ಮಂಗಳೂರು: ಫೆ.23ರಿಂದ ಫೆ.25ರ ವರೆಗೆ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

ಅದ್ಯಪಾಡಿ ಬೈಲು ಮಾಗಣೆಯ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆ.23ರಿಂದ ಫೆ.25ರ ವರೆಗೆ ಬ್ರಹ್ಮಶ್ರೀ ಶಿಬರೂರು ಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ನಡೆಯಲಿದೆ.

ಫೆ.23 ರಂದು ಬೆಳಿಗ್ಗೆ ಗಣಪತಿ ಹೋಮ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ನಾಗತಂಬಿಲ, ರುದ್ರಯಾಗ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಹಾಗೂ ಕೂಳೂರು ಬ್ರಹ್ಮಶ್ರೀ ನಾರಾಯಣ ಮಂದಿರ ಅವರಿಂದ ಭಜನಾ ಸೇವೆ ಹಾಗೂ ರಾತ್ರಿ 7ರಿಂದ ವಾಸ್ತು ಪೂಜೆ, ವಾಸ್ತು ಬಲಿ, ದಿಕ್‍ಬಲಿ, ರಕ್ಷೋಘ್ನಹೋಮ, ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ.

ಫೆ.24 ರಂದು ಬೆಳಿಗ್ಗೆ ಗಣಪತಿ ಹೋಮ, ಮಹಾಚಂಡಿಕಾಯಾಗ ಪ್ರಾರಂಬ, ದೇವರಿಗೆ ಪುಣ್ಯಾಹ, ನವಕಕಲಶಾಭಿಷೇಕ, ಪ್ರಧಾನಹೋಮ, ಪರಿವಾರ ಶಕ್ತಿಗಳಿಗೆ ಕಲಶಾಭಿಷೇಕ, ಪರ್ವಪೂಜೆ, ನಾಗತಂಬಿಲ, ಆಶ್ಲೇಷಬಲಿ, ಚಂಡಿಕಾಯಾಗದ ಪೂರ್ಣಾಹುತಿ, ಮಹಾಪೂಜೆ, ಉತ್ಸವಬಲಿ, ಪಲ್ಲಪೂಜೆ, ಪ್ರಸಾದ ವಿತರಣೆ ಬಳಿಕ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಅದ್ಯಪಾಡಿ ಪದವು ಶ್ರೀ ವೈದ್ಯನಾಥೇಶ್ವÀರ ಭಜನಾ ಮಂಡಳಿ ಮತ್ತು ಕೈಕಂಬ ವಿಕಾಸ ನಗರ ಶ್ರೀ ಹರಿ ಭಜನಾ ಮಂಡಳಿ ವತಿಯಿಂದ ಭಜನಾ ಸೇವೆ ನಂತರ ಮಹಾಪೂಜೆ, ರಂಗಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಫೆ.25ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ದುರ್ಗಾಹೋಮ, ಪಂಚವಿಂಶತಿ, ಪ್ರಧಾನಹೋಮ, ಮಹಾಮಂತ್ರಾಕ್ಷತೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಈ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವಂತೆ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಮೋನಪ್ಪ ಮೇಸ್ತ್ರಿ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್ ಅವರು ವಿನಂತಿಸಿದ್ದಾರೆ.

Related Posts

Leave a Reply

Your email address will not be published.