ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆಯಂದು ಒಳಗಾದ ದೇವರ ಬಲಿ ಉತ್ಸವ ವಾಡಿಕೆಯಂತೆ ದೀಪಾವಳಿ ಅಮವಾಸ್ಯೆ ದಿನದಂದು ಸಂಪ್ರದಾಯದಂತೆ ಆರಂಭಗೊಂಡಿದೆ. ಕಳೆದ ರಾತ್ರಿ ಶ್ರೀ ದೇವರ ಬಲಿ ಹೊರಟು ದೀಪಾವಳಿ ಉತ್ಸವ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ಪ್ರಧಾನ ಅರ್ಚಕ ವೇದ.ಮೂ.ವಿ.ಎಸ್.ಭಟ್ ಮತ್ತು ವೇ.ಮೂ. ವಸಂತ
ಮಂಗಳೂರು ಮಹಾನಗರ ಪಾಲಿಕೆಯ ಪದವು ಪಶ್ಚಿಮ ವಾರ್ಡಿನ ಬೊಲ್ಯ ರಸ್ತೆಗೆ 1 ಕೋಟಿ ವೆಚ್ಚದಲ್ಲಿ ಕಾಂಕ್ರೀಟೀಕರಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು. ಆ ಬಳಿಕ ಮಾತನಾಡಿದ ಅವರು, ಬೊಲ್ಯ ಪರಿಸರದ ಜನರ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ 1 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಭಾಗದಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯ
ಹಿರಿಯ ರಾಜಕೀಯ, ಸಾಮಾಜಿಕ ನೇತಾರ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಸದಾನಂದ ಮಲ್ಲಿ (82) ಬಂಟ್ವಾಳದ ಪಲ್ಲಮಜಲುವಿನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿ, ಪುತ್ರ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಜ್ಯದ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಸುದೀರ್ಘ ಅವಧಿಗೆ ಆಗಿನ ಬಂಟ್ವಾಳ ಪಟ್ಟಣ ಪಂಚಾಯತ್ ಈಗಿನ ಪುರಸಭೆಯ ಸದಸ್ಯರಾಗಿದ್ದ ಅವರು ಬಂಟ್ವಾಳ ಪಟ್ಟಣ ಪಂಚಾಯತ್
ಬಹುನಿರೀಕ್ಷೆಯ ದಿಲ್ ರಂಗ್-2 ತುಳು ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ದುಬೈಯಲ್ಲಿ ನಡೆಯಿತು. ದುಬೈಯ ಕಲಾ ಪೋಷಕ ಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ ಅವರು ಪೋಸ್ಟರನ್ನು ಬಿಡುಗಡೆಗೊಳಿಸಿದರು.v4news ಕ್ರಿಯೇಟಿವ್ ಫಿಲಮ್ಸ್ ಮಂಗಳೂರು ಬ್ಯಾನರಡಿಯಲ್ಲಿ ಅಭಿಷೇಕ್ ರಾವ್ ನಿರ್ದೇಶನದ ಬಹುನಿರೀಕ್ಷಿತ ತುಳು ಚಲನಚಿತ್ರ ದಿಲ್ ರಂಗ್ 2 ಈಗಾಗಲೇ ತೆರೆಗೆ ಬರಲು ಸಜ್ಜಾಗಿದೆ. ಇದರ ಪೋಸ್ಟರ್ ಬಿಡುಗಡೆ ಸಮಾರಂಭವು ದುಬಾಯಿಯಲ್ಲಿ ನಡೆಯಿತು. ದುಬಾಯಿಯ ಕಲಾ ಪೋಷಕ
ಮಂಗಳೂರಿನ ಶಕ್ತಿನಗರದಲ್ಲಿರುವ ಸಾನಿಧ್ಯ ವಸತಿಯುತ ಶಾಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದರು. ಸಾನಿಧ್ಯದಲ್ಲಿ ದೀಪಾವಳಿ ಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಸೇರಿ ಸಂಭ್ರಮದಿಂದ ಆಚರಿಸಲಾಯಿತು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ ಅವರು ವಿಶೇಷ ವಿದ್ಯಾರ್ಥಿನಿ ಮಾನ್ಸಿ ಪ್ರಜಾಪತಿ ಹಾಗೂ ಗಣ್ಯರ ಜೊತೆ ಸೇರಿ ಜ್ಯೋತಿ ಬೆಳಗಿಸಿ ದೀಪಾವಳಿ ಹಬ್ಬವನ್ನು ಉದ್ಘಾಟಿಸಿ ಸಂದೇಶ ನೀಡಿದರು. ಮಾತ್ರವಲ್ಲ ವಿಶೇಷ ಮಕ್ಕಳ ಜೊತೆ ಸುಡು
ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ಕಾರ್‌ಸ್ಟ್ರೀಟ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ. ಈ ಕೊಲೆ ದೃಶ್ಯವು ಅಪಾರ್ಟ್ ಮೆಂಟ್ ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೊಲೆಯಾದವರನ್ನು ಕಾರ್‌ಸ್ಟ್ರೀಟ್‌ನ ಮಹಮ್ಮಾಯಿ ದೇವಸ್ಥಾನ ರಸ್ತೆಯಲ್ಲಿರುವ ವೀರ ವೆಂಕಟೇಶ್ ಎಂಬ ಅಪಾರ್ಟ್ ಮೆಂಟ್ ನಿವಾಸಿ ವಿನಾಯಕ ಕಾಮತ್ ಎಂದು ಗುರುತಿಸಲಾಗಿದೆ. ಇವರು ಕರಂಗಲ್ಪಾಡಿಯಲ್ಲಿರುವ ಟ್ರಾವೆಲ್ಸ್ ವೊಂದರಲ್ಲಿ
ಮೂಡುಬಿದಿರೆ : ಅರಮನೆಯ 20 ಎಕ್ರೆ ಜಾಗವನ್ನು ಗೇಣಿಗೆ ಪಡೆದುಕೊಂಡು ಭತ್ತವನ್ನು ಬೆಳೆದು ಇನ್ನೇನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಜೋರಾಗಿ ಬೀಸಿದ ಮಳೆಯಿಂದಾಗಿ ಗದ್ದೆಯಲ್ಲಿ ನೀರು ನಿಂತು ಭತ್ತವೆಲ್ಲಾ ಕೊಳೆತು ನಾಶವಾಗಿ ರೈತರು ಕಂಗಾಲಾದ ಘಟನೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಮಾಂಟ್ರಾಡಿ ಗ್ರಾಮದ ಅರಮನೆ ಬೈಲು ಎಂಬಲ್ಲಿನ ಸ್ಥಳೀಯರಾದ 6 ಜನ ಸೇರಿಕೊಂಡು ಅರಮನೆಗೆ ಸಂಬಂಧಿಸಿದ 20 ಎಕ್ರೆ ಜಾಗವನ್ನು ಗೇಣಿಗೆ ಪಡೆದುಕೊಂಡು ಭತ್ತದ
ಕಡಬ: ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಆಗಮಿಸಿದ ಸಚಿವರು ಶ್ರೀ ದೇವರ ದರುಶನ ಪಡೆದು ಸಂಕಲ್ಪ ನೆರವೇರಿಸಿ ವಿಶೇಷ ಸೇವೆ ಸಮರ್ಪಿಸಿದರು. ಶ್ರೀ ದೇವಳದ ಅರ್ಚಕ ರಾಮಕೃಷ್ಣ ನೂರಿತ್ತಾಯರು ಸಚಿವರಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ
ಪುತ್ತೂರು: ಹಿಂದೂ ಸಮಾಜದ ಶಕ್ತಿಯನ್ನು ವೃದ್ಧಿಸಲು ನಮ್ಮ ಮನಸ್ಸು ಮತ್ತು ಹೃದಯ ಬೆಳಕಾಗಬೇಕು. ಅದಕ್ಕಾಗಿ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ದೀಪದ ಬೆಳಕು ಎಲ್ಲರ ಮನೆ ಮನೆಯಲ್ಲಿ ಬೆಳಗಲಿ. ಮನೆ ದೇವಸ್ಥಾನ ಆಗಲಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಆಹ್ವಾನಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ವಿಭಾಗದ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಉರ್ಲಾಂಡಿ
ದೇಶದಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ. ತೈಲ ಬೆಲೆ ದಿನೇ ದಿನೇ ಏರಿಯಾಗುತ್ತಿದೆ. ನೂರು ದಿನದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು ಆದರೆ ಅವರು ಭರವಸೆ ಹುಸಿಯಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಪಕ್ಷದ ಮುಖಂಡರು ಸಚಿವರು ಬೆಲೆ ಏರಿಕೆ ಸಮಸ್ಯೆ ಇಲ್ಲ. ಇದು ವಿರೋಧ ಪಕ್ಷಗಳ ಅಪಪ್ರಚಾರ ಎಂದು


















