಮ್‌ನಲ್ಲಿ ಏರ್ ಶೋ ನಡೆಸಲು ಮುನ್ ತಾಲೀಮು ನಡೆಸುತ್ತಿದ್ದ ವೇಳೆ ಎಫ್- 16 ಫೈಟರ್ ಜೆಟ್ ವಿಮಾನವು ನೆಲಕ್ಕುರುಳಿದ ಪರಿಣಾಮವಾಗಿ ಪೈಲಟ್ ಸಾವು ಕಂಡರು. ಪೋಲೆಂಡ್ ಸೇನೆಯು ಪ್ರತಿ ವರುಷದಂತೆ ಏರ್ ಶೋ ನಡೆಸಲು ಪೋಲೆಂಡಿನ ರಾಡೊಮ್ ನಗರದಲ್ಲಿ ತಾಲೀಮು ನಡೆಸಿತ್ತು. ಏರ್ ಫೋರ್ಸಿನ ಎಫ್- 16 ಫೈಟರ್ ಜೆಟ್ ವಿಮಾನವು ಹಾರಾಟದ ನಡುವೆ ಕೆಳಕ್ಕುರುಳಿ ಸೇನಾ ಪೈಲಟ್ ಸ್ಥಳದಲ್ಲೇ ಸಾವು ಕಂಡರು. ಇದನ್ನು ವಿಷಾದದಿಂದ ಪೋಲೆಂಡ್ ಉಪ ಪ್ರಧಾನಿ ವ್ಲಾಡೈಸ್ಲಾವ್ ಕೊಸಿನಿಯಕ್ ಕಮೈಸ್ಜ್ ಅಹುದಹುದೆಂದು ಸ್ಪಷ್ಟೀಕರಿಸಿದ್ದಾರೆ. ಬ್ಯಾರೆಲ್ ಉರುಳುವ ತೆರದ ಏರೋಬಾಟಿಕ್ ಪ್ರದರ್ಶನದಲ್ಲಿ ಜೆಟ್ ವಿಮಾನವು ತೊಡಗಿಕೊಂಡಿತ್ತು.

ಆಮೇಲೆ ದಿಢೀರನೆ ಏನಾಯಿತೆಂದು ಅರಿವಿಗೆ ಬರುವುದಕ್ಕೆ ಮೊದಲು ಆ ವಿಮಾನವು ನೆಲಕ್ಕೆ ನುಗ್ಗಿ ಬಡಿಯಿತು. ಹಾಗೆ ಬಿದ್ದಾಗ ಬೆಂಕಿಯುಂಡೆಯ ರೀತಿ ಕಂಡಿತ್ತು. ಕಂಡ ಅದು ಜ್ವಾಲಾ ಗೋಲವನ್ನು ಹರಡಿತು. ಈ ವೀಡಿಯೋ ನೋಡಿ ಜನರು ಗಾಬರಿಗೊಂಡಿದ್ದಾರೆ. ೩೧ನೇ ಪಜ್ನಾನ್ ಏರ್ ಬೇಸ್‌ಗೆ ಸೇರಿದ ವಿಮಾನವಿದು. ಏರ್ ಶೋ ರಾಡೊಮ್ ೨೦೨೫ ಆರಂಭದಲ್ಲೇ ಕಪ್ಪು ಚುಕ್ಕಿ ಹೊತ್ತಿತು.
