ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೈಡ್ರೋಫೋನಿಕ್‌ ಗಾಂಜಾ ಸಾಗಾಟ: ಆರೋಪಿಯ ಬಂಧನ

ಮಂಗಳೂರು:ಮುಂಬೈನಿಂದ ವಿಮಾನದ ಮೂಲಕ ಹೈಡ್ರೋಪೋನಿಕ್ ಗಾಂಜಾ ಸಾಗಿಸುತ್ತಿದ್ದ ಓರ್ವನನ್ನು ಸಿಐಎಸ್ಎಫ್ ಜವಾನರು ವಶಕ್ಕೆ ಪಡೆದು‌ ಬಜ್ಪೆ‌ ಪೊಲೀಸರಿಗೆ ಒಪ್ಪಿಸಿದ್ದಾರೆ‌.‌

ಬಂಧಿತನನ್ನು ಶಂಕರ್ ನಾರಾಯಣ್ ಪೊದ್ದಾರ್ ಎಂದು ತಿಳಿದು ಬಂದಿದೆ. ಈತ ಸೋಮವಾರ ಸಂಜೆ 6:30ಕ್ಕೆ ಮುಂಬೈನಿಂದ ಮಂಗಳೂರಿಗೆ ಬಂದ ಇಂಡಿಗೋ‌ ವಿಮಾನದಲ್ಲಿ ಹೈಡ್ರೋಪೋನಿಕ್ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ‌ ಬಂದ ಹಿನ್ನೆಲೆ ವಿಮಾನ‌ ನಿಲ್ದಾಣ ಸಿಬ್ಬಂದಿ ಆಧರಿಸಿ ವಿಮಾನ‌ ನಿಲ್ದಾಣದ ಭದ್ರತಾ ಸಿಬ್ಬಂದಿ‌ ಸಿಐಎಸ್ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.‌

ಅದರಂತೆ ಸಂಜೆ ಇಂಡಿಗೋ ವಿಮಾನದಲ್ಲಿ ಬಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ‌ ಇಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಪರಿಶೀಲನೆ‌‌ ನಡೆಸಿದರು. ಈ ವೇಳೆ ಶಂಕರ್ ನಾರಾಯಣ್ ಪೊದ್ದಾರ್ ನ ಚೆಕ್‌ – ಇನ್ ಬ್ಯಾಗೇಜ್‌ನಲ್ಲಿ ಸುಮಾರು 512 ಗ್ರಾಂ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿತ್ತು.‌ ತಕ್ಷಣ ಬೆಂಗಳೂರು ವಿಮಾನ ನಿಲ್ದಾಣದ‌ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ, ಸಿಐಎಸ್ಎಫ್ ಸಿಬ್ಬಂದಿ ಪತ್ತೆಯಾದ ಗಾಂಜಾ ಸಹಿತ ಆರೋಪಿಯನ್ನು ಹೆಚ್ವಿನ ವಿಚಾರಣೆಗಾಗಿ ಬಜ್ಪೆ‌ ಪೊಲೀಸರಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

Related Posts

Leave a Reply

Your email address will not be published.