ಶ್ರೀ ಉಳ್ಳಾಕ್ಳು ಕಾಚುಕುಜುಂಬ ದೈವಗಳ ಮೂಲಸ್ಥಾನದಲ್ಲಿ ಪ್ರಾರ್ಥನೆ
ಶ್ರೀ ಉಳ್ಳಾಕ್ಳು ಕಾಚುಕುಜುಂಬ ದೈವಗಳ ಮೂಲಸ್ಥಾನದಲ್ಲಿ.. ಶ್ರೀ ಕಾಚುಕುಜುಂಬ ದೈವದ ಪುನಃ ಪ್ರತಿಷ್ಠಾ ಕಲಶಾಭಿಷೇಕ ಅಂಗವಾಗಿ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಹಾಗೂ ಗರಡಿ ಬೈಲ್ ಶ್ರೀ ಉಳ್ಳಾಕ್ಳು, ಕಾಚು ಕುಜುಂಬ ಸನ್ನಿಧಿಯಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪ್ರಾರ್ಥನೆ ಮಾಡಲಾಯಿತು.

ಶ್ರೀ ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ಕಾಚು ಕುಜುಂಬ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪರಮೇಶ್ವರ ಬಿಳಿಮಲೆ, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕಳ,ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ಪಲ್ಲತಡ್ಕ, ಸತ್ಯ ನಾರಾಯಣ ಭಟ್, ಧರ್ಮಣ್ಣ ನಾಯ್ಕ ಗರಡಿ, ಮಾಯಿಲ್ಲಪ್ಪ ಗೌಡ ಎಣ್ಮೂರು,ಧರ್ಮಪಾಲ ಗೌಡ ಮರಕ್ಕಡ, ಪವಿತ್ರ ಮಲ್ಲೆಟ್ಟಿ, ಮಾಲಿನಿ ಕುದ್ವ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಆನಂದ ಗೌಡ ಜಲಕದ ಹೊಳೆ ಹಾಗೂ ಊರ ಭಕ್ತಾದಿಗಳು ಉಪಸ್ಥಿತರಿದ್ದರು.


















