ತಿಮಿಂಗಲದ ಅಂಬರ್‌ಗ್ರೀಸ್ ಎಂದು ಹೇಳಿ ಮಾರಾಟಕ್ಕೆ ಯತ್ನ : ಮೂವರು ಆರೋಪಿಗಳ ಬಂಧನ

ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್‌ಗ್ರಿಸ್ ಎಂದು ಹೇಳಿ 10 ಲಕ್ಷ ರೂ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ ಘಟನೆ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ.

ಹಳದಿ ಬಣ್ಣದ ಮೇಣದಂತಹ ವಸ್ತುವನ್ನು ತಿಮಿಂಗಲದ ಅಂಬರ್‌ಗ್ರಿಸ್ ಎಂದು ಹೇಳಿ 10ಲಕ್ಷ ರೂ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಶಿವಮೊಗ್ಗ ಗಾಂಧಿಬಜಾರ್‌ನ ನಿರಂಜನ್ ಎಸ್ (26), ಶಿವಮೊಗ್ಗದ ಟ್ಯಾಂಕರ್ ಮಹಲ್‌ನ ಮಿಲನ್ ಮೋನಿಶ್ ಶೆಟ್ಟಿ (27) ಹಾಗೂ ಶಿವಮೊಗ್ಗ ಬಿ.ಎಚ್.ರೋಡ್ ಪೆನ್ಷನ್ ಮೊಹಲ್ಲಾದ ಪೃಥ್ವಿ ಡಾಮಿನಿಕ್ (31) ಎನ್ನುವವರನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದಿದ್ದು ಅವರಿಂದ ಸುಮಾರು 3 ಕೆ.ಜಿ 910 ಗ್ರಾಂ ತೂಕದ ತಿಮಿಂಗಲದ ಅಂಬರ್‌ಗ್ರಿಸ್‌ನಂತಿರುವ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚ್ಚಿಂದ್ರ ಹಾಕೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಟಿ., ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ಉಪನಿರೀಕ್ಷಕ ನಿರಂಜನ್ ಗೌಡ, ಸಿಬ್ಬಂದಿಗಳಾದ ಅಶೋಕ್, ಶ್ರೀನಿವಾಸ್, ಸುಜಿತ್ ಕಾರ್ಯಾಚರಣೆ ನಡೆಸಿದ್ದಾರೆ.ಆರೋಪಿಗಳ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published.