ಅರೆ ಮೊಲದಂತೆ ಇರುವ ಕೋಳಿ ನಿರ್ವಂಶದಂಚಿನ ಕರಾವಳಿ ಕೋಳಿ

ಪ್ರೈರೀ ಚಿಕನ್ ಎಂಬ ಕೋಳಿಯು ಅರೆಬರೆ ಮೊಲದಂತೆ ಕಾಣುವ ವಿಶೇಷ ಜಾತಿಯಾಗಿದ್ದು, ಈಗ ನಿರ್ವಂಶದಂಚಿನಲ್ಲಿವೆ.ಮೊಲದಂತೆ ಅರ್ಧ ದೇಹ, ಮೊಲದಂತೆ ಏರಿಸಬಹುದಾದ ಕಿವಿ, ದೊಡ್ಡ ಮೀನಿನ ಹುರುಪೆಯಂತೆ ಕಾಣುವ ಗರಿಗಳ ಈ ಕೋಳಿಯು ಅಮರಿಕದ ಟೆಕ್ಸಾಸ್, ಲೂಸಿಯಾನಾ ಕರಾವಳಿಯವು. 1,900 ರಲ್ಲಿ 10 ಲಕ್ಷ ಇದ್ದ ಇವುಗಳ ಸಂಖ್ಯೆಯು 1,937 ಕ್ಕೆ8,700 ಕ್ಕೆ ಇಳಿದಿತ್ತು.ಈಗ ನಿರ್ವಂಶದಂಚಿನಲ್ಲಿದೆ.

ಹುಲ್ಲಿನ ಚಿಗುರು, ಬೀಜ, ಕೀಟ ತಿನ್ನುವ ಇವನ್ನು ಕೊಯೋಟ್ ನರಿ, ರಾಕೂನ್ ಕಾಡುಬೆಕ್ಕು, ಹದ್ದು, ದೊಡ್ಡ ಹಾವು ಮತ್ತು ಮನುಷ್ಯರು ಬೇಟೆಯಾಡಿ ತಿನ್ನುತ್ತಾರೆ.ಕೂಡು ಕಾಲದಲ್ಲಿ ಗಂಡು ಕುತ್ತಿಗೆಯ ಬಳಿ ಕಿತ್ತಳೆ ಬಣ್ಣದ ವಿಶೇಷ ಬಲೂನ್ ಊದುತ್ತದೆ. ವೂ ವೂ ಎಂದು ವಿಶೇಷವಾಗಿ ಕೂಗುತ್ತದೆ.
