ಬಿ.ಸಿ.ರೋಡು: ರೋಟರಿ ಇಂಟರ್ ಡಿಸ್ಟ್ರಿಕ್ಟ್ ಮೀಟ್- ಪತ್ರಕರ್ತ ಗೋಪಾಲ ಅಂಚನ್ ಅವರಿಗೆ ಸನ್ಮಾನ
ಬಿ.ಸಿ.ರೋಡು: ರೋಟರಿ ಇಂಟರ್ ಡಿಸ್ಟ್ರಿಕ್ಟ್ ಮೀಟ್- ಅಂತರ್ ಜಿಲ್ಲಾ ರೋಟರಿ ಕ್ಲಬ್ ಗಳಾದ ಕಾರ್ಕಳ ಮತ್ತು ಬಿ.ಸಿ.ರೋಡು ಸಿಟಿ ಕ್ಲಬ್ ಗಳ ಕುಟುಂಬ ಸ್ನೇಹ ಸಮ್ಮಿಲನ ಬಿ.ಸಿ.ರೋಡು ರೋಟರಿ ಸಮುದಾಯ ಭವನದಲ್ಲಿ ನಡೆಯಿತು.
ಬಿ.ಸಿ.ರೋಡು ಸಿಟಿ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ ಶೆಟ್ಟಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು.
ಪಿಡಿಜಿ ಪ್ರಕಾಶ್ ಕಾರಂತ್ ಮಾತನಾಡಿ ಗೋಪಾಲ ಅಂಚನ್ ಅವರು ಬಹುಮುಖಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಅವರ ಸೇವೆ ಅಭಿನಂದನೀಯವಾಗಿದೆ ಎಂದರು.
ಪಿಡಿಜಿ ಡಾ. ಭರತೇಶ್ ಆಧಿರಾಜ್ ಮಾತನಾಡಿ ಅಂತರ್ ಜಿಲ್ಲಾ ಕ್ಲಬ್ ಗಳ ಕುಟುಂಬ ಸ್ನೇಹ ಸಮ್ಮಿಲನ ಮಾದರಿಯಾಗಿದೆ ಎಂದರು.
ಪತ್ರಕರ್ತ, ರಂಗಕಲಾವಿದ ಗೋಪಾಲ ಅಂಚನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಜಾನ್ ಡಿ ಸಿಲ್ವ, ರೋಟರಿ ಪ್ರಮುಖರಾದ ಲೊರೆನ್ಸ್ ಗೋನ್ಸಾಲಿಸ್, ಶೈಲೇಂದ್ರ ರಾವ್, ರವೀಂದ್ರ ದರ್ಬೆ, ಸತೀಶ್ ಕುಮಾರ್ ಕೆ., ಪದ್ಮನಾಭ ರೈ ಗೋಳ್ತಮಜಲು, ಸುಂದರ ಬಂಗೇರಾ ಮೊದಲಾದವರಿದ್ದು ಶುಭ ಹಾರೈಸಿದರು.
ಅಧ್ಯಕ್ಷ ಗಣೇಶ ಶೆಟ್ಟಿ ಗೋಳ್ತಮಜಲು ಸ್ವಾಗತಿಸಿದರು.ಪ್ರಥ್ವಿರಾಜ್ ವಂದಿಸಿದರು. ಟಿ.ಶೇಷಪ್ಪ ಮೂಲ್ಯ ಸನ್ಮಾನಪತ್ರ ವಾಚಿಸಿದರು. ಜ್ಯೋತ್ಸ್ನಾ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.