ಅಡಿಕೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಕುಳ್ಳಂಪ್ಪಾಡಿ ಹಿರಿಯಣ್ಣ ಎಂಬವರ ಕೊಟ್ಟಿಗೆಯಲ್ಲಿ ಸುಲಿದು ದಾಸ್ತಾನು ಇರಿಸಿದ ಅಡಿಕೆ ಗೋಣಿ ಚೀಲಗಳ ಪೈಕಿ 5 ಗೋಣಿ ಚೀಲ ಅಡಿಕೆಯನ್ನು ದಿನಾಂಕ 14.03.2024 ರಂದು ಸಂಜೆ 7:00 ಗಂಟೆಯಿಂದ ದಿನಾಂಕ 15.03.2024 ರಂದು ಬಳಿಗ್ಗೆ 6:00 ಗಂಟೆಯ ಮಧ್ಯೆ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿದ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣಾ ಅ.ಕ್ರ 30-2024 ಕಲಂ 380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಗಳ ಪತ್ತೆಯ ಬಗ್ಗೆ ರಚಿಸಲಾದ ವಿಶೇಷ ತನಿಖಾ ತಂಡವು ಕಳವು ಮಾಡಿದ ಸುಪೀತ್‌ ಕೆ ಪ್ರಾಯ 20 ವರ್ಷ, ತಂದೆ ಕರುಣಾಕರ ಭಂಡಾರಿ , ವಾಸ.ಕೊಡೆಂಚಿಕಾರ್‌ ಮನೆ, ಮಂಡೆಕೋಲು ಗ್ರಾಮ, ಸುಳ್ಯ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು 83,000/ ರೂ ಮೌಲ್ಯದ 209 ಕೆ ಜಿ ಸುಲಿದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ರೂ 1,00,000/ ಮೌಲ್ಯದ ಆಟೋ ರಿಕ್ಷಾ ವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.

ಸದ್ರಿ ಪ್ರಕರಣದ ಪತ್ತೆಗಾಗಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಸಿ ಬಿ ರಿಷ್ಯಂತ್‌ ಐಪಿಎಸ್‌ ರವರು ನಿರ್ದೇಶನದಂತೆ , ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ಜಗದೀಶ ಎಂ, KSPS ಮತ್ತು ಶ್ರೀ ರಾಜೇಂದ್ರ KSPS ರವರುಗಳ ಮಾರ್ಗದರ್ಶನದಲ್ಲಿ ಶ್ರೀ ಅರಣ್‌ ನಾಗೇ ಗೌಡ , ಪೊಲೀಸ್‌ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ , ಪುತ್ತೂರುರವರ ನೇತೃತ್ವದಲ್ಲಿ ಸುಳ್ಯ ವೃತ್ತ ನಿರೀಕ್ಷಕರಾದ ಶ್ರೀ ಸತ್ಯನಾರಾಯಣ ಕೆ ರವರ ಮುಂದಾಳತ್ವ ದಲ್ಲಿ , ಶ್ರೀ ಸಂತೋಷ್‌ ಬಿ ಪಿ ಪೊಲೀಸ್‌ ಉಪನಿರೀಕ್ಷಕರು , ಬೆಳ್ಳಾರೆ ಪೊಲೀಸ್‌ ಠಾಣೆ ರವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.ಸದ್ರಿ ತನಿಖಾ ತಂಡದಲ್ಲಿ ಬೆಳ್ಳಾರೆ ಪೊಲೀಸ್‌ ಠಾಣಾ ಸಿಬ್ಬಂಧಿಗಳಾದ ನವೀನ ಕೆ HC571, ಕೃಷ್ಣಪ್ಪ HC656, ದೇವರಾಜ್‌ HC2025, ಸಂತೋಷ್‌ ಕೆ ಜಿ PC 2308, ಸುಭಾಸ್‌ ಕಿತ್ತೂರ PC 1018, ಪುರಂದರ APC ಮತ್ತು ತಾಂತ್ರಿಕ ವಿಭಾಗದ ದಿವಾಕರ , ಸಂಪತ್‌ ರವರುಗಳು ಕಾರ್ಯನಿರ್ವಹಿಸಿರುತ್ತಾರೆ. ಸದ್ರಿ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.ಸಾರ್ವಜನಿಕ ವಲಯದಲ್ಲಿಯೂ ಪ್ರಶಂಸೆಯನ್ನು ವ್ಯಕ್ತವಾಗಿರುತ್ತದೆ.

Related Posts

Leave a Reply

Your email address will not be published.