ತಂದೂರ್ ರೆಸ್ಟೋರೆಂಟ್ ನ ಮಾಲಕರಾದ ಜಿ. ಆನಂದ್ ರಾಯ ಶೆಣೈ ನಿಧನ
ಮಂಗಳೂರಿನ ಪ್ರಸಿದ್ಧ ತಂದೂರ್ ರೆಸ್ಟೋರೆಂಟ್‍ನ ಮಾಲಕರಾದ ಜಿ. ಆನಂದ್ ರಾಯ ಶೆಣೈ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ಪ್ರಾಯವಾಗಿತ್ತು. ಮಂಗಳೂರಿನ ಗುರುಪುರದವರಾದ ಇವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಮನ್ನಣೆ ಗಳಿಸಿದ್ದರು. ಇವರು ಪತ್ನಿ ಸುಜಾತ ಆನಂದ ರಾಯಿ, ಪುತ್ರ ವರದರಾಜ್ ಶೆಣೈ, ಪುತ್ರಿ ಶಾರದಾ ದಿಲೀಪ್ ಆಚಾರ್ಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.