“ಅಹಿಂಸಾ ಎನಿಮಲ್ ಕೇರ್” ಟ್ರಿಸ್ಟ್ ಮೂಲಕ ಬೀದಿ ನಾಯಿಗಳ ಆರೈಕೆ

ನಿಯತ್ತಿಗೆ ಮತ್ತೊಂದು ಹೆಸರು ನಾಯಿ.. ಇಷ್ಟೊಂದು ನಿಷ್ಠಾವಂತ ಪ್ರಾಣಿಯನ್ನು ಪ್ರೀತಿಸುವವರು ವಿರಳ.. ಈ ಶ್ವಾನಗಳಿಗೆ ಮನುಷ್ಯನಿಗಿರುವಂಥಹ ಸ್ವಾರ್ಥ, ಮತ್ಸರ, ಆಸೆ, ಆಕಾಂಕ್ಷೆಗಳಿಲ್ಲ, ಅದಕ್ಕೆ ಹೊಟ್ಟೆಗೆ ತಿನ್ನಲು ಹಿಟ್ಟು ಬಿಟ್ಟರೆ ಯಾವುದೇ ಆಸ್ತಿ, ಅಂತಸ್ತು ಬೇಡ… ಒಂದೊಮ್ಮೆ ತಪ್ಪಿಯಾದರೂ ಅದಕ್ಕೆ ಆಹಾರ ನೀಡಿದ್ದೀರಿ ಎಂದಾದರೆ ನಿಮ್ಮನ್ನು ಅದು ಅದರ ಜೀವನ ಪರಿಯಂತ ಮರೆಯೋಲ್ಲ.. ಇಂಥಹ ವಿಶ್ವಾಸ ಭರಿತ ಪ್ರಾಣಿಯನ್ನು ಸಾಕಿ ಸಲಹುತ್ತಿರುವ ಅಪರೂಪದ ವ್ಯಕ್ತಿಯೊಬ್ಬರಿದ್ದಾರೆ ಅವರು ಯಾರೆಂದು… ಈ ವರದಿ ಮೂಲಕ ತೋರಿಸುತ್ತಿದ್ದೇವೆ.

ನಾವು ನಮ್ಮ ಮನೆಯ ಸಾಕುನಾಯಿ ಮರಿ ಹಾಕಿದರೆ.. ಅದು ಸರಿಯಾಗಿ ಅನ್ನ ತಿನ್ನುವ ಮೊದಲೇ ಯಾವುದೇ ಮೂಲಾಜಿ ಇಲ್ಲದೆ ಬೀದಿಪಾಲು ಮಾಡುತ್ತೇವೆ. ಬಳಿಕ ಅದರ ಬಗ್ಗೆ ಚಿಂತಿಸಲೂ ನಮ್ಮಲ್ಲಿ ಸಮಯವಿಲ್ಲ.. ಬೀದಿಗೆ ಬಿದ್ದ ನಾಯಿಮರಿಗಳು ಬದುಕುವುದೇ ವಿರಳ, ಯಾವುದೋ ವಾಹನದಡಿಗೂ..ಇತರೆ ಪ್ರಾಣಿಗಳ ದಾಳಿಗೂ ತುತ್ತಾಗಿ ಪ್ರಾಣ ಕಳೆದುಕೊಳ್ಳುತ್ತಿದೆ. ನಾವು ಮಾನವರಾಗಿದ್ದು ನಮ್ಮಲ್ಲಿ ಇರಲೇ ಬೇಕಾಗಿದ್ದ ಮನುಷ್ಯತ್ವ ಎಲ್ಲಿ ಮರೆಯಾಗಿದೆ.. ಇಂಥಹ ಮನುಕುಲಕ್ಕೆ ಅಪವಾದವೋ ಎಂಬಂತ್ತೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜಗೋಳಿಯ, ವಿರಂಜಯ ಹೆಗ್ಡೆ ಎಂಬ ಎನ್ನ ಜೀವನವನ್ನೇ ಶ್ವಾನ ಸಮೂಹಕ್ಕಾಗಿ ಅರ್ಪಣೆ ಮಾಡಿದ ದೀಮಂತ ವ್ಯಕ್ತಿ ಇವರು. ವಿರಂಜಯ ಹೆಗಡೆ ತನ್ನ ವೈಯಕ್ತಿಕ ಜೀವನವನ್ನು ಬದಿಗೋತ್ತಿ ಶ್ವಾನ ಸೇವೆಯಲ್ಲೇ ಜೀವನ ಸವೆಯುತ್ತಿರುವ ಇವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೆ.

“ಅಹಿಂಸಾ ಎನಿಮಲ್ ಕೇರ್” ಹೆಸರಿನ ಟ್ರಿಸ್ಟ್ ರಚಿಸಿ ಇದರಡಿಯಲ್ಲಿ, ಬೀದಿಯಲ್ಲಿ ಸಿಕ್ಕ ನಾಯಿಮರಿಗಳನ್ನು ತಂದು ಆರೈಕೆ ಮಾಡುತ್ತಾ ಇದೀಗ ಮುನ್ನೂರಕ್ಕೂ ಅಧಿಕ ವಿವಿಧ ತಳಿಯ ನಾಯಿಗಳು ಇವರ ಆರೈಕೆಯಲ್ಲಿದೆ. ಕೆಲವು ನಾಯಿಗಳು ಅಪಘಾತಕ್ಕೆ ತುತ್ತಾಗಿ ಕಾಲುಗಳನ್ನು ಕಳೆದುಕೊಂಡರೆ.. ಕೆಲವೊಂದು ಸೊಂಟ ಮುರಿದುಕೊಂಡಿದೆ. ಕ್ಯಾನ್ಸರ್ ಸಹಿತ ವಿವಿಧ ಮಾರಕ ರೋಗಗಳಿಂದ ಬಳಲುತ್ತಿರುವ ಶ್ವಾನಗಳಿಗೆ ಚಿಕಿತ್ಸೆ ನೀಡುತ್ತಾ.. ಇದರಲ್ಲೇ ಸ್ವರ್ಗ ಸುಖ ಅನುಭವಿಸುತ್ತಿರುವ ಈ ವ್ಯಕ್ತಿಯ ವ್ಯಕ್ತಿತ್ವ ದೇವರಿಗೆ ಪ್ರೀತಿ. ದಿನದ ಎಲ್ಲಾ ಸಮಯವನ್ನು ಶ್ವಾನ ಸಮೂಹದೊಂದಿಗೆ ಕಳೆಯುವ ಇವರುಅವುಗಳ ಹೆಚ್ಚಿನ ಆರೈಕೆಗಾಗಿ ಮೂರುಮಂದಿ ಸಿಬ್ಬಂದಿಗಳನ್ನು ಇರಿಸಿಕೊಂಡಿದ್ದಾರೆ.

ಈ ಮುನ್ನೂರು ಶ್ವಾನಗಳನ್ನು ಸಾಕುವುದೆಂದರೆ ಮಕ್ಕಳಾಟಿಕೆಯೆ… ದಿನವೊಂದಕ್ಕೆ ಆರು ಸಾವಿರ ರೂಪಾಯಿ ಖರ್ಚು ತಗುಲುತ್ತಿದ್ದು ಈ ವೆಚ್ಚವನ್ನು ದಾನಿಗಳು ನೀಡುತ್ತಿರುವ ಅಕ್ಕಿಯಾಗಿರ ಬಹುದು, ನಗದು ರೂಪದಲ್ಲಿ ನೀಡುತ್ತಿರುವುದಾಗಿರ ಬಹುದು, ಅದಲ್ಲದೆ ಶೆಟಲ್ ಕೋರ್ಟ್ ನಿರ್ಮಿಸಿ ಮಕ್ಕಳಿಗೆ ತರಭೇತಿ ನೀಡುತ್ತಿರುವ ಇವರು ಅದರಿಂದ ಬರುವ ಆಧಾಯವನ್ನೂ ಇದಕ್ಕೆ ಬಳಕೆ ಮಾಡುತ್ತಿದ್ದಾರೆ. ವಿಶೇಷವಾಗಿ ಬಹಳಷ್ಟು ಮಂದಿ ಹುಟ್ಟುಹಬ್ಬವನ್ನು ಈ ಅನಾಥ ಬೀದಿ ನಾಯಿಗಳೊಂದಿಗೆ ಆಚರಿಸಿ ಸಂತೋಷ ಪಡುತ್ತಿದ್ದು ಈ ಸಂದರ್ಭ ಮೂರು ಸಾವಿರ ರೂಪಾಯಿಯನ್ನು ಶ್ವಾನಗಳ ಆಹಾರಕ್ಕಾಗಿ ಈ ಸಂಸ್ಥೆಗೆ ನೀಡುತ್ತಿರುವುದು ಗಮರ್ನಾಹ.

ಗೋಶಾಲೆ ನಿರ್ಮಾಣ..
ಆರ್ಥಿಕ ಮುಗ್ಗಟ್ಟು ಬಹಳವಾಗಿ ಕಾಡುತ್ತಿದ್ದರೂ ತಮ್ಮ ವಿಶಾಲ ಹೃದಯವಂತಿಯ ಫಲವಾಗಿಯೋ ಏನೋ.. ಇನ್ನೊಂದು ಬೃಹತ್ ಕಾರ್ಯಕ್ಕೆ ಮುಂದಾಗಿದ್ದು… ಗೋವು ಶಾಲೆಯ ಕಾಮಗಾರಿ ಪ್ರಗತಿಯಲ್ಲದೆ. ಇಂತಹ ಉತ್ತಮ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯ ಬಲ್ಲ ಕಾರ್ಯಕ್ಕೆ ಜನರ ಸಹಾಯ ಹಸ್ತ ಬೇಕಾಗಿದೆ ಎನ್ನುವ ವಿರಂಜಯ ಹೆಗ್ಗಡೆ, ದಯವಿಟ್ಟು ನೀವು ಇಲ್ಲಿನ ನಮ್ಮ ಸೇವೆಯನ್ನು ಕಣ್ಣಾರೆ ಕಂಡು ನಿಮಗೆ ಕೊಡಬೇಕು ಎಂದೆನಿಸಿದರೆ ಮಾತ್ರ ನೀಡಿ ಎನ್ನುತ್ತಾರೆ ಬಿಚ್ಚು ಮನಸ್ಸಿನ ಈ ಕರುಣಾ ಮೂರ್ತಿ ವಿರೂ..

ಇಷ್ಟಾದರೂ ಇವರ ನಿಶ್ವಾರ್ಥ ಸೇವೆಯನ್ನು ಜನ ಗುರುತಿಸಿದ್ದರೂ.. ಸರ್ಕಾರ ಗುರುತಿಸದಿರುವುದು ಖೇಧಕರ ಸಂಗತಿ, ಮುಂದಿನ ದಿನದಲ್ಲಾದರೂ ಸರ್ಕಾರ ಇವರ ಸೇವೆಯನ್ನು ಗುರುತಿಸಿ ಸೇವಾ ಸಂಸ್ಥೆಗೆ ಒಂದಿಷ್ಟು ಅನುದಾನ ನೀಡಿ ಇವರಿಂದ ಮತ್ತಷ್ಟು ಮೂಕ ಪ್ರಾಣಿಗಳ ಸೇವೆ ಮಾಡಲು ಪ್ರೇರೇಪಿಸ ಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.