ರೈತರ ಖಾತೆ ನಿರ್ಬಂಧಿಸಲು ಆದೇಶ :ಒಲ್ಲೆ ಎಂದ ಎಕ್ಸ್ ಪೋಸ್ಟ್ ಸಂಸ್ಥೆ
ದಿಲ್ಲಿ : ರೈತರ ದಿಲ್ಲಿ ಚಲೋ ಚಳವಳಿಗೆ ಸಂಬಂಧಿಸಿದಂತೆ ಪೋಸ್ಟ್ ಮಾಡುತ್ತಿರುವ 177 ರೈತರ ಎಕ್ಸ್ ಪೋಸ್ಟ್ ಖಾತೆಗಳನ್ನು ನಿರ್ಬಂಧಿಸುವಂತೆ ಒಕ್ಕೂಟ ಬಿಜೆಪಿ ಸರಕಾರದ ಐಟಿ ಸಚಿವಾಲಯ ಹೇಳಿದ್ದು ಆ ಕೋರಿಕೆಯನ್ನು ಸೋಶಿಯಲ್ ಮೀಡಿಯಾ ನೆಟ್‌ವರ್ಕ್ ಎಕ್ಸ್ ಪೋಸ್ಟ್ ಸಂಸ್ಥೆ ಮಾನ್ಯ ಮಾಡಿಲ್ಲ.
ಹಿಂದಿನ ಟ್ವಿಟರ್ ಎಕ್ಸ್ ಪೋಸ್ಟ್ ರೂಪ ತಾಳಿದ ಮೇಲೆ ಅದರ ಪೋಸ್ಟ್‌ಗಳು ಹೆಚ್ಚೆಚ್ಚು ಜನಪರ ಹೋರಾಟಗಳ ಪರ ಆಗತೊಡಗಿದೆ ಎನ್ನುವುದು ಕೆಲವರ ಅಂಬೋಣ. ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 177 ಖಾತೆಗಳನ್ನು ನಿಲ್ಲಿಸಲು ಹೇಳಿದ್ದು ಗೊತ್ತಾಗಿದೆ. ಆದರೆ ಅದಕ್ಕೆ ಎಕ್ಸ್ ಪೋಸ್ಟ್‌ನವರು ನಾವು ಅಭಿವ್ಯಕ್ತಿ ಸ್ವಾತಂತ್ರ್ಯ ತಡೆಯಲು ಬಯಸುವುದಿಲ್ಲ. ನೀವೂ ಅದನ್ನು ಮನ್ನಿಸಬೇಕು ಎಂದು ಸರಕಾರಕ್ಕೆ ಪೋಸ್ಟ್ ಮೂಲಕವೇ ತಿಳಿಸಿದ್ದಾರೆ.