ಸಂಸತ್ತಿನಲ್ಲಿ ಹಿರಿಯ ನಾಗರಿಕರ ಪರ ಮಾತಾದ ಜಯಾ ಬಚ್ಚನ್

ಭಾರತದ 65 ವಯಸ್ಸು ಮೀರಿದ ಹಿರಿಯ ನಾಗರಿಕರ ಸಂಖ್ಯೆಯು 40% ಮುಟ್ಟಿದ್ದು ಯುವ ಸಮುದಾಯದ ಪ್ರಮಾಣವನ್ನು ಮೀರಿಸಿದೆ. ಭಾರತದ ಹಿರಿಯರ ಸಂಖ್ಯೆಯು 55 ಕೋಟಿಗೂ ಹೆಚ್ಚು ಸುದ್ದಿ. ಅತ್ತ ಸಂಸತ್ತಿನಲ್ಲಿ ಸಮಾಜವಾದಿ ಪಕ್ಷದ ಜಯಾ ಬಚ್ಚನ್ ಮುಖ್ಯವಾದ ವಿಷಯವನ್ನು ಎತ್ತಿ, ಹಿರಿಯ ನಾಗರಿಕರನ್ನು ದಯಮಾಡಿ ಕೊಂದುಬಿಡಿ. ಸರ್ಕಾರ ಎಲ್ಲ 65 ಪ್ರಾಯ ದಾಟಿದ ಹಿರಿಯರನ್ನು ಕೊಲ್ಲಬೇಕು. ಏಕೆಂದರೆ ಈ ರಾಷ್ಟ್ರ ನಿರ್ಮಾಣಗಾರರ ಬಗ್ಗೆ ಗಮನ ಹರಿಸಲು ಸರ್ಕಾರ ಸಿದ್ಧವಾಗಿಲ್ಲ. ಭಾರತದಲ್ಲಿ ಹಿರಿಯ ನಾಗರಿಕರಾಗಿರುವುದು ಅಪರಾಧವೇ? ಭಾರತದ ಹಿರಿಯ ನಾಗರಿಕರು 70 ವರ್ಷಗಳ ನಂತರ ವೈದ್ಯಕೀಯ ವಿಮೆಗೆ ಅರ್ಹರಲ್ಲ, ಅವರು ತಿಂಗಳ ಕಂತಿನ ಮೇಲೆ ಸಾಲ ಪಡೆಯಲು ಸಾಧ್ಯ ಆಗುವುದಿಲ್ಲ. ಅವರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲಾಗುವುದಿಲ್ಲ. ಅವರಿಗೆ ಯಾವುದೇ ಕೆಲಸವನ್ನು ನೀಡಲಾಗುವುದಿಲ್ಲ, ಆದ್ದರಿಂದ ಅವರು ಇತರರ ಮೇಲೆ ಅವಲಂಬಿತರು. ರೈಲು, ವಿಮಾನ ಪ್ರಯಾಣದ ಮೇಲಿನ ರಿಯಾಯತಿಯನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದರು.

ಲೋಕದ ಯಾವುದೇ ಸಮಾಜವಾದರೂ ಹಿರಿಯ ನಾಗರಿಕರು ಆರೋಗ್ಯ ಸಮಸ್ಯೆ, ದೇಹದ ಅಸಮತೋಲನ, ನೆನಪಿನ ಹಿನ್ನಡೆ, ಕೆಲಸ ಕಳೆದುಕೊಳ್ಳುವುದು ಎಂದು ಒಂದು ರೀತಿಯಲ್ಲಿ ಮುದುಕರು ಮತ್ತೆ ಮಗು ಆಗುತ್ತಾರೆ. ಈ ಮಗುವನ್ನು ನೋಡಿಕೊಳ್ಳಲು ತಾಯಿ ಇಲ್ಲದಿರುವುದರಿಂದ ಸಮಾಜದಲ್ಲಿ ಕಡೆಗಣನೆಯೇ ಅವರ ಆಸ್ತಿ. ರೇಮಂಡ್ಸ್‍ನ ಹಣವಂತ ವಿಜಯಪತ್ ಸಿಂಗಾನಿಯಾರನ್ನು ಅವರ ಮಗ ಗೌತಮ್ ಸಿಂಗಾನಿಯಾ ಮತ್ತು ಸೊಸೆ ಮನೆಯಿಂದ ಹೊರಗೆ ಹಾಕಿದ್ದನ್ನು ಕಂಡ ದೇಶ ಭಾರತ. ಕಳೆದ ವರುಷ ಅಮೆರಿಕದಿಂದ ಬಂದ ಒಬ್ಬ ಮಗ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಒಳ್ಳೆಯ ಮಾತಾಡಿ ಹೋಗಿದ್ದ. ಕಡೆಗೆ ನೋಡಿದರೆ ಆತ ಹಿರಿಯರ ಮನೆ ಮಾರಿ, ವೃದ್ಧಾಶ್ರಮಕ್ಕೆ ಎರಡು ತಿಂಗಳ ಹಣ ಮಾತ್ರ ಕಟ್ಟಿ ಕಳಚಿಕೊಂಡಿದ್ದ. ಭಾರತದಲ್ಲಿ ಹಿರಿಯರನ್ನು ಗೌರವಿಸುವ ಸಂಪ್ರದಾಯದ ಮಾತು ಇದೆ. ಪ್ರಧಾನಿ ಮೋದಿಯವರು ಲಾಲ್ ಕೃಷ್ಣ ಅಡ್ವಾಣಿಯವರನ್ನು ಮೂಲೆಗೆ ಎಸೆದು ಈಗ ಚುನಾವಣೆ ಕಾಲದಲ್ಲಿ ತಗೊಳ್ಳಿ ಭಾರತ ರತ್ನ ಎಂದು ಗೌರವ ತೋರಿದ್ದಾರೆ.

ಜಯಾ ಬಚ್ಚನ್ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತೀರಿ. ಎಲ್ಲಿದೆ ನಿಮ್ಮ ಎಲ್ಲರೊಂದಿಗೆ ಎಂದು ಸಂಸತ್ತಿನಲ್ಲಿ ನೇರ ಕೇಳಿದರು. ಸುನಿಲ್ ದತ್‍ರ ಬಳಿಕ ಸಂಸತ್ತಿನಲ್ಲಿ ಸಾಮಾಜಿಕ ಸಮಸ್ಯೆ ಎತ್ತಿದ ಮೊದಲ ಅಭಿನೇತ್ರಿ ಜಯಾ ಬಾದುಡಿ ಬಚ್ಚನ್. ವಿಪರ್ಯಾಸವೆಂದರೆ ರಾಜಕೀಯದಲ್ಲಿ ಶಾಸಕ, ಸಂಸದ ಅಥವಾ ಸಚಿವರಿಗೆ ಸಾಧ್ಯವಿರುವ ಎಲ್ಲಾ ಪ್ರಯೋಜನಗಳನ್ನು ನೀಡಲಾಗುತ್ತದೆ ಮತ್ತು ಅವರು ಪಿಂಚಣಿ ಪಡೆಯುತ್ತಾರೆ. ಉಳಿದವರೆಲ್ಲರಿಗೂ ಏಕೆ ಬೇಡ ಎಂದು ಅರ್ಥಮಾಡಿಕೊಳ್ಳಲು ಸರ್ಕಾರ ವಿಫಲವಾಗಿದೆ. ಜನಸಾಮಾನ್ಯ ಹಿರಿಯರಿಗೆ ಸೌಲಭ್ಯಗಳನ್ನು ನಿರಾಕರಿಸಲಾಗಿದೆ. ಚುನಾವಣೆಯಲ್ಲಿ ದೇಶದ ಹಿರಿಯರು ಸರ್ಕಾರದ ವಿರುದ್ಧ ಹೋದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸರ್ಕಾರ ಬದಲಾಯಿಸುವ ಶಕ್ತಿ ಹಿರಿಯ ನಾಗರಿಕರಿಗೆ ಇದೆ, ಅವರನ್ನು ನಿರ್ಲಕ್ಷಿಸಬೇಡಿ.

ಅವರನ್ನು ದುರ್ಬಲರೆಂದು ಪರಿಗಣಿಸಬೇಡಿ ಜಯಾ ಬಚ್ಚನ್ ನೇರ ಮೋದಿಯವರ ಸರಕಾರಕ್ಕೆ ಹೇಳಿದರು.

ಹಿಂದೆ ವ್ಯಾಪ್ತಿ ಪ್ರಾಪ್ತಿ ಸಣ್ಣದು. ಹಿರಿಯರು ಇತರರೊಂದಿಗೆ ಗದ್ದೆಯಲ್ಲಿ ಸಾಧ್ಯವಾದ ಕೆಲಸ ಮಾಡಿದರೆ, ಅಜ್ಜಿಯರು ಮನೆಯಲ್ಲಿ ಮೊಮ್ಮಕ್ಕಳನ್ನು, ಆರೋಗ್ಯ ಕೆಟ್ಟವರನ್ನು ನೋಡಿಕೊಳ್ಳುವುದು ಮಾಡುತ್ತಿದ್ದರು. ಇಂದು ಆ ಸ್ಥಿತಿ ಇಲ್ಲ. ಕಾನೂನಿನ ರಕ್ಷಣೆ ಇದ್ದರೂ ಕಿರಿಯರಿಗೆ ಭಯ ಭಕ್ತಿ ಇಲ್ಲ. ಹಿರಿಯರಿಗೆ ಆ ಕಾನೂನನ್ನೆಲ್ಲ ಬಳಸಿಕೊಳ್ಳುವ ವ್ಯವದಾನ ಇಲ್ಲ. ಸಂಸದೆಯಾಗಿರುವ, ಅಭಿನಯ ಪ್ರಪಂಚದ ಜಯಾ ಬಚ್ಚನ್‍ರಿಗೆ ವೈಯುಕ್ತಿಕವಾಗಿ ಆರ್ಥಿಕ ಸಮಸ್ಯೆ ಇರಲಾರದು. ಆದರೆ ಇತರ ದೇಹದ ತೊಂದರೆ ಇರುತ್ತದೆ; ಅವರ ಪ್ರಾಯದ ಹಿರಿಯರಿಗೆ ಎಲ್ಲ ಬಾಧಕ ಇರುತ್ತದೆ.

ಹಿರಿಯರ ಅನುಕೂಲಕ್ಕಾಗಿ ಹಲವು ಯೋಜನೆಗಳ ಅಗತ್ಯವಿದೆ. ಬ್ಯಾಂಕ್‍ಗಳ ಬಡ್ಡಿದರಗಳ ಕಡಿತದಿಂದಾಗಿ ಹಿರಿಯ ನಾಗರಿಕರ ಆದಾಯವು ಕಡಿಮೆಯಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಸ್ಥಿತಿಗೆ ಪಿಂಚಣಿ ನೀಡಬೇಕು. ರೈಲು, ವಿಮಾನ ಪ್ರಯಾಣದಲ್ಲಿ ರಿಯಾಯಿತಿ ಮತ್ತೆ ಬೇಕು. ಕೊನೆಯ ಉಸಿರಿನವರೆಗೆ ವಿಮೆ ಕಡ್ಡಾಯಗೊಳಿಸಿ ಪ್ರೀಮಿಯಂ ಅನ್ನು ಸರ್ಕಾರ ಪಾವತಿಸಬೇಕು.

ಮನೆ ಇಲ್ಲದ ಹಿರಿಯ ನಾಗರಿಕರಿಗೆ ಮನೆ ನೀಡಬೇಕು.10-15 ವರ್ಷ ಹಳೆಯ ಕಾರುಗಳನ್ನು ರದ್ದುಗೊಳಿಸುವ ನಿಯಮವನ್ನು ಬಿಡಿ. ಈ ನಿಯಮ ವಾಣಿಜ್ಯ ವಾಹನಗಳಿಗೆ ಮಾತ್ರ ಅನ್ವಯಿಸಿ. ಹಿರಿಯರ ಕಾರುಗಳನ್ನು ಸಾಲದ ಮೇಲೆ ಖರೀದಿಸಲಾಗಿದೆ ಮತ್ತು ಬಳಕೆ 10 ವರ್ಷಗಳಲ್ಲಿ 40 ರಿಂದ 50000 ಕಿ.ಮೀ. ಅವರ ಕಾರುಗಳು ಹೊಸದರಂತೆ ಉತ್ತಮವಿವೆ. ಹಿರಿಯರ ಕಾರುಗಳನ್ನು ಸ್ಕ್ರ್ಯಾಪ್ ಮಾಡಿದರೆ ಹೊಸ ಕಾರುಗಳನ್ನು ನೀಡಬೇಕು ಎಂದೂ ಜಯಾ ಬಚ್ಚನ್ ಹೇಳಿದರು.

80ರ ಪ್ರಾಯ ಮೀರಿದವರು ಚೀನಾ 1.2 ಕೋಟಿ, ಯುಎಸ್‍ಎ 90 ಲಕ್ಷ, ಭಾರತ 60 ಲಕ್ಷ, ಜಪಾನ್ 50 ಲಕ್ಷ, ಜರ್ಮನಿ ಮತ್ತು ರಶಿಯಾ ತಲಾ 30 ಲಕ್ಷ ಎಂದು ವಿಶ್ವದ 64% ಹಿರಿಯರು ಈ ಆರು ದೇಶಗಳಲ್ಲಿ ಇದ್ದಾರೆ. 2050ರ ಹೊತ್ತಿಗೆ ಚೀನಾ 9.9 ಕೋಟಿ, ಭಾರತ 4.8 ಕೊಟಿ, ಯುಎಸ್‍ಎ 3 ಕೋಟಿ, ಜಪಾನ್ 1.7 ಕೋಟಿ, ಬ್ರೆಜಿಲ್ ಹಾಗೂ ಇಂಡೋನೇಶಿಯಾ ತಲಾ 1 ಕೋಟಿ ಎಂದು ಜಗತ್ತಿನ 57% 80 ಪ್ರಾಯ ದಾಟಿದವರು ಈ ಆರು ದೇಶಗಳಲ್ಲೇ ಇರುತ್ತಾರೆ. ಹಿಂದೂಪುರ, ಗುಂತಕಲ್, ಧರ್ಮಾವರಂಗಳಲ್ಲಿ ನಡೆದ ಒಂದು ಸಮೀಕ್ಷೆಯಂತೆ 65 ದಾಟಿದ ಪ್ರಾಯದವರು ಅವರ ಹಿಂದಿನ ತೂಕ ಮತ್ತು ಪೌಷ್ಟಿಕತೆ ಪ್ರಮಾಣ ಕಳೆದುಕೊಂಡಿದ್ದಾರೆ. ಕೆಲಸ ಸಿಗದೆ ಕಾಸಿಲ್ಲದವರಾಗಿದ್ದಾರೆ. ಪಾಶ್ಚಾತ್ಯ ಮತ್ತು ಯೂರೋಪಿನ ದೇಶಗಳಲ್ಲಿ ಹಿರಿಯ ನಾಗರಿಕರ ಜವಾಬ್ದಾರಿ ಸರಕಾರ ಹೊತ್ತಿದೆ. ಭಾರತದಲ್ಲಿ ಮೋದಿಯವರ ಸರಕಾರ ಬಂದ ಮೇಲೆ ಹಿರಿಯರಿಗೆ ಬ್ಯಾಂಕ್ ಬಡ್ಡಿ ಕಡಿತ ಭಾಗ್ಯ, ರೈಲು, ವಿಮಾನಗಳಲ್ಲಿ ಇದ್ದ ರಿಯಾಯಿತಿ ತೆಗೆದು ಹಾಕಿದ ಗ್ಯಾರಂಟಿ ನೀಡಿದೆ

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.