Home Articles posted by v4team (Page 150)

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಗೆ ಮಾನ್ಯ ಡಿಸಿಜಿ ಭೇಟಿ

ದಿನಾಂಕ: 05-10-2023ನೇ ಗುರುವಾರದಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮೇರಿಹಿಲ್ ಮಂಗಳೂರು ಕಛೇರಿಗೆ ಡಾ|| ಅಕ್ಷಯ್ ಕುಮಾರ್ ಎಂ. ಹಾಕೆ , ಐಪಿಎಸ್ ಮಾನ್ಯ ಉಪ ಮಹಾ ಸಮಾದೇಷ್ಟರು, ಗೃಹರಕ್ಷಕದಳ ಹಾಗೂ ಉಪ ನಿರ್ದೇಶಕರು, ಪೌರರಕ್ಷಣೆ, ಕರ್ನಾಟಕ ರಾಜ್ಯ ಬೆಂಗಳೂರು ಇವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಛೇರಿ ಕಡತಗಳನ್ನು ಪರಿಶೀಲಿಸಿದರು. ಕಾಲ ಕಾಲಕ್ಕೆ

ಸುಳ್ಯ :ಕೆವಿಜಿ ಎಂ.ಎಸ್. ರಾಮಕೃಷ್ಣ ಕೊಲೆ ಪ್ರಕರಣ: ಡಾ. ರೇಣುಕಾಪ್ರಸಾದ್ ಗೆ ಜೀವಾವಧಿ ಶಿಕ್ಷೆ

ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಪ್ರೊ.ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರಾಜ್ಯ ಹೈಕೋರ್ಟ್ ತೀರ್ಪು ಪ್ರಕಟಿಸಿದ್ದು, 6 ಆರೋಪಿಗಳ ಪೈಕಿ ಒರ್ವರನ್ನು ಹೊರತುಪಡಿಸಿ ಐದು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೈಕೋರ್ಟ್ ತೀರ್ಪು ನೀಡಿದೆ.ಆಡಳಿತಾಧಿಕಾರಿ ಪ್ರೊ.ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ವಾರದ ಹಿಂದೆ ರದ್ದುಗೊಳಿಸಿದ್ದ

ಅಸೈಗೋಳಿ ಅಭಯ ಆಶ್ರಮದ ವಾಸಿಗಳಿಗೆ ಅನ್ನದಾನ

ಕೋಟೆಕಾರು ಅಯ್ಯಪ್ಪ ಮಂದಿರದ ಗರುಸ್ವಾಮಿ ದಿವಂಗತ ಪ್ರಭಾಕರನ್ ಅವರ ಸ್ಮರಣಾರ್ಥ ವಿಷನ್ ಕುಡ್ಲದ ವತಿಯಿಂದ ಅಸೈಗೋಳಿಯಲ್ಲಿರುವ ಅಭಯಾಶ್ರಮದ ವಾಸಿಗಳಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ವಿಷನ್ ಕುಡ್ಲದ ಅಧ್ಯಕ್ಷರಾದ ಜಿತೇಂದ್ರ, ಕಾರ್ಯದರ್ಶಿ ಸಂತೋಷ್ ಕುಮಾರ್, ಖಜಾಂಜಿ ರಾಮಚಂದ್ರ, ಉದಯ ಕುಮಾರ್, ಪ್ರಸನ್ನ, ಪ್ರವೀಣ್ ಮಯ್ಯ, ಪ್ರದೀಪ್, ಲೈನಲ್, ಅಭಯಾಶ್ರಮದ ಕಾರ್ಯದರ್ಶಿ ರವಿ ಕುಮಾರ್ ರೈ ಅವರು ಉಪಸ್ಥಿತರಿದ್ದರು.

ಮಂಗಳೂರು : ಅಕ್ಟೋಬರ್ 15ರಿಂದ 25ರ ವರೆಗೆ ನಡೆಯಲಿರುವ – ಮಂಗಳೂರು ದಸರಾ-2023

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ-2023 ನವರಾತ್ರಿ ಮಹೋತ್ಸವವು ಅಕ್ಟೋಬರ್ 15ರಿಂದ 25 ರ ವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಎಚ್. ಎಸ್ ಸಾಯಿರಾಂ ಹೇಳಿದರು. ಅವರು ಕುದ್ರೋಳಿ ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ದಸರಾ ಮಹೋತ್ಸವದ ಬಗ್ಗೆ ಮಾಹಿತಿ ನೀಡಿದರು. ಸಮಿತಿಯ ಸದಸ್ಯರಾದ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಷ್ಠಾಪಿಸಿದ ಕುದ್ರೋಳಿ ಕ್ಷೇತ್ರದಲ್ಲಿ

ಮೂಡುಬಿದಿರೆ: ಜನವಸತಿ ಪ್ರದೇಶದಲ್ಲಿ ಹರಿಯುತ್ತಿರುವ ಕೊಳಚೆ ನೀರು, ಧರಣಿ ಕುಳಿತು ಪುರಸಭೆಗೆ ದಿಕ್ಕಾರ ಕೂಗಿದ ರಾಜೇಶ್ ಕಡಲಕೆರೆ

ಕಡಲ ಕೆರೆ ಕೈಗಾರಿಕಾ ಪ್ರದೇಶದಿಂದ ಸಾರ್ವಜನಿಕ ರಸ್ತೆ ಸಾರ್ವಜನಿಕ ಜನ ವಸತಿ ಪ್ರದೇಶಕ್ಕೆ ಕೊಳಚೆ ನೀರು ಬರುತ್ತಿದ್ದು ಸುಮಾರು ಮೂರು ವರ್ಷಗಳಿಂದ ಸತತ ದೂರು ನೀಡಿದ್ದರೂ ಪುರಸಭೆಯು ಕ್ರಮಕೈಗೊಂಡಿಲ್ಲವೆಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ರಾಜೇಶ್ ಕಡಲಕೆರೆ ಅವರು ಪುರಸಭಾ ಕಛೇರಿಯ ಮುಂಭಾಗ ಧರಣಿ ಕುಳಿತು ಪುರಸಭೆಗೆ ಧಿಕ್ಕಾರವನ್ನು ಕೂಗಿದರು. ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಗಳಿಂದ ಹೊರ ಬಿಡುತ್ತಿರುವ ಕೊಳಚೆ ನೀರು ರಸ್ತೆ ಬದಿಯ ಚರಂಡಿಗಳಲ್ಲಿ ಹರಿದು

ಮಂಗಳೂರು: ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ನೀಡಲು ವಿಳಂಬ ಧೋರಣೆ, ಬೀದಿ ಬದಿ ವ್ಯಾಪಾರಿಗಳಿಂದ ಮನಪಾ ಕಚೇರಿಗೆ ಮುತ್ತಿಗೆ

ಬೀದಿ ಬದಿ ವ್ಯಾಪಾರಸ್ಥರ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಮಂಗಳೂರು ಪಾಲಿಕೆಗೆ ಮುತ್ತಿಗೆ ಹಾಕಲಾಯಿತು. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಂದ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. 3 ವರ್ಷಗಳಿಂದ ನಮ್ಮ ಪ್ರಮಾಣ ಪತ್ರವಾಗಲೀ, ಗುರುತಿನ ಚೀಟಿಯನ್ನಾಗಲೀ ನವೀಕರಿಸಿ ನೀಡಿಲ್ಲ ಎಂದು ವ್ಯಾಪಾರಿಗಳು ಆರೋಪಿಸಿದರು. ಬೀದಿ ಬದಿವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಮಹಾ

ಪುತ್ತೂರು: ಶಿವಮೊಗ್ಗ ಘಟನೆ ಬಗ್ಗೆ ರಾಷ್ಟ್ರೀಯ ತನಿಖಾ ತಂಡದಿಂದ ತನಿಖೆಯಾಗಲಿ, ವಿಹಿಂಪ, ಬಜರಂಗದಳ ಆಗ್ರಹ

ಪುತ್ತೂರು: ಶಿವಮೊಗ್ಗದಲ್ಲಿ ಮಿಲಾದ್ ಆಚರಣೆ ಸಂದರ್ಭ ನಡೆದ ದಾಳಿಯನ್ನು ವಿಶ್ವ ಹಿಂದೂ ಪರಿಷತ್, ಬಜರಂಗಳ ತೀವ್ರವಾಗಿ ಖಂಡಿಸುತ್ತದೆ. ಈ ಘಟನೆಯಲ್ಲಿ ಭಾಗಿಯಾದವರನ್ನು ತಕ್ಷಣ ಬಂಧಿಸಿ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ವಿಹಿಂಪ, ಬಜರಂಗದಳ ಆಗ್ರಹಿಸಿದೆ. ಬಜರಂಗಳ ದಕ್ಷಿಣಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಸುದ್ದಿಗೋಷ್ಠಿಯಲ್ಲಿ ಖಂಡನೆ ವ್ಯಕ್ತಪಡಿಸಿ, ಮಿಲಾದ್ ಮೆರವಣಿಗೆ ವೇಳೆ ಅಳವಡಿಸಿದ ಬೃಹತ್ ಕಟೌಟ್‍ಗಳನ್ನು ಪೆÇಲೀಸರು ತೆಗೆಸಿದ್ದಾರೆ. ಇದನ್ನು

ಮಂಗಳೂರು: ಶಿವಮೊಗ್ಗ ಗಲಾಟೆ ವಿಚಾರ, ಕಾಂಗ್ರೆಸ್ ಸರ್ಕಾರ ಮೃದು ಧೋರಣೆಯೇ ಘಟನೆಗೆ ಕಾರಣ-ಶಾಸಕ ಡಾ. ವೈ. ಭರತ್ ಶೆಟ್ಟಿ

ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಕಾಂಗ್ರೆಸ್ ಸರ್ಕಾರದ ಒಂದು ವರ್ಗಕ್ಕೆ ಮೀಸಲಾದ ಮೃದು ನೀತಿಯೇ ಕಾರಣ ಎಂದು ಶಾಸಕ ಡಾ. ಭರತ್ ಶೆಟ್ಟಿ ಆರೋಪ ಮಾಡಿದ್ದಾರೆ. ಸುರತ್ಕಲ್‍ನ ಶಾಸಕ ಕಚೇರಿಯಲ್ಲಿ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದ ವಿವಿಧಡೆ ಕೋಟಿ ಕೋಟಿ ಜನ ಸೇರುವ ಗಣೇಶ ಚತುರ್ಥಿ ಶಾಂತಿಯುತವಾಗಿ ನಡೆದಿದೆ. ಆದರೆ ಮುಸಲ್ಮಾನ ಬಾಂಧವರ ಹಬ್ಬದ ಸಂಭ್ರಮದ ವೇಳೆ ಇಂತಹ

ಬೈಂದೂರು: ವಿಹೆಚ್‍ಪಿ ಬಜರಂಗದಳದಿಂದ ಸರಣಿ ಗೋವುಗಳ ಹತ್ಯೆ ಖಂಡಿಸಿ ಪ್ರತಿಭಟನೆ

ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದಲ್ಲಿ ಗುಂಡೇಟಿನಿಂದ ಬಲಿಯಾದ ಸರಣಿ ಗೋ ಹತ್ಯೆಯನ್ನು ಖಂಡಿಸಿ ಹಾಗೂ ಆರೋಪಿಯಾದ ನರಸಿಂಹ ಕುಲಾಲ್‍ನನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದ ವತಿಯಿಂದ ಪ್ರತಿಭಟನೆ ಕೊಲ್ಲೂರಿನಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿಯಾದ ಶರಣ್ ಪಂಪ್ವೆಲ್ ಅವರು ಸಂತ್ರಸ್ತ ಕುಟುಂಬದ ಮನೆಗೆ ತೆರಳಿ ಸದಾಕಾಲ ವಿಶ್ವ ಹಿಂದು ಪರಿಷತ್ ನಿಮ್ಮೊಂದಿಗೆ

ಮುಂಬೈ: ಅ.7 ಮತ್ತು 8ರಂದು ಬಾಯೋ ಆಮ್ಚೆ ಚೇಡು ಚಿತ್ರ ಪ್ರೀಮಿಯರ್ ಪ್ರದರ್ಶನ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಯಶಸ್ಸುಗಳಿಸಿದ ಬಾಯೋ ಆಮ್ಚೆ ಚೇಡು ಚಿತ್ರ ಇದೀಗ ಮಾಯಾ ನಗರಿ ಮುಂಬೈಯಲ್ಲಿ ಪ್ರಿಮಿಯರ್ ಪ್ರದರ್ಶನಗೊಳ್ಳಲಿದೆ. ಅಕ್ಟೋಬರ್ 7ರಂದು ಡೊಂಬಿವಲಿ, ಮಿರಾಜ್ ಸಿನಿಮಾ ಮಂದಿರದಲ್ಲಿ ಬೆಳಿಗ್ಗೆ 11 ಗಂಟೆಗೆ ಹಾಗೂ ಅಕ್ಟೋಬರ್ 8ರಂದು ಗೋರೆಗಾವ್ ಮಿರಾಜ್ ಸಿನಿಮಾ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಇಳಾ ವಿಟ್ಲಾ ನಾಯಕಿಯಾಗಿ ಅಭಿನಯಿಸರುವ ಚಿತ್ರ ಕೋಲ್ಕತ್ತಾ ಫಿಲಂ ಫಿಸ್ಟಿವಲ್‌ನಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಮುಂಬೈನ