20ನೇ ಮುಕ್ತ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಾಲವಿಕಾಸ‌ ಪ್ರಥಮ

ವಿಟ್ಲ : ಶೋರಿನ್ – ರಿಯು ಕರಾಟೆ ಅಸೋಸಿಯೇಷನ್ (ರಿ.), ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಮತ್ತು ಹೆಚ್.ಕೆ. ಅನಂತ್ ರಾಜ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಷನ್, ಮೂಡಬಿದ್ರೆ ಇದರ ಜಂಟಿ ಆಶ್ರಯದಲ್ಲಿ ನಡೆದ 2೦ನೇ ಮುಕ್ತ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ – 2023, ಸೆಪ್ಟೆಂಬರ್ 9, ಶನಿವಾರದಂದು ಮೂಡಬಿದ್ರೆಯಲ್ಲಿ ನಡೆಯಿತು.

ಈ ಚಾಂಪಿಯನ್ಶಿಪ್ ನಲ್ಲಿ ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ,ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.ಶಮಿರಾಜ್ ಆಳ್ವ(7ನೇ ತರಗತಿ) ಕುಮಿಟೆ ಹಾಗೂ ಕಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಐಶಲ್ ಮಾರ್ಟಿಸ್( 8ನೇ ತರಗತಿ),ರಿಷಿತ್ ರೈ(7ನೇ ತರಗತಿ) ಹಾಗೂ ತ್ರಿಶಾನ್ ಕೆ (6ನೇ ತರಗತಿ)ಕುಮಿಟೆಯಲ್ಲಿ ದ್ವಿತೀಯ, ಮೊಹಮ್ಮದ್ ಸಹಲ್ (4ನೇ ತರಗತಿ)ಹಾಗೂ ಮೊಹಮ್ಮದ್ ಸಹಮ್(4ನೇ ತರಗತಿ)ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.ಕರಾಟೆ ತರಬೇತುದಾರರಾದ ಸೆನ್ಸಾಯಿ ಮೋಹನ್ ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.ಸ್ಪರ್ಧಾ ವಿಜೇತರನ್ನು ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.

Related Posts

Leave a Reply

Your email address will not be published.