ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಹುಬ್ಬಳ್ಳಿಯ ಡಾ ಅಶೋಕ ಹುಗ್ಗಣ್ಣನವರ್ ನಿಧನ

ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಹುಬ್ಬಳ್ಳಿಯ ಡಾ ಅಶೋಕ ಹುಗ್ಗಣ್ಣನವರ್ ಅವರು ಸಂಗೀತ ಲೋಕದಿಂದ ಅಗಲಿದ್ದಾರೆ.

ಹೊನ್ನಾವರ ಎಸ್‍ಡಿಎಮ್ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿದ್ದ ಇವರು ಕಿರಾನ ಹಾಗೂ ಗ್ವಾಲಿಯಾರ್ ಘರಾನ ಶೈಲಿಯ ಹಾಡುಗಾರಿಕೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ದೇಶ ವಿದೇಶಗಳಲ್ಲಿ ಆಪಾರ ಶಿಷ್ಯ ವರ್ಗ ಅಭಿಮಾನಿಗಳನ್ನು ಹೊಂದಿದ್ದ ಇವರು ದೇಶ ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಇವರ ಮುಡಿಗೆ ಅಲಂಕರಿಸಿವೆ.

ಮಂಗಳೂರಿ£ಲ್ಲಿ ಕಾರ್ಯಚರಿಸುತ್ತಿರುವ ಕಾಂತ್ ವಿಶ್ವನಾಥ್ ಸಂಗೀತ ಅಕಾಡಮಿಯ ಉತ್ತಮ್ ಕುಮಾರ್ ಕೊಡಿಯಲ್ ಬೈಲ್ ಇವರಿಗೆ ಶಾಸ್ತ್ರೀಯ ಹಾಡುಗಾರಿಕೆಯ ಗುರುಗಳಾಗಿ ಮಾರ್ಗದರ್ಶನ ನೀಡುತ್ತಿದ್ದರು.ಇವರು ಪತ್ನಿ ವೀಣಾ ಮತ್ತು ಮಗ ಹಾಗೂ ಅಪಾರ ಶಿಷ್ಯ ವರ್ಗ, ಅಭಿಮಾನಿ ಬಳಗವನ್ನು ಅಗಲಿದ್ದಾರೆ.

Related Posts

Leave a Reply

Your email address will not be published.