ಸಿಂಗಿಂಗ್ ಟಿವಿ ರಿಯಾಲಿಟಿ ಶೋ “ಹಾಡು ನೀ ಹಾಡು” ಸೀಸನ್ 1 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ

ಕರಾವಳಿ ಕರ್ನಾಟಕದ ಪುಟಾಣಿ ಹಾಡುಗಾರರಿಗಾಗಿ ಸಜ್ಜಾಗಿರುವ ಹೊಚ್ಚ ಹೊಸ ಸಿಂಗಿಂಗ್ ಟಿವಿ ರಿಯಾಲಿಟಿ ಶೋ “ಹಾಡು ನೀ ಹಾಡು” ಸೀಸನ್ 1 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಉಡುಪಿ ಇಂದ್ರಾಳಿಯ ರಿದ್ಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಸಂಪಾದಕಿ, ಪತ್ರಕರ್ತೆ, ಖ್ಯಾತ ಚಿಂತಕಿ ಡಾ. ಸಂಧ್ಯಾ ಪೈ ಅವರು ಪೋಸ್ಟರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಿರಿಯ ವಯಸ್ಸಿನಲ್ಲಿ ಮಕ್ಕಳ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಬಹಳ ಮುಖ್ಯ, ಜೊತೆಗೆ ಕರಾವಳಿಯಲ್ಲಿ ಹಾಡು ನೀ ಹಾಡು ತಂಡ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಇಂಥಹ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ. ಈ ಕಾರ್ಯಕ್ರಮ ದೇಶ ವಿದೇಶಗಳಲ್ಲಿ ಯಶಸ್ಸಿನ ಕಹಳೆ ಮೊಳಗಿಸಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಹಾಯ ಹಸ್ತ ಲಯನ್ಸ್ ಕ್ಲಬ್ ಚಾರಿಟೇಬಲ್ ಫೌಂಡೇಶನ್ ಮಣಿಪಾಲ್ ಇದರ ಕಾರ್ಯದರ್ಶಿ ಲಯನ್ ಡಾ. ಗಣೇಶ್ ಪೈ, ಹಾಡು ನೀ ಹಾಡು ಕಾರ್ಯಕ್ರಮದ ಮುಖಸ್ಥೆ ಸರಿತಾ ಸಂತೋಷ್, ರಿದ್ಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋ ಮತ್ತು ವಿ4 ನ್ಯೂಸ್ ಉಡುಪಿ ಇದರ ಮುಖ್ಯಸ್ಥರಾದ ಜಯಂತ್ ಐತಾಳ್ ಹಾಗೂ ಇದರ ತಾಂತ್ರಿಕ ಮುಖ್ಯಸ್ಥರಾದ ವಿನಾಯಕ್ ಮಲ್ಯ, ಹಾಡು ನೀ ಹಾಡು ಕಾರ್ಯಕ್ರಮದ ನಿರ್ಣಾಯಕರಲ್ಲಿ ಒಬ್ಬರಾದ ಸುಹಾಸ್ ಕೌಶಿಕ್, ಮೆಂಟರ್ಸ್ ಕೃಪಾ ಪ್ರಸೀದ್, ವಿಜಯ ಸತ್ಯ, ಕಾರ್ಯಕ್ರಮದ ಸಂಯೋಜಕಿಯಾದ ಸೌಜನ್ಯ, ತಂಡದ ಮುಖ್ಯ್ಥ ಸದಸ್ಯರಾದ ಕಾರ್ತಿಕ್, ವಿರಾಜ್, ಗೌತಮ್ ತಲ್ವಾಲ್ಕರ್ ಇನ್ನಿತರು ಉಪಸ್ಥಿತರಿದ್ದರು

Related Posts

Leave a Reply

Your email address will not be published.