Home Articles posted by v4news (Page 19)

ಸುರತ್ಕಲ್ ಪರಿಸರಕ್ಕೆ ವೀರ ಸಾವರ್ಕರ್ ಹೆಸರು ಇಡುವುದರಲ್ಲಿ ತಪ್ಪೇನಿದೆ : ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ

ಸುರತ್ಕಲ್ ಪರಿಸರಕ್ಕೆ ವೀರಾ ಸಾವರ್ಕರ್ ಹೆಸರಿಡುವ ವಿಚಾರ ಬಗ್ಗೆ ಕಾಂಗ್ರೆಸ್ ಇತರ ಪಕ್ಷಗಳಿಂದ ವಿರೋಧ ಪ್ರತಿಭಟನೆ ವ್ಯಕ್ತವಾಗಿದೆ. ವೀರ ಸಾವರ್ಕರ್ ಹೆಸರು ಇಡುವುದರಲ್ಲಿ ತಪ್ಪೇನಿದೆ. ಅವ್ರೇನು ದೇಶ ದ್ರೋಹಿ ಅಲ್ಲ …ದುರಾದೃಷ್ಟ ಅವರನ್ನು ದೇಶ ದ್ರೋಹಿ ಎಂದು ಬಿಂಬಿಸುತ್ತಾರೆ. ದೇಶದಲ್ಲಿ ಅನೇಕ ಕಡೆ ವಿದೇಶಿಯರ ಹೆಸರಿದೆ ಅದಕ್ಕೆ ಯಾರೂ ವಿರೋಧ ವ್ಯಕ್ತ

ಬಲ್ಲಾಳ್ ಭಾಗ್‍ನಲ್ಲಿ ಹಿಂದೂಗಳ ಮೇಲೆ ಹಲ್ಲೆ ಪ್ರಕರಣ : ಆರೋಪಿಗಳನ್ನ ಬಂಧಿಸುವಂತೆ ರಕ್ಷಿತ್ ಕೊಟ್ಟಾರಿ ಆಗ್ರಹ

ಬಲ್ಲಾಳ್ ಭಾಗ್‍ನಲ್ಲಿ ಹಿಂದೂಗಳ ಮೇಲೆ ಅನ್ಯಧರ್ಮದವರಿಂದ ನಡೆದಿರುವ ದೌರ್ಜನ್ಯದ ಬಗ್ಗೆ ಕೂಲಂಕುಷವಾಗಿ ಮತ್ತು ಪಾರದರ್ಶಕವಾಗಿ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುವಂತೆ ಬಲ್ಲಾಳ್ ಭಾಗ್ ಫ್ರೆಂಡ್ಸ್‍ನ ರಕ್ಷಿತ್ ಕೊಟ್ಟಾರಿ ಅವರು ಆಗ್ರಹಿಸಿದ್ದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಲ್ಲಾಳ್ ಭಾಗ್ ಪರಿಸರದ ಸುತ್ತಮುತ್ತ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸೇವೆ

ಕಡಬ ತಾಲೂಕು ಯುವಜನ ಒಕ್ಕೂಟದ ಪದಗ್ರಹಣ

ಕಡಬ: ನಮ್ಮದು ಅತೀ ಹೆಚ್ಚು ಸಂಖ್ಯೆಯಲ್ಲಿ ಯುವಜನರನ್ನು ಹೊಂದಿರುವ ದೇಶ. ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಪ್ರಮುಖವಾದುದು. ಆದುದರಿಂದ ಯುವಜನರು ದೇಶಪ್ರೇಮವನ್ನು ಮೈಗೂಡಿಸಿಕೊಂಡು ಸಂಘಟನಾತ್ಮಕವಾಗಿ ಬಲಗೊಳ್ಳಬೇಕು ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ನುಡಿದರು. ಅವರು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಕಡಬ ತಾಲೂಕು ಯುವಜನ ಒಕ್ಕೂಟದ ಪದಾದಿಕಾರಿಗಳ ಪದಗ್ರಹಣ ಸಮಾರಂಭವನ್ನು

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ : ರಾಜು ಹೊಸ್ಮಠ ವಿರುದ್ದ ಪೊಕ್ಸೋ ಪ್ರಕರಣ

ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಅಂಬೇಡ್ಕರ್‌ ಅಪತ್‌ ಬಾಂಧವ ಟ್ರಸ್ಟ್‌ ನ ಅಧ್ಯಕ್ಷನ ವಿರುದ್ದ ನ .7ರಂದು ಪೊಕ್ಸೋ ಪ್ರಕರಣ ದಾಖಲಾಗಿದೆ. ರಾಜು ಹೊಸ್ಮಠ ಆರೋಪಿಯಾಗಿದ್ದು ಈತನ ವಿರುದ್ದ ಪುತ್ತೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತ: ಕೌಡಿಚ್ಚಾರ್‌ ನಿವಾಸಿ ಸದ್ಯ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಸಂತ್ರಸ್ತೆಯ ಕುಟುಂಬವೂ ವಾಸಿಸುತಿದೆ. ಸಂತ್ರಸ್ತೆಗೆ ಆರೋಪಿಯ ಪರಿಚಯವೂ 2019 ರಲ್ಲಿ ಆಗಿತ್ತು ಎಂದು

ಇಂದಿನಿಂದ ಪೂರ್ವ ಪ್ರಾಥಮಿಕ, ಅಂಗನವಾಡಿ ಆರಂಭ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ಪೂರ್ವ ಪ್ರಾಥಮಿಕ ತರಗತಿಗಳು ಮತ್ತು ಅಂಗನವಾಡಿಗಳು ಆರಂಭವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳ ಕಲರವ ಮನೆಮಾಡಿದೆ. ಇಂದಿನಿಂದ ಅಂಗನವಾಡಿ, ಎಲ್‍ಕೆಜಿ ಮತ್ತು ಯುಕೆಜಿ ತರಗತಿ ಆರಂಭವಾಗಿದ್ದು ಮಕ್ಕಳ ಶಾಲೆಗಳ ಕಡೆ ಮುಖ ಮಾಡಿದ್ದಾರೆ. ಅಂಗನವಾಡಿ ಕೇಂದ್ರಗಳನ್ನು ಮೊದಲಿನ ಹಂತದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ತೆರೆಯಬಹುದಾಗಿದೆ. ಮುಂದಿನ ಸೂಚನೆವರೆಗೆ ಪೂರಕ ಪೌಷ್ಟಿಕ ಆಹಾರವನ್ನು

ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ

ವಿಜಯಪುರ ನಗರದ ಗಾಂಧಿ ಚೌಕ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಖತರ್ನಾಕ್ ಬೈಕ್ ಕಳ್ಳರನ್ನು ಬಂಧಿಸಿ ಅವರಿಂದ 36 ಬೈಕ್‌ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯಪುರ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಅವರು ಒಟ್ಟು 36 ವಿವಿಧ ಕಂಪನಿಯ ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ, ಬೈಕ್ ಕಳ್ಳತನ ನಡೆಸುತ್ತಿದ್ದ ತೌಸೀಫ್ ಮಹಿಬೂಬ ಕಲಾದಗಿ, ಸಮೀರ

94ನೇ ವಸಂತಕ್ಕೆ ಕಾಲಿಟ್ಟ ಎಲ್‌.ಕೆ ಅಡ್ವಾಣಿ: ಮೋದಿ ಸೇರಿದಂತೆ ಗಣ್ಯರ ಶುಭಾಶಯ

ನವದೆಹಲಿ: ಮಾಜಿ ಉಪಪ್ರಧಾನಿ, ಬಿಜೆಪಿಯ ಭೀಷ್ಮ ಎಂದೇ ಪರಿಗಣಿಸಲ್ಪಟ್ಟಿರುವ ಎಲ್ ಕೆ ಅಡ್ವಾಣಿ ಇಂದು 94ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರುಗಳಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ ಮತ್ತು ಅವರಿಂದ ಆಶೀರ್ವಾದ ಪಡೆದು ಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ

ಅಕ್ಷರ ಸಂತ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

 ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಭಾರತ ಸರಕಾರ ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ `ಪದ್ಮಶ್ರೀ’ ಇಂದು ಪ್ರದಾನ ಮಾಡಲಾಯಿತು.ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ ಜರುಗಿದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹರೇಕಳ ಹಾಜಬ್ಬರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ತಮ್ಮ ಎಂದಿನ ಸರಳ ಉಡುಗೆಯಲ್ಲಿ ವೇದಿಕೆಯೇರಿದ ಹಾಜಬ್ಬ ಪ್ರಶಸ್ತಿ ಸ್ವೀಕರಿಸಿದರು. ಬಡಮಕ್ಕಳಿಗಾಗಿ ಸ್ವಂತ ದುಡಿಮೆಯಲ್ಲಿ ಶಾಲೆ ನಿರ್ಮಿಸಿದ, ನೂರಾರು

ಯಶಸ್ವಿ `ಆಪರೇಷನ್ ಚೀತಾ’ ಕಾರ್ಯಾಚರಣೆ

ಕಡಬ : ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಅವರ ಮನೆ ಬಳಿಯ ಬಾವಿಯ ದಂಡೆಯ ಮೇಲೆ ಕುಳಿತಿದ್ದ ಕೋಳಿಯನ್ನು ಬೇಟೆಯಾಡಲು ಹೋದ ಚಿರತೆಯೊಂದು ನೀರು ತುಂಬಿದ ಬಾವಿಗೆ ಬಿದ್ದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ . ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬಂದಿಗಳು ಸುಳ್ಯ ಎಸಿಎಫ್ ಪ್ರವೀಣ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸತತ 3 ತಾಸುಗಳ ಕಾರ್ಯಾಚರಣೆ ನಡೆಸಿಚಿರತೆಯನ್ನು ಸುರಕ್ಷಿತವಾಗಿ ಬಾವಿಯಿಂದ ಮೇಲೆತ್ತುವ ಯಶಸ್ವಿಯಾಗಿದ್ದಾರೆ . ಬಾವಿಯ

ಉಳ್ಳಾಲ ದರ್ಗಾದಲ್ಲಿ 21ನೇ ಉರೂಸ್

ದಕ್ಷಿಣ ಭಾರತದ ಅಜ್ಮಿರ್ ಎಂದೇ ಪ್ರಸಿದ್ಧಗೊಂಡ ಇತಿಹಾಸ ಪ್ರಸಿದ್ಧ ಉಳ್ಳಾಲದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಖುತುಬುಝಮಾನ್ ಸಯ್ಯದ್ ಶರೀಫುಲ್ ಮದನಿ ರವರ ಹೆಸರಲ್ಲಿ 21ನೇ ಉರೂಸ್ ಸಮಾರಂಭ ಡಿಸೆಂಬರ್ 23 ರಂದು ನಡೆಯಲಿದ್ದು, ಇದರ ಪ್ರಚಾರ ಸಮಾರಂಭ ಉದ್ಘಾಟನೆ ನಡೆಯಿತು. ಈ ಸಂದರ್ಭದಲ್ಲಿ ಜನತಾದಳ ರಾಷ್ಟ್ರೀಯ ಕಾರ್ಯಾಧ್ಯಕ್ಷರೂ, ವಿಧಾನ ಪರಿಷತ್ ಶಾಸಕರಾದ ಬಿ. ಎಂ ಫಾರೂಕ್ ರವರು ಹಾಗೂ ಶಾಸಕರಾದ ಯು. ಟಿ ಖಾದರ್ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು, ಈ