ವಿರಾಜಪೇಟೆ ಗೌಡ ಸಮಾಜದಿಂದ ಅದ್ದೂರಿ ಅಭಿನಂದನಾ ಕಾರ್ಯಕ್ರಮ
ವಿರಾಜಪೇಟೆ ಗೌಡ ಸಮಾಜದಲ್ಲಿ ಇಂದು ಪೂಜ್ಯರಾದ ಕುರುoಜಿ ಜಾನಕಿ ವೆಂಕಟರಮಣ ಗೌಡರ ಸುಪುತ್ರರಾದ ಡಾ.ಚಿದಾನಂದ ಗೌಡರು ಮತ್ತು ಡಾ.ರೇಣುಕಾ ಪ್ರಸಾದ್ ರವರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಅಭಿನಂದನೆ ಯನ್ನು ಸ್ವೀಕರಿಸಿ ಮಾತನಾಡಿದ ಡಾ. ಚಿದಾನಂದರವರು ಸುಮಾರು 20 ವರ್ಷಗಳಿಂದ ಆಗಬೇಕಿದ್ದ ಕೆಲಸವನ್ನು ಕೊಡಗು ಗೌಡ ಸಮಾಜದ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ ಮತ್ತು ಅವರ ತಂಡವು ನಮ್ಮೊಂದಿಗೆ ಬಂದು ಚರ್ಚಿಸಿ ಆದ ನಂತರ ಕೆಲವು ಕಾನೂನು ಕ್ರಮಕ್ಕೆ ಅನುಗುಣವಾಗಿ ನಾವು ಜಾಗವನ್ನು ಒಕ್ಕೂಟದ ನೇತೃತ್ವದಲ್ಲಿ ನೊಂದಣಿ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು .ಈ ಜಾಗದಲ್ಲಿ ಒಂದು ಉತ್ತಮ ಸಮಾಜವನ್ನು ಕಟ್ಟಬೇಕು ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು ಹಾಗೂ ನಮ್ಮ ಮಕ್ಕಳ ಸಹಕಾರ ಕೂಡ ಇದೆ ಎಂದು ತಿಳಿಸಿದರು.ನಮಗೆ ಮಾಡಿದ ಸನ್ಮಾನವನ್ನು ಪೂಜ್ಯರಾದ ನಮ್ಮ ತಂದೆ ತಾಯಿಯವರಿಗೆ ಅರ್ಪಿಸುತ್ತೇವೆ ಎಂದು ತಿಳಿಸಿದರು . ಡಾ ಕೆ ವಿ ರೇಣುಕಾ ಪ್ರಸಾದ್ ರವರು ಮಾತನಾಡಿ ಈ ಸಮಾಜಕ್ಕೆ ಆಗಮಿಸುತ್ತಿದ್ದಂತೆ ನಮ್ಮನ್ನು ಅದ್ದೂರಿಯಾಗಿ ಸ್ವಾಗತಿಸಿದ್ದೀರಿ ಹಾಗೂ ಗೌರವ ಪೂರಕವಾಗಿ ಸನ್ಮಾನಿಸಿದ್ದೀರಿ, ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಈ ಜಾಗದಲ್ಲಿ ಒಳ್ಳೆಯ ಸಮಾಜ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯವನ್ನು ಮಾಡಿ ಎಂಬ ಸಲಹೆಯನ್ನು ನೀಡಿದರು. ನೀವು ಮಾಡುವ ಎಲ್ಲಾ ಕೆಲಸ ಕಾರ್ಯಗಳಿಗೆ ನನ್ನ ಮಕ್ಕಳು ಹಾಗೂ ನನ್ನ ಅಣ್ಣ ಡಾ ಕೆವಿ ಚಿದಾನಂದ ಮತ್ತು ಮಕ್ಕಳು ಎಲ್ಲರ ಸಹಕಾರ ಸಂಪೂರ್ಣವಾಗಿ ಇರುತ್ತದೆ ಎಂದು ತಿಳಿಸಿದರು .
ಸುಮಾರು 20 ವರ್ಷಗಳಿಂದ ಗಣ್ಯರು ಈ ದಿಸೆಯಲ್ಲಿ ಪ್ರಯತ್ನಿಸಿದ್ದನ್ನು ಸ್ಮರಿಸಿದ ಒಕ್ಕೂಟದ ಅಧ್ಯಕ್ಷರು, ಹೊಸ ಆಡಳಿತ ಮಂಡಳಿ ಬಂದು ಮೂರು ತಿಂಗಳಲ್ಲಿ ಕೊಡಗು ಗೌಡ ಸಮಾಜದ ಒಕ್ಕೂಟದ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಈ ಜಾಗವನ್ನು ವಿರಾಜಪೇಟೆ ಗೌಡ ಸಮಾಜಕ್ಕೆ ದಾನಿಗಳ ಸಹಕಾರದಿಂದ ನೊಂದಣಿ ಮಾಡಿ ಕೊಟ್ಟಿರುತ್ತೇವೆ. ಇಲ್ಲಿ ಉತ್ತಮವಾದ ಸಮಾಜ ಕಟ್ಟಲು ಕೊಡಗು ಗೌಡ ಸಮಾಜಗಳ ಒಕ್ಕೂಟವು ನಿಮ್ಮ ಹಿಂದೆ ನಿಲ್ಲುತ್ತದೆ.ಮತ್ತು ಆದಷ್ಟು ಬೇಗ ಒಂದು ಮಹಾಸಬೆ ಕರೆದು ಅನುಭವಸ್ಥರು ಹಾಗೂ ಯುವಕರಿಂದ ಕೂಡಿದ ಒಂದು ಆಡಳಿತ ಮಂಡಳಿಯನ್ನು ರಚಿಸಿ ಎಂದು ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆಯವರು ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷರನ್ನು ಕೇಳಿಕೊಂಡರು.
ಸರಕಾರದಿಂದ ಬರುವ ಸಮಾಜಗಳಿಗೆ ನೀಡುವಂತ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಮತ್ತು ಈ ಕ್ಷೇತ್ರದಲ್ಲಿ ನಾನು ಶಾಸಕನಾಗಿದ್ದ ಸಮಯದಲ್ಲಿ ವಿರಾಜಪೇಟೆ ಗೌಡ ಸಮಾಜಕ್ಕೆ ಅನುದಾನ ಕೊಡಿಸಲಾಗಲಿಲ್ಲ, ಮುಂದೆ ಸಮಾಜ ಕಟ್ಟುವ ಸಂದರ್ಭದಲ್ಲಿ ಅನುದಾನ ಕೊಡಿಸಲು ಸಹಕರಿಸುವುದಾಗಿ ಮಾಜಿ ವಿಧಾನಸಭಾ ಅಧ್ಯಕ್ಷರಾದ ಕೊಂಬಾರನ ಬೋಪಯ್ಯನವರು ತಿಳಿಸಿದರು.
ಎಂ ಎಲ್ಸಿ ಸುಜಾ ಕುಶಲಪ್ಪನವರು ಮಾತನಾಡಿ ಗೌಡರು ಹಾಗೂ ಕೊಡವರು ಸಹಬಾಳ್ವೆಯಿಂದ ಇರಬೇಕು ನಾವು ಒಗ್ಗಟ್ಟಾಗಿರಬೇಕು, ವಿರಾಜಪೇಟೆ ಗೌಡ ಸಮಾಜಕ್ಕೆ 5ಲಕ್ಷ ಎಂಎಲ್ಸಿ ಅನುದಾನದಿಂದ ಕೊಡುವು ದಾಗಿ ತಿಳಿಸಿದರು .
ವಿರಾಜಪೇಟೆ ಶಾಸಕರಾದ ಕೆ ಎಸ್ ಪೊನ್ನಣ್ಣನವರ ಅನುಪಸ್ಥಿತಿಯಲ್ಲಿ ಕೊಡಗು ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷರಾದ ತೀತೀರಾ ಧರ್ಮಜ ಉತ್ತಪ್ಪ ರವರಿಗೆ ವಿರಾಜಪೇಟೆ ಗೌಡ ಸಮಾಜದ ವತಿಯಿಂದ ಮನವಿ ಪತ್ರವನ್ನು ನೀಡಲಾಯಿತು. ವಿರಾಜ್ ಪೇಟೆ ಗೌಡ ಸಮಾಜದ ಅಧ್ಯಕ್ಷರಾದ ಮುಕ್ಕಟ್ಟಿ ವಾಸು ಗಣಪತಿಯವರು ಮಾತನಾಡಿ ನಾವು ಮುಂದೆ ಒಂದು ಒಳ್ಳೆ ಸಮಾಜವನ್ನು ಕಟ್ಟಲು ನಿರ್ಧರಿಸಿದ್ದೇವೆ. ತಮ್ಮಗಳೆಲ್ಲರ ಸಹಕಾರ ಬೇಕೆಂದು ಸಭೆಯಲ್ಲಿ ಕೇಳಿಕೊಂಡರು . ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷರಾದ ಡಾ. ರಾಜೇಶ್ ತೇನನ ರವರು ಸ್ವಾಗತಿಸಿದರು.ಪಟ್ಟಡ ಶಿವಕುಮಾರ್ ಅವರು ನಿರೂಪಿಸಿದರು . ಕಾರ್ಯಕ್ರಮದಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ ಸೇರಿದಂತೆ ಎಲ್ಲ ನಿರ್ದೇಶಕರುಗಳು ಮತ್ತು ಕೊಡಗು ,ಬೆಂಗಳೂರು ,ಮೈಸೂರು ಸೇರಿದಂತೆ ಕೊಡಗಿನ ಎಲ್ಲಾ ಭಾಗದ ಗೌಡ ಸಮಾಜ ಗಳ ಅಧ್ಯಕ್ಷರುಗಳು, ಆಡಳಿತ ಮಂಡಳಿಯವರು ಮತ್ತು ಗಣ್ಯರು ಭಾಗವಹಿಸಿದ್ದರು .manjandra ರೇಖಾ ಉಲ್ಲಾಸನವರು ಪ್ರಾರ್ಥಿಸಿದರು.


















