ಬ್ಯಾಂಕ್ ಆಫ್ ಬರೋಡಾದಿಂದ ಬಾಬ್ ಲೈಟ್ ಉಳಿತಾಯ ಖಾತೆಯ ಪರಿಚಯ – ಜೀವಮಾನ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ

ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ “ಬಾಬ್ ಕಿ ಸಂಗ್, ತ್ಯೋಹಾರ್ ಕಿ ಉಮಂಗ್” ಹಬ್ಬದ ಅಂಗವಾಗಿ ಬಾಬ್ ಲೈಟ್ ಉಳಿತಾಯ ಖಾತೆ- ಜೀವಮಾನ ಶೂನ್ಯ ಬ್ಯಾಲೆನ್ಸ್ ಉಳಿತಾಯ ಬ್ಯಾಂಕ್ ಖಾತೆಯನ್ನು ಪರಿಚಯಿಸಿದೆ. ಗ್ರಾಹಕರಿಗೆ ಯಾವುದೇ ಕನಿಷ್ಟ ಬ್ಯಾಲೆನ್ಸ್ ಅಗತ್ಯವಿಲ್ಲದ ಬ್ಯಾಂಕಿಂಗ್ ಅನುಭವವನ್ನು ನೀಡುತ್ತದೆ.

ಇದಲ್ಲದೆ, ವಿವಿಧ ಗ್ರಾಹಕರ ವಿಭಾಗಗಳ ಅಗತ್ಯತೆಗಳನ್ನು ಪೂರೈಸಲು, ಖಾತೆಯಲ್ಲಿ ನಾಮಮಾತ್ರ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸನ್ನು ನಿರ್ವಹಿಸುವ ಮೂಲಕ ಬಾಬ್ ಲೈಟ್ ಖಾತೆಯು ಜೀವಮಾನದ ಉಚಿತ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌ನೊಂದಿಗೆ ಬರುತ್ತದೆ ಮತ್ತು ಖಾತೆದಾರರು ಜೀವಮಾನದ ಉಚಿತ ಕ್ರೆಡಿಟ್ ಕಾರ್ಡ್ ಅನ್ನು ಸಹ ಪಡೆಯಬಹುದು.

ಬಾಬ್ ಲೈಟ್ ಉಳಿತಾಯ ಖಾತೆಯು ಹಬ್ಬದ ಋತುವಿನಲ್ಲಿ ಕೊಡುಗೆಗಳೊಂದಿಗೆ ನೀಡಲಾಗುತ್ತಿದೆ. ’ಬಾಬ್ ಕಿ ಸಂಗ್, ತ್ಯೋಹಾರ್ ಕಿ ಉಮಂಗ್’ ಹಬ್ಬದ ಪ್ರಚಾರದ ಭಾಗವಾಗಿ, ಬ್ಯಾಂಕ್ ಆಫ್ ಬರೋಡಾ ಎಲೆಕ್ಟ್ರಾನಿಕ್ಸ್, ಕನ್ಸೂಮರ್ ಡ್ಯೂರಬಲ್ಸ್, ಪ್ರಯಾಣ, ಆಹಾರ, ಫ್ಯಾಷನ್, ಮನರಂಜನೆ, ಜೀವನಶೈಲಿ, ದಿನಸಿ ಮತ್ತು ಆರೋಗ್ಯದಂತಹ ವಿಭಾಗಗಳಲ್ಲಿ ಪ್ರಮುಖ ಗ್ರಾಹಕ ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಬ್ಯಾಂಕ್ ಆಫ್ ಬರೋಡಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ಆಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡುತ್ತದೆ. ಹಬ್ಬದ ಪ್ರಚಾರವು ೩೧ನೇ ಡಿಸೆಂಬರ್, ೨೦೨೩ರವರೆಗೆ ನಡೆಯಲಿದೆ ಮತ್ತು ಕಾರ್ಡ್‌ದಾರರು ರಿಲಯನ್ಸ್ ಡಿಜಿಟಲ್, ಕ್ರೋಮಾ, ಮೇಕ್ ಮೈ ಟ್ರಿಪ್, ಅಮೆಜಾನ್, ಬುಕ್ ಮೈ ಶೋ, ಮಿಂತ್ರ, ಸ್ವಿಗ್ಗಿ, ಝೋಮೆಟೋ ಮತ್ತು ಇತರ ಬ್ರಾಂಡ್‌ಗಳಿಂದ ವಿಶೇಷ ಕೊಡುಗೆಗಳಲ್ಲಿ ಆನಂದಿಸಬಹುದು.

ಬ್ಯಾಂಕ್ ಆಫ್ ಬರೊಡಾದ ರಿಟೈಲ್ ಲಯಾಬಿಲಿಟೀಸ್ ಮತ್ತು ಎನ್‌ಆರ್‌ಐ ವ್ಯವಹಾರದ ಮುಖ್ಯ ಪ್ರಧಾನ ವ್ಯವಸ್ಥಾಪಕ ಶ್ರೀ ರವೀಂದ್ರ ಸಿಂಗ್ ನೇಗಿ ಇವರು ೧೦ ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ಸೇರಿದಂತೆ ಯಾವುದೇ ನಿವಾಸಿ ಖಾತೆಯನ್ನು ತೆರೆಯಬಹುದು. ಹೊಸ ಪೀಳಿಗೆಗೆ ಔಪಚಾರಿಕ ಬ್ಯಾಂಕಿಂಗ್ ಪರಿಸರ ವ್ಯವಸ್ಥೆಗೆ ಬಾಬ್ ಲೈಟ್ ಬಾಗಿಲು ತೆರೆಯುತ್ತದೆ. ಮಹತ್ವಾಕಾಂಕ್ಷಿ ಭಾರತೀಯರ ಬ್ಯಾಂಕಿಂಗ್ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published.