ಬಂಟ್ವಾಳ: ನಾಯರ್ಕುಮೇರು ಪಿಲಿಚಾಂಡಿಗೋಳಿಯಲ್ಲಿ ದೊಂಪದಬಲಿ ನೇಮೋತ್ಸವ
ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಿಲಿಚಾಂಡಿಗೋಳಿಯಲ್ಲಿ ಪುನರ್ ನಿರ್ಮಾಣಗೊಂಡಿರುವ ಗಡಿಪಾಡಿ ಸ್ಥಳದಲ್ಲಿ ದೊಂಪದ ಬಲಿ ನೇಮೋತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಬೆಳಿಗ್ಗೆ ಪುಣ್ಯಾಹವಾಚನ, ಗಣಪತಿಹೋಮ, ಕಲಶಾರಾಧನೆ, ಪ್ರಧಾನ ಹೋಮ, ದೈವಗಳ ಪೀಠ ಸ್ಥಾಪನೆ, ಕಲಶಾಭಿಷೇಕ, ನಾಯರ್ಕುಮೇರು ಗುತ್ತಿನಿಂದ ಭಂಡಾರ ಬಂದು ಪಂಚ ಪರ್ವ, ಪ್ರಸಾದ ವಿತರಣೆ, ಲಘು ಉಪಾಹಾರ ನಡೆಯಿತು.
ಸಂಜೆ ಪಿಲಿಚಾಮುಂಡಿ ನೇಮೋತ್ಸವ, ಮಾರಿಪೂಜೆ, ಗಂಧಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಬಲ್ಲಾಳ್ ಮನೆತನದ ಜಗದೀಶ್ ಬಲ್ಲಾಳ್, ಶಶಿಧರ ಬಲ್ಲಾಳ್, ರಾಘವೇಂದ್ರ ಬಲ್ಲಾಳ್, ಜಯಪ್ರಕಾಶ್ ಬಲ್ಲಾಳ್ ಕೌಡಂಬಾಡಿ, ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ಕೊಡಮಣಿತ್ತಾಯ, ಮತ್ತು ಪರಿವಾರ ದೈವಗಳ ಸಾನಿಧ್ಯ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ರಾಮಣ್ಣ ಪೂಜಾರಿ ಗಂಟೆರಬೆಟ್ಟು, ಪ್ರಧಾನ ಸಂಚಾಲಕ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಸಂಚಾಲಕ ಆನಂದ ಮೂಲ್ಯ ಪಚ್ಚೇರು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ ನಾಯರ್ಕುಮೇರು, ಕೋಶಾಧಿಕಾರಿ ಕಿಶೋರ್ ಕುಮಾರ್ ನಾಯರ್ ಕುಮೇರು, ಕಾರ್ಯದರ್ಶಿ ಯೋಗೀಶ್ ಸಾಲ್ಯಾನ್ ಕಳಸಡ್ಕ ಸಹಿತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.