“ಅಪರಾಧಿ ನಾನಲ್ಲ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಎಸ್‍ಎಲ್‍ವಿ ಕಲರ್ಸ್ ಬ್ಯಾನರ್‍ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಪರಾಧಿ ನಾನಲ್ಲ ಚಿತ್ರದ ಫಸ್ಟ್ ಲುಕ್ “ಅಪರಾಧಿ ನಾನಲ್ಲ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ಬಿಡುಗಡೆ ಕಾರ್ಯಕ್ರಮ ಮೈಸೂರಿನ ಚಾಮುಂಡಿಬೆಟ್ಟದ ತಾಯಿ ಚಾಮುಂಡೇಶ್ವರಿಯ ಸನ್ನಿಧಾನದಲ್ಲಿ ನಡೆಯಿತು. ಮುತಾಲಮಡ ಸ್ನೇಹ ಚಾರಿಟೇಬಲ್ ಟ್ರಸ್ಟ್ ನ ಸುನಿಲ್ ದಾಸ್ ಸ್ವಾಮೀಜಿ ಪೆÇೀಸ್ಟರ್ ಬಿಡುಗಡೆಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಪ್ರಶಾಂತ್ ಆಳ್ವ ಕಲ್ಲಡ್ಕ ಇವರು ನಿರ್ದೇಶಿಸಿ, ಚಿತ್ರಕಥೆ ಬರೆದ ಈ ಸಿನಿಮಾವು ದಿವಕರದಾಸ್ ನೇರ್ಲಾಜೆ, ಅಜಿತ್ ಚೌಟ ದೇವಸ್ಯ, ಎಸ್ ಕೊಟ್ಟಾರಿ, ಜಿ ಶೆಟ್ಟಿ, ಪ್ರಶಾಂತ್ ಶೆಟ್ಟಿ, ವಿನೋದ್ ಶೆಟ್ಟಿ ಇವರ ನಿರ್ಮಾಣದಲ್ಲಿ , ಸಂತೋಷ್ ಶೆಟ್ಟಿ ಕುಂಬ್ಳೆ ಹಾಗೂ ರಾಮ್‍ದಾಸ್ ಶೆಟ್ಟಿ ವಿಟ್ಲ ಇವರ ಕಾರ್ಯಕಾರಿ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬಂದಿದೆ.

ಮಣಿ ಕಾರ್ತಿಕೇಯ ಇವರ ಸಂಭಾಷಣೆ ಮತ್ತು ಸಹನಿರ್ದೇಶನಲ್ಲಿ ಮೂದಿಬಂದ ಈ ಚಿತ್ರಕ್ಕೆ ಸಂದೀಪ್ ಬೆದ್ರ ಇವರು ಸಹನಿರ್ದೇಶನ ಮಾಡಿದ್ದಾರೆ.ವೈ. ಬಿ.ಆರ್ ಮನು ಇವರ ಅಧ್ಭುತ ಕ್ಯಾಮೆರಾ ಕೈಚಳಕದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಸುಜಿತ್ ನಾಯ್ಕ ಸಂಕಲನ ಸಂಕಲನದಲ್ಲಿ ಈ ಚಿತ್ರವು ತೆರೆಕಾಣಲಿದೆ. ಶಿನೋಯ್ ಜೋಸೆಫ್, ಸಂದೀಪ್ ಇವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದ ಹಾಡುಗಳಿಗಂತೂ ಸಿನಿ ಸಂಗೀತ ಪ್ರಿಯರು ಕಾದು ಕುಳಿತಿದ್ದಾರೆ.

ಕರಾವಳಿ ಸೇರಿದಂತೆ ಸುತ್ತಮುತ್ತಲಿನ ಹಲವು ಪರಿಸರದಲ್ಲಿ ಚಿತ್ರೀಕರಣಗೊಂಡ ಈ ಸಿನಿಮಾದಲ್ಲಿ ಕೋಸ್ಟಲ್‍ವುಡ್‍ನ ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್, ರಂಗಭೂಮಿ- ಸಿನಿಮಾ ಹಾಸ್ಯ ನಟ ಕುಸಲ್ದರಸೆ ನವೀನ್ ಡಿ. ಪಡೀಲ್, ಅನೂಪ್ ಸಾಗರ್, ಪ್ರಮೋದ್ ಶೆಟ್ಟಿ, ದಿನೇಶ್ ಮಂಗಳೂರು, ನೀತು ಶೆಟ್ಟಿ, ಜ್ಯೋತಿ ರೈ, ಅಮೃತಾ ಮೂರ್ತಿ, ತಿಮ್ಮಪ್ಪ ಕುಲಾಲ್, ಅರ್ಜುನ್ ಕಜೆ, ಪ್ರತೀಕ್ ಶೆಟ್ಟಿ ಹಾಗೂ ಹೊಸ ಪರಿಚಯವಾಗಿ ಸ್ರುಶಾ ಸಾಮಾನಿ, ಇವರು ಕಾಣಿಸಿಕೊಳ್ಳಲಿದ್ದು, ಇನ್ನು ಅನೇಕ ಹೊಸ ಕಲಾವಿದರು ಈ ಚಿತ್ರದಲ್ಲಿ ಮಿಂಚಲಿದ್ದಾರೆ.

ಪೆÇೀಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸುಧಾ ದೇವಿ, ಸಂತೋಷ್ ಕುಮಾರ್ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ದೇವಿಪ್ರಸಾದ್ ಪಾಲ್ಗೊಂಡು ಚಿತ್ರ ತಂಡಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಎಸ್ ಎಲ್ ವಿ ಸಂಸ್ಥೆಯ ಚೇತನ್, ಮಂಜುನಾಥ್, ಗಿರೀಶ್ ಉಪಸ್ಥಿತರಿದ್ದರು. ನವರಾತ್ರಿಯ ಮೊದಲ ದಿನ ಇಂದು ಬಿಡುಗಡೆಗೊಂಡ “ಅಪರಾಧಿ ನಾನಲ್ಲ” ಸಿನಿಮಾದ ಫಸ್ಟ್ಲುಕ್ ಪೋಸ್ಟರ್ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತಿದ್ದು.. ಸಿನಿಮಾ ಬಿಡಿಗಡೆಗಾಗಿ ಸಿನಿಪ್ರಿಯರು ಫುಲ್ ವೈಟಿಂಗ್‍ನಲ್ಲಿದ್ದಾರೆ.