Home Articles posted by v4team (Page 583)

Srinivas University Implemented a new Education model based on NEP 2020:

Mangalore:With the mission of transforming society by creating innovators, Srinivas University, Mangalore, implemented a new higher education model with enhanced skills and research components to produce outstanding graduates at Bachelor’s and Master’s Degree Levels from the academic year 2021-22. This new model is implemented to create employable graduates for industries

ಸರಳ ವಾಸ್ತು ಖ್ಯಾತಿಯ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿಯ ಹತ್ಯೆ

ಸರಳ ವಾಸ್ತು ಖ್ಯಾತಿಯ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಹಾಡಹಗಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಉಣಕಲ್ಲ ಕೆರೆ ಬಳಿಯ ಖಾಸಗಿ ಹೋಟೆಲ್ ನ ಸ್ವಾಗತಕಾರರ ಕೌಂಟರ್ ಬಳಿ ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಗುರೂಜಿ ಮೇಲೆ ಏಕಾಏಕಿ ದಾಳಿ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಚಂದ್ರಶೇಖರ್ ಗುರೂಜಿ ಅವರನ್ನು ಮಾತನಾಡಿಸಿದವರಂತೆ

ತಂದೂರ್ ರೆಸ್ಟೋರೆಂಟ್‍ ನ ಮಾಲಕರಾದ ಜಿ. ಆನಂದ್ ರಾಯ ಶೆಣೈ ನಿಧನ

ಮಂಗಳೂರಿನ ಪ್ರಸಿದ್ಧ ತಂದೂರ್ ರೆಸ್ಟೋರೆಂಟ್‍ನ ಮಾಲಕರಾದ ಜಿ. ಆನಂದ್ ರಾಯ ಶೆಣೈ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ಪ್ರಾಯವಾಗಿತ್ತು. ಮಂಗಳೂರಿನ ಗುರುಪುರದವರಾದ ಇವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಮನ್ನಣೆ ಗಳಿಸಿದ್ದರು. ಇವರು ಪತ್ನಿ ಸುಜಾತ ಆನಂದ ರಾಯಿ, ಪುತ್ರ ವರದರಾಜ್ ಶೆಣೈ, ಪುತ್ರಿ ಶಾರದಾ ದಿಲೀಪ್ ಆಚಾರ್ಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಯುವಕನನ್ನು ಕತ್ತಿಯಿಂದ ಕಡಿದು ಕೊಲೆ : ಕೈಕಂಬದ ತಲಪಾಡಿಯಲ್ಲಿ ನಡೆದ ಘಟನೆ

ಬಂಟ್ವಾಳ: ಯುವಕನೋರ್ವನನ್ನು ಆತನ ಸ್ನೇಹಿತರಿಬ್ಬರು ಸೇರಿಕೊಂಡು ಕತ್ತಿ ಯಿಂದ ಕಡಿದು ಕೊಲೆ ನಡೆಸಿದ ಘಟನೆ ಜುಲೈ 4 ರಂದು ಮಧ್ಯರಾತ್ರಿ ವೇಳೆ ಕೈಕಂಬದ ತಲಪಾಡಿ ಎಂಬಲ್ಲಿ ಮಧ್ಯ ರಾತ್ರಿ ವೇಳೆ ನಡೆದಿದೆ. ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29) ಕೊಲೆಯಾದ ಯುವಕ. ಅತನ ಸ್ನೇಹಿತ ನೌಫಾಲ್ ಮತ್ತು ಇನ್ನೊಬ್ಬ ನ ಹೆಸರು ಸಿಕ್ಕಿಲ್ಲ ಇಬ್ಬರು ಸೇರಿ ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ.ಇವರು ಗಾಂಜ ಗಿರಾಕಿಗಳಾಗಿದ್ದು , ತಲಪಾಡಿ ರಾಷ್ಟ್ರೀಯ ಹೆದ್ದಾರಿ

ಕುಡ್ತಮುಗೇರು ರಸ್ತೆ ಸಂಪೂರ್ಣ ಜಲಾವೃತ: ರಸ್ತೆ ಸಂಚಾರ ಸ್ಥಗಿತ

ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಜಲಾವೃತವಾದ ಘಟನೆ ರಂದು ನಡೆದಿದೆ. ನೀರಿನ ಮಟ್ಟ ಏರಿಕೆಯಾಗುತ್ತಿರು ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ ವಿಟ್ಲ-ಸಾಲೆತ್ತೂರು ರಸ್ತೆಯ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಬದಿಯಲ್ಲಿ ಹರಿಯುತ್ತಿರುವ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಜಲಾವೃತವಾಗಿದೆ. ಇದರಿಂದಾಗಿ ಈ ದಾರಿಯಾಗಿ ವಾಹನ ಸಂಚಾರಕ್ಕೆ

ಭಾರತದ ಅತಿ ಎತ್ತರದ “ಭೀಮಾ” ರೊಬೋಟ್ : ಬಹುಪಯೋಗಿ ರೋಬೋಟ್ ಬಳಕೆಗೆ ಸಿದ್ಧ

ಬೆಂಗಳೂರು, ಜು, 5; ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ನಿಂದ ಭಾರತದ ಅತಿ ಎತ್ತರದ “ಭೀಮಾ” ರೋಬೋಟ್ ಅನ್ನು ಅನಾವರಣಗೊಳಿಸಲಾಗಿದೆ. ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ನ ಸಂಸ್ಥಾಪಕ ಹರ್ಷ ಕಿಕ್ಕೇರಿ ಅವರು ದೇಶೀಯ ರೊಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. “ಭೀಮಾ” 7.7 ಅಡಿ ಎತ್ತರದ ರೋಬೋಟ್ ಆಗಿದ್ದು, ಇದರ ದೇಹಕ್ಕೆ ಎಲ್.ಇ.ಡಿ ತಂತ್ರಜ್ಞಾನದ ಸ್ಪರ್ಷ ನೀಡಲಾಗಿದೆ. ಈ ರೋಬೋಟ್ ಬಹುಪಯೋಗಿಯಾಗಿದ್ದು, ವಿಶೇಷವಾಗಿ ಸ್ವಾಗತಕಾರನ

ಬಾರಿ ಮಳೆಯ ಕಾರಣ ಕಾರ್ಕಳದಲ್ಲಿ ತೋಟಗಳಿಗೆ ನುಗ್ಗಿದ ನೀರು : ಜನರಲ್ಲಿ ಪ್ರವಾಹದ ಭೀತಿ

ಕಾರ್ಕಳ: ಕಾರ್ಕಳ ತಾಲೂಕಿನ ಲ್ಲಿ ಭಾರಿ ಮಳೆ ಸುರಿಯುತಿದ್ದು ಹಲವೆಡೆಗಳಲ್ಲಿ ತೋಟಗಳಿಗೆ ನೀರು ನುಗ್ಗಿದೆ. ಕೆಲವರಿಗೆ ಪ್ರವಾಹ ನೋವು ತಂದರೆ ಇನ್ನು ಕೆಲವರಿಗೆ ಅನುಕೂಲ ವಾದ ಉದಾಹರಣೆಗಳು ಸಾಕ್ಷಿಕರಿಸಿದೆ. ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಎಣ್ಣೆಹೊಳೆ ಬಳಿ ಡ್ಯಾಂ ಬಳಿ ಸ್ವರ್ಣೆ ಉಕ್ಕಿ ಹರಿಯುತಿದ್ದು ನದಿ ಪಾತ್ರ ದ ಬಳಿಯ ಪಂಪ್ ಹೌಸ್ ಬಳಿ ನೀರಿನ ಜೊತೆ ತೆಂಗಿನಕೈ ಅಡಿಕೆ ಮರದ ದಿಮ್ಮಿಗಳು ಶೇಖರಣೆ ಗೊಳ್ಳುತಿದ್ದು ಸ್ಥಳೀಯ ಹತ್ತು ಜನರ ತಂಡ ನೀರಿನಲ್ಲಿರುವ ವಸ್ತುಗಳ

ಕಡಲ್ಕೊರೆತಕ್ಕೆ ಬಟ್ಟಪ್ಪಾಡಿ ತತ್ತರ : ತೈಲ ಸೋರಿಕೆ ಭೀತಿಯೊಂದಿಗೆ ಅಲೆಗಳ ಹೊಡೆತ

ಉಳ್ಳಾಲ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಉಚ್ಚಿಲ ಬಟ್ಟಪ್ಪಾಡಿ ಪರಿಸರದಲ್ಲಿ ಕಡಲ್ಕೊರೆತ ತೀವ್ರಗೊಂಡು ವ್ಯಾಪಕ ಹಾನಿಯುಂಟು ಮಾಡಿದೆ.  ಒಂದು ರೆಸಾರ್ಟ್‌ ಸಂಪೂರ್ಣ ಸಮುದ್ರಪಾಲಾಗುವ ಹಂತದಲ್ಲಿದೆ. ಮೂರು ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಲು ಆರಂಭಿಸಿದೆ. 1 ಕಿ.ಮೀ ಉದ್ದದ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿರುವುದರಿಂದ 20 ಮನೆಮಂದಿಗೆ ಮುಖ್ಯ ರಸ್ತೆಯ ಸಂಪರ್ಕ ಕಡಿತವಾಗಿದೆ. ಸಿರಿಯಾ ಹಡಗು ಮುಳುಗಡೆಯೂ ಇದೇ

ಮಹಾಕಾಳಿ ದೇವಿ ಅಪಮಾನಗೈದ ನಿರ್ದೇಶಕಿಯನ್ನು ಬಂಧಿಸಿ : ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ

ಉಳ್ಳಾಲ: ದೇವಿ ಮಹಾಂಕಾಳಿಯನ್ನು ಅವಹೇಳನಕಾರಿಯಾಗಿ , ಹಿಂದೂಗಳ ಧಾರ್ಮಿಕ ಭಾವನಗಳಿಗೆ ಧಕ್ಕೆ ತರುವ ರೂಪದಲ್ಲಿ ಚಿತ್ರಿಸಿರುವ ಡಾಕ್ಯುಮೆಂಟರಿ ನಿರ್ದೇಶಕಿ ಲೀನಾ ಮಣಿ ಮೇಕಳೈ ವಿರುದ್ಧ ಸರಕಾರ ಶೀಘ್ರವೇ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಒತ್ತಾಯಿಸಿದ್ದಾರೆ. ದುಷ್ಟರನ್ನು ಸಂಹರಿಸುವ ದೇವಿ ಮಹಾಕಾಳಿ. ಹಿಂದೂಗಳು ಬಹಳಷ್ಟು ನಂಬುವ ದೇವಿಗೆ ಅವಹೇಳ ನಡೆಸಿರುವುದು ಸಮಸ್ತ ಹಿಂದೂ ಸಮಾಜಕ್ಕೆ