Home Blog Left SidebarPage 798

ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಘಟಕ ಉದ್ಘಾಟನೆ

ಬಂಟ್ವಾಳ : ದಕ್ಷಿಣಕನ್ನಡ ಜಿಲ್ಲೆಯ ಪ್ರಥಮ ಆಕ್ಸಿಜನ್ ಉತ್ಪಾದನಾ ಘಟಕ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಉದ್ಘಾಟನೆ ಗೊಂಡಿತು. ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕರೋನಾ ನಿಗ್ರಹಕ್ಕೆ ಪೂರಕವಾಗಿ ಆಕ್ಸಿಜನ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸ್ಥಾಪನೆಯಾದ ಪ್ರಥಮ ಆಕ್ಸಿಜನ್ ಘಟಕ ಇದಾಗಿದೆ ಎಂದರು. ಬಂಟ್ವಾಳದಲ್ಲಿ ಕರೋನಾ ವಿರುದ್ಧ ಹೋರಾಟ

ಕಾರು ಹತ್ತಿಸಿ ಕೊಲೆ: ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷ ಸೆರೆ

ಕುಂದಾಪುರ: ಯಡಮೊಗೆ ಸಾಮಾಜಿಕ‌ ಕಾರ್ಯಕರ್ತನ ಮೇಲೆ ಕಾರು ಹತ್ತಿಸಿ ಕೊಲೆಗೈದ ಖೇದಕರ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪಂಚಾಯತ್ ಅಧ್ಯಕ್ಷನನ್ನು ಶಂಕರನಾರಾಯಣ ಪೊಲೀಸರು ಕ್ಷಿಪ್ರಗತಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರ ರಾತ್ರಿ ಸಾಮಾಜಿಕ‌ ಕಾರ್ಯಕರ್ತ ಉದಯ್ ಗಾಣಿಗ (45) ಎಂಬವರ ಮೇಲೆ ಅವರ ಮನೆ ಎದುರಿನ‌ ರಸ್ತೆಯಲ್ಲೇ ಕಾರು ಹರಿಸಿ ಅವರನ್ನು ಕೊಲೆಗೈಯ್ಯಲಾಗಿತ್ತು. ಉದಯ್ ಪತ್ನಿ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ‌ ಶಂಕರನಾರಾಯಣ ಪೊಲೀಸರು

ಶ್ರೀನಿವಾಸ್ ವಿವಿಯ ಕಾಲೇಜ್ ಆಫ್ ಏವಿಯೇಶನ್ ಸ್ಟಡೀಸ್: ವಿದ್ಯಾರ್ಥಿಗಳಿಗಾಗಿ ವೀಡಿಯೋ ಮೇಕಿಂಗ್ ಸ್ಪರ್ಧೆ

ಶ್ರೀನಿವಾಸ್ ಯುನಿವರ್ಸಿಟಿಯ ಕಾಲೇಜ್ ಆಫ್ ಏವಿಯೇಷನ್ ಸ್ಟಡೀಸ್‌ನ ಬಿಬಿಎ ಏವಿಯೇಶನ್ ಮ್ಯಾನೇಜ್‌ಮೆಂಟ್, ಏವಿಯೇಶನ್ ಲಾಜಿಸ್ಟಿಕ್ ಮ್ಯಾನೇಜ್‌ಮೆಂಟ್ ಮತ್ತು ಏವಿಯೇಶನ್ ಟ್ರಾವೆಲ್ ಮತ್ತು ಟೂರಿಸಂ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ವೀಡಿಯೋ ಮೇಕಿಂಗ್ ಸ್ಪರ್ಧೆಯನ್ನು ಆಯೋಜಿಸಲಾಯಿತು. ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಸಮಾಜಸೇವಾ ವಿಭಾಗದ ವತಿಯಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಶ್ವ

ಶ್ರೀನಿವಾಸ ವಿವಿಯ ಕಾಲೇಜ್ ಆಫ್ ಕಾಮರ್ಸ್ & ಮ್ಯಾನೇಜ್‌ಮೆಂಟ್: ವಿಶ್ವ ಪರಿಸರ ದಿನ ಆಚರಣೆ

ಶ್ರೀನಿವಾಸ ವಿಶ್ವವಿದ್ಯಾಲಯ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ವತಿಯಿಂದ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ವರ್ಚುವಲ್ ವೇದಿಕೆಯ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಬಿ.ಕಾಂ. ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆ ಕಾಪಾಡುವುದು, ಸಸಿಗಳನ್ನು ನೆಡುವುದನ್ನು ವೀಡಿಯೋ ಮಾಡಲು ವಿದ್ಯಾರ್ಥಿಗಳಿಗೆ

ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಕಾಂಗ್ರೆಸ್ ವತಿಯಿಂದ ಮಾಸ್ಕ್ ವಿತರಣೆ

ಪುತ್ತೂರು: ನಗರ ಕಾಂಗ್ರೆಸ್ ವತಿಯಿಂದ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಎನ್95 ಮಾದರಿಯ ಮಾಸ್ಕನ್ನು ಪತ್ರಿಕಾಭವನದಲ್ಲಿ ವಿತರಿಸಲಾಯಿತು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾಸ್ಕ್‍ವಿತರಿಸಿ ಮಾತನಾಡಿ, ಕೊರೋನಾ ಸಂಕಷ್ಟ ಕಾಲದಲ್ಲಿ ಕೊರೋನಾ ವಾರಿಯರ್ಸ್ ಆಗಿ ಸಮಾಜದ ಜನರ ನಡುವೆ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಸರಕಾರ ಕೊಡುಗೆಗಳನ್ನು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಒತ್ತಾಯಿಸಿದರು. ಈ

ಲಸಿಕೆ ನೀಡಲು ಸರ್ಕಾರ ಮೀನಾಮೇಷ: ಐವನ್ ಡಿಸೋಜಾ

ಕೊರೊನಾ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿರುವ ಸರ್ಕಾರ ಯಾಕೆ ಉಚಿತವಾಗಿ ಲಸಿಕೆ ನೀಡಲು ಮೀನಾಮೇಷ ಎಣಿಸುತ್ತಿದೆ. ಲಸಿಕೆ ಪಡೆದವರು ಯಾರೂ ಸತ್ತಿಲ್ಲ. ಲಸಿಕೆ ಸಿಗದೇ ಆದಂತಹಾ ಸಾವು ನೋವಿಗೆ ಬಿಜೆಪಿ ಸರ್ಕಾರ ನೇರ ಹೊಣೆ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಆರೋಪಿಸಿದ್ದಾರೆ.  ಅವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಲಸಿಕೆಯನ್ನು ಪಡೆಯದ ಕಾರಣ ನಮ್ಮವರು ಸತ್ತಿದ್ದಾರೆ ಎಂದು ಹೇಳುವ ಮಂದಿ

ಹಿಂದುಳಿದ ವರ್ಗಕ್ಕೆ ಪ್ಯಾಕೇಜ್ ಇಲ್ಲ: ಕಾಂಗ್ರೆಸ್ ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ವಿಶ್ವಾಸ್ ದಾಸ್

ಕೊರೊನಾದಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಧ್ಯಮ ವರ್ಗ, ಹಿಂದುಳಿದ ವರ್ಗದವರು ಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಘೋಷಿಸಿರುವ ಅನುದಾನ ಯಾವುದಕ್ಕೂ ಸಾಕಾಗುವುದಿಲ್ಲ. ಕನಿಷ್ಠ ಹತ್ತು ಸಾವಿರ ಆದರೂ ಅನುದಾನವನ್ನು ಕಾರ್ಮಿಕರಿಗೆ, ಬಡವರಿಗೆ ನೀಡಬೇಕು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ವಿಶ್ವಾಸ್ ದಾಸ್ ಹೇಳಿದರು. ಅವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಚಿವ ಅರವಿಂದ ಲಿಂಬಾವಳಿ

ಕರ್ನಾಟಕ ಸರಕಾರ ರಾಜ್ಯ ಸರ್ಕಾರದ ಮಾನ್ಯ ಅರಣ್ಯ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಅರವಿಂದ ಲಿಂಬಾವಳಿಯವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ದೇವರ ದರ್ಶನ ಪಡೆದರು. ಬಳಿಕ ಶ್ರೀ ಕ್ಷೇತ್ರ ದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.ಈ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಜೊತೆಗಿದ್ದರು.