ಉಡುಪಿಯ ಇನ್ಸ್ ಪಾಯರ್ ನೀಟ್ ಅಕಾಡೆಮಿಯಲ್ಲಿ ಜೂಲೈ 1 ರಿಂದ ತರಗತಿಗಳು ಪ್ರಾರಂಭ

ಉಡುಪಿ : ನೀಟ್, ಸಿಇಟಿ ಮತ್ತು ಜೆಇಇ ಕೋರ್ಸ್ಗಳ ಅತ್ಯುತ್ತಮ ತರಬೇತಿಯನ್ನು ನೀಡುವ ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಕಾಪೌಂಡ್‌ನಲ್ಲಿರುವ ನೂತನವಾಗಿ ಆರಂಭಗೊಂಡ ‘ಇನ್ಸ್ ಪಾಯರ್ ನೀಟ್ ಅಕಾಡೆಮಿ’ಯಲ್ಲಿ ತರಗತಿಗಳು ಜುಲೈ 01, 2023 ರಂದು ಪ್ರಾರಂಭವಾಗಲಿದೆ. ಇಲ್ಲಿ ನೀಟ್ ದೀರ್ಘಾವಧಿಯ ಕೋರ್ಸ್ಗಳು ನೀಟ್, ಸಿಇಟಿ, ಜೆಇಇ ನಿಯಮಿತ ವಾರಾಂತ್ಯದ ಬ್ಯಾಚ್ ಲಭ್ಯವಿದೆ. ಕರ್ನಾಟಕ ಮತ್ತು ಹೊಸದಿಲ್ಲಿಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ 16 ವರ್ಷಗಳ ಕಾಲ ಬೋಧನಾ ಅನುಭವ ಹೊಂದಿರುವ, ಪ್ರಾಂಶುಪಾಲರಾಗಿ 5 ವರ್ಷಕ್ಕೂ ಹೆಚ್ಚು ಕಾಲ ಸಂಸ್ಥೆಯನ್ನು ಮುನ್ನಡೆಸಿದ ಕೌಶಲವುಳ್ಳ ಜೀವಶಾಸ್ತ್ರ ಮತ್ತು ನೀಟ್ ತಜ್ಞರಾದ ಅನೀಶ್ ಥಾಮಸ್ ಅವರು ಇನ್ಸ್ ಪಾಯರ್ ಸಂಸ್ಥಾಪಕರಾಗಿದ್ದು, ಇದೀಗ ಇವರ ಮಾರ್ಗದರ್ಶನದಲ್ಲಿ ಹಾಗೂ ಇತರೆ ಅನುಭವಿ ತರಬೇತುದಾರರಿಂದ ಸಕಲ ಕೋರ್ಸ್ಗಳ ಸಂಪೂರ್ಣ ತರಬೇತಿಯನ್ನು ನೀಡಲಾಗುತ್ತದೆ. ಕೈಗೆಟಕುವ ದರದಲ್ಲಿ ಶುಲ್ಕ ಹೊಂದಿದ್ದು, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ವೈಯಕ್ತಿಕ ನಿಗಾ, ಖಾತರಿ ಫಲಿತಾಂಶ ನೀಡುವ ಧ್ಯೇಯ ಹೊಂದಿದೆ. ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪ್ರತಿದಿನ ಮತ್ತು ವಾರಕೊಮ್ಮೆ ಮಾಕ್ ಟೆಸ್ಟ್ ನಡೆಸಲಾಗುವುದು ಹಾಗೂ ಕೋರ್ಸ್ಗೆ ಸಂಬಂಧಪಟ್ಟ ಸಾಮಾಗ್ರಿಗಳನ್ನು ಸಂಸ್ಥೆಯಿಂದಲೇ ವಿದ್ಯಾರ್ಥಿಗಳಿಗೆ ಒದಿಗಿಸಲಾಗುತ್ತದೆ. ಇನ್ಸ್ ಪಾಯರ್ ನೀಟ್ ಅಕಾಡೆಮಿಯ ವಿಶೇಷವೆಂಬಂತೆ ದೇಶ ಮತ್ತು ವಿದೇಶಗಳಿಂದ ಸಂದರ್ಶಕ ಅಧ್ಯಾಪಕರು ತರಬೇತಿಯನ್ನು ನೀಡಲಿದ್ದಾರೆ. ಆಸಕ್ತಿಯುಳ್ಳವರು ಪ್ರವೇಶಾತಿಯನ್ನು ಪಡೆಯಲು ಮತ್ತು ಹೆಚ್ಚಿನ ಮಾಹಿತಿಗಾಗಿ INSPIRENEETACADEMY.COM ಭೇಟಿ ನೀಡಿ ಅಥವಾ 8088853872 ಸಂಪರ್ಕಿಸಿ.

