370ನೇ ವಿಧಿ ರದ್ದನ್ನು ಕರಾಳ ದಿನ ಎಂದದ್ದು ತಪ್ಪಲ್ಲ: ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ: ಸುಪ್ರೀಂ

ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ಕರಾಳ ದಿನ ಎಂದು ಕರೆದದ್ದು ತಪ್ಪಲ್ಲ. ಅದು ಅವರು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಸರ್ವೋಚ್ಚ  ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ. ಸರಕಾರದ ಕ್ರಮಗಳನ್ನು ಟೀಕಿಸುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಪ್ರಜೆಗೆ ಇದೆ ಎಂದೂ ಅದು ಹೇಳಿದೆ.

ಇದೇ ಸಂದರ್ಭದಲ್ಲಿ ಇನ್ನೊಂದು ಮಾತನ್ನು ಸಹ ಸುಪ್ರೀಂ ಕೋರ್ಟು ಹೇಳಿದೆ. ಪಾಕಿಸ್ತಾನಕ್ಕೆ ಯಾರಾದರೂ ಸ್ವಾತಂತ್ರ್ಯೋತ್ಸವದ ಶುಭಾಶಯ ಹೇಳಿದರೆ ಅದು ಅಪರಾಧ ಆಗುವುದಿಲ್ಲ. ಅದು ಸ್ನೇಹ ಸೂಚಕ ಅಷ್ಟೆ. ಭಾರತೀಯ ದಂಡ ಸಂಹಿತೆಯ ೧೫೩ಎ ವಿಧಿಯಡಿ ಅದನ್ನು ಅಪರಾಧ ಎಂದು ಹೇಳುವುದು ಸಾಧ್ಯವಿಲ್ಲ.

370ನೇ ವಿಧಿ ರದ್ದು ಮತ್ತು ಅದರ ರಾಜ್ಯ ಸ್ಥಾನಮಾನವನ್ನು ನೀಗಿದ್ದನ್ನು ಟೀಕಿಸುವ ಹಕ್ಕು ಪ್ರತಯೊಬ್ಬ ಭಾರತೀಯನಿಗೂ ಇದೆ. ಸಂವಿಧಾನದ ೨೧ನೇ ವಿಧಿ ಪ್ರಜೆಗೆ ಆ ಅಧಿಕಾರ ನೀಡಿದೆ. ಇದನ್ನು 153ರ ಅಡಿ ಅಪರಾಧ ಎನ್ನುವುದು ಸಂವಿಧಾನದ ಪ್ರಜಾಪ್ರಭುತ್ವದ ತತ್ವಗಳಿಗೆ ಅಪಚಾರ ಮಾಡಿದಂತೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ನ್ಯಾಯ ಪೀಠ ಹೇಳಿತು.

ಅದೇ ವೇಳೆ ಬಾರಾಮುಲ್ಲಾದ ಜಾವೇದ್ ಅಹ್ಮದ್ ವಿರುದ್ಧ ಸಲ್ಲಿಕೆಯಾಗಿದ್ದ ಎಫ್‌ಐಆರ್‌ನ್ನು ಸುಪ್ರೀಂ ಕೋರ್ಟು ರದ್ದು ಪಡಿಸಿತು.

Related Posts

Leave a Reply

Your email address will not be published.