ಬೈಂದೂರು: ಕಿರಿಮಂಜೇಶ್ವರದಲ್ಲಿ ಹಾಲು ಸಂಗ್ರಹಣಾ ವಾಹನದ ಉದ್ಘಾಟನೆ

ಬೈಂದೂರಿನ ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಸಂಗ್ರಹಣಾ ವಾಹನದ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಒಡೆಯರ ಮಠ ಗೋಪಾಲಕೃಷ್ಣ ಕಲಾಮಂದಿರದಲ್ಲಿ ನಡೆಯಿತು. ಭವ್ಯ ಮೆರವಣಿಗೆ ಮೂಲಕ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು.ಕೊಂಬು ಕಹಳೆ ವಾದನ ಮೆರವಣಿಗೆಯ ಸೊಬಗನ್ನು ಹೆಚ್ಚಿಸಿತು. ಮಹಿಳೆಯರು ಸಮವಸ್ತ್ರ ಧರಿಸಿದ್ದರು.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಅವರು ಹಾಲು ಸಂಗ್ರಹಣಾ ಸಂಚಾರಿ ವಾಹನವನ್ನು ಉದ್ಘಾಟಿಸಿ ಮಾತನಾಡಿ, ಹಳ್ಳಿ ಭಾಗದ ಜನರು ಕೃಷಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿ ಕೊಳ್ಳುವುದರಿಂದ ಬದುಕು, ಸಂಸ್ಕೃತಿ ಮತ್ತು ಜೀವನ ಪದ್ಧತಿ ಉಳಿಯುತ್ತದೆ. ಹಳ್ಳಿಗಳಲ್ಲಿ ಕ್ಷೀರ ಕ್ರಾಂತಿ ಆಗಬೇಕೆಂದರು.ಹಾಲು ಸಂಗ್ರಹಣಾ ಸಂಚಾರಿ ವಾಹನದಿಂದ ಹೈನುಗಾರಿಕೆಯಲ್ಲಿ ತೊಡಗಿ ಕೊಂಡಿರುವ ಹಿರಿಯ ಮಹಿಳೆಯರಿಗೆ ಸಾಕಷ್ಟು ಅನುಕೂಲ ವಾಗಲಿದೆ ಎಂದರು

ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ನಿರ್ದೇಶಕರಾದ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಸಹಕಾರಿ ಸಂಘ ಸಂಸ್ಥೆಗಳು ಯಾವತ್ತೂ ಲಾಭದ ನಿರೀಕ್ಷೆಯಿಂದ ಕೆಲಸ ಮಾಡದೆ ಹೈನುಗಾರರ ಒಳಿತಿಗಾಗಿ ಶ್ರಮಿಸುತ್ತಿದೆ. ಸಹಕಾರಿ ಕ್ಷೇತ್ರದ ಬೆಳವಣಿಗೆಯನ್ನು ನೋಡಿದಾಗ ಹಿರಿಯರ ಶ್ರಮವನ್ನು ನೆನೆಯಬೇಕಾಗುತ್ತದೆ ಎಂದರು.

ಸಭಾ ಅಧ್ಯಕ್ಷೆಯನ್ನು ವಹಿಸಿದ್ದ ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಮಾತನಾಡಿ,ಹೈನುಗಾರ ಮಹಿಳೆಯರಿಗೆ ಪೆÇ್ರೀತ್ಸಾಹ ನೀಡುವ ಉದ್ದೇಶದಿಂದ ಇವೊಂದು ಯೋಜನೆಯನ್ನು ಜಾರಿ ಎಲ್ಲರೂ ಉತ್ತಮವಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ರೈತರು ಬೆಳೆದಾಗ ಮಾತ್ರ ಸಂಘವೂ ಅಭಿವೃದ್ಧಿ ಹೊಂದಲಿದೆ ಸದಾ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಉಪ ವ್ಯವಸ್ಥಾಪಕ ಡಾ.ಮಾಧವ ಐತಾಳ್ ,ಸಂಘ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುಣವಂತ ನಾಯರಿ ಮತ್ತು ಉಪಾಧ್ಯಕ್ಷ ಪದ್ಮನಾಭ ಹೆಬ್ಬಾರ್,ಬೈಂದೂರು ವಲಯ ವ್ಯವಸ್ಥಾಪಕ ರಾಜಾರಾಮ್, ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ್ ಹವಾಲ್ದಾರ್, ಗೋಪಾಲ ನುಕ್ಕಿತ್ತಾರು, ರಮೇಶ್ ನುಕ್ಕಿತ್ತಾರು, ರಾಮಚಂದ್ರ ನಾವಡ, ಗೋವಿಂದ ಪೂಜಾರಿ, ರೇಣುಕಾ ನಾಯರಿ,ನೀಲು, ಲಕ್ಷ್ಮೀ,ಸರೋಜಾ ಹಾಗೂ ರೈತ ಮುಖಂಡರ ಈಶ್ವರ ದೇವಾಡಿಗ, ಹಿರಿಯರಾದ ಆನಂದ ಪೂಜಾರಿ, ಹಾಲು ಉತ್ಪಾದಕ ಸದಸ್ಯರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಮಂಗಲ ಕಾರಂತ ಪ್ರಾರ್ಥಿಸಿದರು, ಗೋವಿಂದ ನಾಯ್ಕ್ ನಿರೂಪಿಸಿದರು.ರತನ್ ಬಿಜೂರು ಸಹಕರಿಸಿದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುಣವಂತ ನಾಯರಿ ವಂದಿಸಿದರು.

Related Posts

Leave a Reply

Your email address will not be published.