ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಕೆ

ಸುಳ್ಯ: ಸುಳ್ಯ ಮೀಸಲು ಕ್ಷೇತ್ರದಿಂದ ಭಾಗೀರಥಿ ಮುರುಳ್ಯ ಮೊದಲ ಬಾರಿಗೆ ಇಂದು ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಲಿದರು. ಇಂದು ಬೆಳಗ್ಗೆ 11:35 ರ ವೇಳೆಗೆ ಪಕ್ಷದ ಹಿರಿಯ ನಾಯಕರ ಜೊತೆ ಆಗಮಿಸಿ ಭಾಗೀರಥಿ ಮುರುಳ್ಯ ನಾಮಪತ್ರ ಸಲ್ಲಿಸಲಿದ್ದರು.
ನಾಮಪತ್ರ ಸಲ್ಲಿಕೆಯ ಮೊದಲು ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಅದ್ದೂರಿ ಮೆರವಣಿಗೆ ನಡೆಯಿತು. ಶ್ರೀರಾಮಪೇಟೆಯ ಶ್ರೀರಾಮ ಭಜನಾ ಮಂದಿರದ ಬಳಿಯಿಂದ ಮೆರವಣಿಗೆ ನಗರದ ಬೀದಿಯಲ್ಲಿ ಸಾಗಿ ಬಂದಿತು. ಶ್ರೀರಾಮ ಪೇಟೆಯಿಂದ ನಗರದ ರಸ್ತೆಯಲ್ಲಿ ಸಾಗಿ ಬಂದು ರಥಬೀದಿಯಾಗಿ ತಾಲೂಕು ಕಚೇರಿ ಬಳಿಯ ಪುರಭವನದ ಸಮೀಪದ ವರೆಗೆ ಮೆರವಣಿಗೆ ಸಾಗಿ ಬಂತು. ಬಳಿಕ ತಾಕೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಎಸ್ ಅಂಗಾರ , ಮೀನುಗಾರಿಕ ನಿಗಮ ಅಧ್ಯಕ್ಷರಾದ ಎ ವಿ ತೀರ್ಥರಾಮ , ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ಶ್ರೀಪತಿ ಭಟ್ ಮಜಿಗುಂಡಿ ಉಪಸ್ಥಿತರಿದ್ದರು.
