ದೇರಳಕಟ್ಟೆ: ನಿಟ್ಟೆ ಇಮೇಜಿಂಗ್ ಟೆಕ್ನಾಲಜಿಯ 3ನೇ ರಾಷ್ಟ್ರೀಯ ಸಮ್ಮೇಳನ: ಎನ್‌ಸಿಎನ್‌ಐಟಿ-2024

ದೇರಳಕಟ್ಟೆ: ನಿಟ್ಟೆ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಆಂಡ್ ರೇಡಿಯಾಲಜಿ ವಿಭಾಗದ ಆಶ್ರಯದಲ್ಲಿ ಎನ್‌ಸಿಎನ್ ಐಟಿ-2024 ನಿಟ್ಟೆ ಇಮೇಜಿಂಗ್ ಟೆಕ್ನಾಲಜಿ ಇದರ ಮೂರನೇ ರಾಷ್ಟ್ರೀಯ ಸಮ್ಮೇಳನ ಕ್ಷೇಮ ಆಡಿಟೋರಿಯಂನಲ್ಲಿ ನಡೆಯಿತು.

ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿ.ವಿ.ಯ ಉಪಕುಲಾಧಿಪತಿ  ವಿಶಾಲ್ ಹೆಗ್ಡೆ ಎನ್ ಸಿ ಎನ್ ಐಟಿ 2024  ನಿಟ್ಟೆ ಇಮೇಜಿಂಗ್ ಟೆಕ್ನಾಲಜಿ ಇದರ ಮೂರನೇ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು ಸಮ್ಮೇಳನಗಳ ಮೂಲಕ ಹೆಚ್ಚು ಜನರ ಭಾಗವಹಿಸುವಿಕೆಯಿಂದ ಪರಸ್ಪರ ಜ್ಞಾನವಿನಿಮಯ ಸಾಧ್ಯ. ಪರಿಣತರ ಕಾರ್ಯಗಾರದ ಜೊತೆಗೆ ಸಮ್ಮೇಳನದಲ್ಲಿ 120 ವರದಿಗಳ ಮಂಡನೆಯಾಗಲಿದ್ದು, ಭಾಗವಹಿಸುವ ಎಲ್ಲರಿಗೂ ಔದ್ಯೋಗಿಕ ಕ್ಷೇತ್ರದ ಜ್ಞಾನ ವೃದ್ಧಿ ಸಾಧ್ಯ.

ಸಮ್ಮೇಳನದಲ್ಲಿ  ದೇಶದ ವಿವಿಧ ಕಾಲೇಜುಗಳ 900 ಮಂದಿ ಭಾಗವಹಿಸಿದ್ದು,   ಜ್ಞಾನವಿನಿಮಯದ ಜೊತೆಗೆ ಉತ್ತಮ ವಾತಾವರಣ ನೀಡಲಿದೆ.ಕಳೆದ 40 ವರ್ಷಗಳಿಂದ ಶಿಕ್ಷಣದೊಂದಿಗೆ ಪ್ರಯಾಣ ನಡೆಸುತ್ತಿರುವ ನಿಟ್ಟೆ ಸಂಸ್ಥೆ, ವೈದ್ಯಕೀಯ ಲೋಕಕ್ಕೆ ಪಾದಾರ್ಪಣೆ ನಡೆಸಿ ಗ್ರಾಮೀಣ ಭಾಗದಲ್ಲಿ 1200 ಹಾಸಿಗೆಯುಳ್ಳ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ , ವೈದ್ಯಕೀಯ ಕಾಲೇಜು, ನಾಲ್ಕು ಜಿಲ್ಲೆಗಳಲ್ಲಿ 22 ಹೆಲ್ತ್ ಸೆಂಟರ್ ಗಳು  ಕಾರ್ಯಾಚರಣೆ ನಡೆಸುತ್ತಿದೆ. ಉತ್ತಮ ಗುಣಮಟ್ಟದ ತಾಂತ್ರಿಕ ಚಿಕಿತ್ಸೆಯನ್ನು ಬಾಗಿಲಿಗೆ ತಲುಪಿಸುವ ಕಾರ್ಯಗಳಲ್ಲಿ ಸಂಸ್ಥೆಯಿದೆ ಎಂದರು.

ನಿಟ್ಟೆ ವೈದ್ಯಕೀಯ ಅಕಾಡೆಮಿಯ ಡೀನ್ ಡಾ. ಜೆ.ಪಿ ಶೆಟ್ಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭ ಐಎಸ್ ಆರ್ ಟಿ ನ್ಯಾಷನಲ್ ಕಾರ್ಡಿನೇಟರ್ ಕಮಾಂಡರ್ ಡಾ. ಡೇನಿಯಲ್ ಕೆ.ಜೆ, ಡಾ.ಯು.ರಘುರಾಜ್, ಡಾ.ಎಸ್.ಪನೀರ್ ಸೆಲ್ವಂ, ಡಾ. ಶಶಿಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.