ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ : ಕರ್ನಾಟಕ ಸರಕಾರದ ಘೋಷಣೆ

ಕರ್ನಾಟಕ ಸರಕಾರವು ಶರಣ ಚಳವಳಿಯ ಹರಿಕಾರ ಬಸವಣ್ಣನವರನ್ನು ಕನ್ನಡ ನಾಡಿನ ಸಾಂಸ್ಕøತಿಕ ನಾಯಕ ಎಂದು ಘೋಷಿಸಿದ್ದಾರೆ. ಇದನ್ನು ರಾಜ್ಯದ ಜನತೆ ಅಮೋಘವಾಗಿ ಸ್ವಾಗತಿಸಿದೆ.

ಕರ್ನಾಟಕ ಶರಣ ಪರಿಷತ್, ನಾನಾ ಮಠಾಧೀಶರುಗಳು ಇದನ್ನು ಸ್ವಾಗತಿಸಿ ಹೇಳಿದ್ದಾರೆ. ವೇದದ ಹೇರಿಕೆ, ಸಂಸ್ಕøತದ ಹೇರಿಕೆ, ವೈದಿಕ ಧರ್ಮದ ಹೇರಿಕೆ ಇವುಗಳನ್ನು ಅಲ್ಲಗಳೆದು ಕರುನಾಡಿನ ಕನ್ನಡ, ನೆಲ ಧರ್ಮವನ್ನು ನಾಟಿದ್ದು ಶರಣ ಪಥ. ಆ ದಾರಿಯ ಆಯ್ಕೆ ಸಹಜವಾದದ್ದಾಗಿದೆ. ಆದರೆ ಜಾರಿ ಅಷ್ಟು ಸುಲಭವಲ್ಲ ಎನ್ನುವ ಮಾತು ಸಹ ಇದೆ. ಕಲ್ಯಾಣ ಕ್ರಾಂತಿ ಎಂಬ ದೊಂಬಿಯ ಮೂಲಕ ಶರಣ ಚಳವಳಿಯನ್ನು ಬಹುತೇಕ ನಾಶ ಮಾಡಿದ್ದ ವೈದಿಕ ದಾಳಿಯನ್ನು ಕೆಲವರು ನೆನಪಿಸಿದ್ದಾರೆ. ಈ ಬಾರಿಯ ಪ್ರಜಾಪ್ರಭುತ್ವ ದಿನದ ಬೆಂಗಳೂರು ಲಾಲ್‍ಬಾಗ್ ಫ್ಲವರ್ ಶೋನಲ್ಲಿ ಬಸವಣ್ಣನವರ ಮೂರ್ತಿ ಮತ್ತು ಶರಣ ಚಳವಳಿಗೆ ಒತ್ತು ನೀಡಲಾಗಿದೆ.

Related Posts

Leave a Reply

Your email address will not be published.