ಬಂಟ್ವಾಳ – ಧರ್ಮದೈವ ಕ್ಷೇತ್ರ ಮತ್ತು ಶಾಸಕರ ಬಗ್ಗೆ ಅಪಪ್ರಚಾರ-ಕಕ್ಯಗುತ್ತಿನಲ್ಲಿ ಪ್ರಾರ್ಥನೆ
ಧರ್ಮದೈವಗಳ ಕ್ಷೇತ್ರಕ್ಕೆ ಅಪಚಾರವಾಗುವಂತೆ ಮತ್ತು ಬಂಟ್ವಾಳ ಶಾಸಕರ ಹೆಸರನ್ನು ಕೆಡಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿರುವ ಇಬ್ಬರು ವ್ಯಕ್ತಿಗಳಿಗೆ ದೈವದೇವರುಗಳು ಸರಿಯಾದ ಶಿಕ್ಷೆ ನೀಡಬೇಕು ಎಂದು ಕಕ್ಯಗುತ್ತಿನ ಭಂಡಾರದ ಮನೆಯವರು ಹಾಗೂ ಊರಿನ ಪ್ರಮುಖರು ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರ ಇಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೂಡ ದೇವರಲ್ಲಿ ಬೇಡಿಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಉಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಕ್ಯೆಪದವು ದೇವಸ್ಥಾನದಿಂದ ಕಕ್ಯೆಗುತ್ತಿನ ಭಂಡಾರದ ಮನೆಗೆ ಹೋಗುವ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ರೂ. 10 ಲಕ್ಷ ಅನುದಾನದಲ್ಲಿ ಕಾಂಕ್ರೀಟಿಕರಣ ಮಾಡಲಾಗಿದೆ.
ಅದರೆ ಇಬ್ಬರು ವ್ಯಕ್ತಿಗಳು ಯಾವುದೋ ದುರುದ್ದೇಶದಿಂದ ಸಮಿತಿಯ ಗಮನಕ್ಕೆ ತರದೆ ಈ ರಸ್ತೆಯ ಬಗ್ಗೆ ತಪ್ಪು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೈವಗಳ ಮುಂದೆ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ದೈವದ ಪಾತ್ರಿ ಶೇಖರ ಪೂಜಾರಿ ಮತ್ತು ಜೀರ್ಣೊಧ್ದಾರ ಸಮಿತಿ ಸದಸ್ಯ ಪ್ರಭಾಕರ್ ಅಂಚನ್ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಅಧ್ಯಕ್ಷ ರಮೇಶ್ ನಾಲೋಡಿ ಹಾಗೂ ಸಮಿತಿಯ ಪ್ರಮುಖರು ಹಾಜರಿದ್ದರು.


















