ಬಾಲವಿಕಾಸ ಶಾಲೆಯಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ

ವಿಟ್ಲ : ಸೆಪ್ಟೆಂಬರ್ 09 : ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ ಮಾಣಿ ಇದರ ಜಂಟಿ ಆಶ್ರಯದೊಂದಿಗೆ ಬಂಟ್ವಾಳ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯು ಸೆಪ್ಟೆಂಬರ್ 09 ರಂದು ಬಾಲವಿಕಾಸ ಶಾಲೆಯಲ್ಲಿ ಜರಗಿತು. ಈ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ ಶೆಟ್ಟಿ ಜೆ, “ಶಿಕ್ಷಣ ಇಲಾಖಾ ವತಿಯಿಂದ ನಡೆಯುವ ಯಾವುದೇ ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ನಡೆಸಲು ನಮ್ಮ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಸದಾ ಸಿದ್ಧ. ಇದಕ್ಕೆ ಪ್ರತಿಯಾಗಿ ತಮಗೆ ಕೇವಲ ಶಿಕ್ಷಣ ಇಲಾಖೆಯ ಪ್ರೀತಿ, ವಿಶ್ವಾಸ ಹಾಗೂ ಸಹಕಾರವನ್ನು ಹೊರತುಪಡಿಸಿ ಬೇರೆ ಏನನ್ನೂ ಬಯಸುವುದಿಲ್ಲ. ಮುಂದಿನ ದಿನಗಳಲ್ಲಿಯೂ ಕೂಡ ಶಿಕ್ಷಣ ಇಲಾಖೆಯಿಂದ ನಡೆಯುವ ಇಂತಹ ಹತ್ತು ಹಲವಾರು ಸ್ಪರ್ಧೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ತಂಡಗಳು ಭಾಗವಹಿಸುವಂತಾಗಲಿ. ಇದು ಸಾಧ್ಯವಾಗಬೇಕಾದರೆ ಶಿಕ್ಷಕರ ಪ್ರೋತ್ಸಾಹ ಹಾಗೂ ಸಹಕಾರ ಅತೀ ಅಗತ್ಯ. ಮಕ್ಕಳು ಸ್ಪರ್ಧೆಯಲ್ಲಿ ಗೆಲ್ಲುವುದು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ ” ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ರಾಸಾಯನಿಕ ಕ್ರಿಯೆಯ ಮೂಲಕ ವೈಜ್ಞಾನಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಭೌತ ಶಾಸ್ತ್ರ ಉಪನ್ಯಾಸಕರಾದ ಹರೀಶ್ ಶಾಸ್ತ್ರಿ , ” ಸುಸಜ್ಜಿತವಾಗಿ ನಿರ್ಮಾಣವಾಗಿರುವ ಈ ನೂತನ ಬಾಲವಿಕಾಸ ಶಾಲೆಗೆ ಬಂದು ನನ್ನ ಜ್ಞಾನ ಮತ್ತಷ್ಟು ವೃದ್ಧಿಯಾಯಿತು. ಇಲ್ಲಿ ನಾನು ಕಳೆದಂತಹ ಸಮಯ ತುಂಬಾ ಫಲಪ್ರದವಾಯಿತು. ಇಲ್ಲಿ ಕಲಿತ ಮಕ್ಕಳು ನಿಜವಾಗಿಯೂ ಅಮೂಲ್ಯ ರತ್ನಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಎಲ್ಲಾ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಾಗ ತಮ್ಮ ಜೀವನದಲ್ಲಿ ಮಹಾನ್ ಸಾಧನೆ ಮಾಡಲು ಸಾಧ್ಯವಾಗುವುದು.ವಿವಿಧ ವಿಜ್ಞಾನಿಗಳು ಮಾಡಿದ ಆವಿಷ್ಕಾರಗಳಿಗಿಂತಲೂ ಅವರ ಜೀವನದ ಬಗ್ಗೆ ಅರಿವನ್ನು ಪಡೆದರೆ ನಮ್ಮ ಜೀವನವನ್ನು ನಾವು ಸುಂದರಗೊಳಿಸಿಕೊಳ್ಳಬಹುದು ಇಂತಹ ಅರಿವನ್ನು ಮೂಡಿಸುಕೊಳ್ಳುವಲ್ಲಿ ವಿಜ್ಞಾನ ನಾಟಕ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಸುಸಜ್ಜಿತವಾಗಿ ನಿರ್ಮಾಣವಾಗಿರುವ ನೂತನ ಬಾಲವಿಕಾಸವು ಇಂತಹ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲಾ ಪ್ರಶಸ್ತಿ -ಪುರಸ್ಕಾರಗಳನ್ನೂ ಮೀರಿದ ಅನುಭವವನ್ನು ಶಾಲೆಯ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಶ್ಲಾಘನೀಯ ” ಎಂದರು.


ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಶಿಕ್ಷಣ ಸಂಯೋಜಕರಾದ ಪ್ರತಿಮಾ ವೈ ವಿ ವಿಜ್ಞಾನ ನಾಟಕ ಸ್ಪರ್ಧೆಗಳಂತಹ ವಿವಿಧ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆಯ ವತಿಯಿಂದ ನಡೆಸುವುದರ ಉದ್ದೇಶವನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ದಿl ಪಾಳ್ಯ ಅನಂತರಾಮ ರೈ ವೇದಿಕೆಯಲ್ಲಿ ವಿವಿಧ ಶಾಲಾ ತಂಡಗಳಿಂದ ವಿಜ್ಞಾನ ನಾಟಕ ಸ್ಪರ್ಧೆಗಳ ಪ್ರದರ್ಶನ ನಡೆಯಿತು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಲಯ ಸಂಪನ್ಮೂಲ ಅಧಿಕಾರಿ ಸತೀಶ್ ರಾವ್, ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ, ವಿಜ್ಞಾನ ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ರಂಗಕರ್ಮಿಗಳು ಹಾಗೂ ಶಿಕ್ಷಕರಾಗಿರುವ ಚಿನ್ನಪ್ಪ ಜಾಲ್ಸೂರು ಹಾಗೂ ದಾಮೋದರ್, ಶಾಲಾ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ ಶೆಟ್ಟಿ ಶಾಲಾಡಳಿತಾಧಿಕಾರಿ ರವೀಂದ್ರ ದರ್ಬೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ನಾಟಕ ನಿರ್ದೇಶಕರಾದ ಮೌನೇಶ್ ವಿಶ್ವಕರ್ಮ, ವಿವಿಧ ಶಾಲೆಗಳ ಶಿಕ್ಷಕರು ಹಾಗೂ ವಿಜ್ಞಾನ ನಾಟಕ ತಂಡಗಳು, ಬಾಲವಿಕಾಸ ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ವಿ ಶೆಟ್ಟಿ ಸ್ವಾಗತಿಸಿ, ಸಹಶಿಕ್ಷಕಿಯರಾದ ರಶ್ಮಿ ಕೆ ಫೆರ್ನಾಂಡಿಸ್
ವಂದಿಸಿ, ಸುಧಾ ಎನ್ ರಾವ್ ನಿರೂಪಿಸಿದರು.

Related Posts

Leave a Reply

Your email address will not be published.