ಡಾ. ನರೇಶ್ಚಂದ್ ಹೆಗ್ಡೆ ಪರ ಉಡುಪಿಯಲ್ಲಿ ನಟ ಅರವಿಂದ ಬೋಳಾರ್ ಪ್ರಚಾರ
ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ನರೇಶ್ಚಂದ್ ಹೆಗ್ಡೆ ಅವರು ಸ್ಪರ್ಧಿಸುತ್ತಿದ್ದು ಅವರ ಪರವಾಗಿ ಉಡುಪಿಯಲ್ಲಿ ನಟ ಅರವಿಂದ ಬೋಳಾರ್ ಅವರು ಮತಪ್ರಚಾರ ಮಾಡಿದರು.


ಶಿಕ್ಷಕರ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಲೆಂದು ವೈದ್ಯರಾದ ಡಾ. ನರೇಶ್ಚಂದ್ ಹೆಗ್ಡೆ ಅವರು ಸ್ಪರ್ಧಿಸುತ್ತಿದ್ದಾರೆ. ಅವರನ್ನು ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಹಲವಾರು ಮಂದಿ ಪಣತೊಟ್ಟಿದ್ದಾರೆ. ಡಾ. ನರೇಶ್ಚಂದ್ ಹೆಗ್ಡೆ ಅವರ ಪರವಾಗಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರು ಪ್ರಚಾರ ಮಾಡುತ್ತಿದ್ದಾರೆ.


ನಟ ಅರವಿಂದ ಬೋಳಾರ್ ಅವರು, ಉಡುಪಿಯ ಎಮ್ಜಿಎಮ್ ಕಾಲೇಜು, ಜ್ಞಾನಸುಧಾ ಪಿಯು ಕಾಲೇಜು, ಎಮ್ಜೆಸಿ ಪಿಯು ಕಾಲೇಜು, ಟಿಎ ಪೈ ಹೈಸ್ಕೂಲ್, ಶಾರದಾ ರೆಸಿಡೆನ್ಸಿಯಲ್ ಸ್ಕೂಲ್, ವೈಕುಂಠ ಬಾಳಿಗಾ ಲಾ ಕಾಲೇಜು, ಜ್ಞಾನಸುಧಾ ಪ್ರಿ ಯುನಿವರ್ಸಿಟಿ ಕಾಲೇಜು, ಪೂರ್ಣಪ್ರಜ್ಞ ಕಾಲೇಜು, ಒಳಕಾಡು ಹೈಸ್ಕೂಲ್ಗೆ ಭೇಟಿ ನೀಡಿ ಡಾ. ನರೇಶ್ಚಂದ್ ಹೆಗ್ಡೆ ಹೇಬ್ರಿಬೀಡು ಪರವಾಗಿ ಮತಯಾಚನೆ ಮಾಡಿದರು.



















