ಬಿಎಂಆರ್ ಗ್ರೂಪ್ ವತಿಯಿಂದ ಬಿಎಂಆರ್ ಟ್ರೋಫಿ-2024: ಜ.17ರಿಂದ 21ರ ವರೆಗೆ ಕ್ರಿಕೆಟ್: ಹರಾಜು ಪ್ರಕ್ರಿಯೆ

ಮಂಗಳೂರು : ಬಿಎಂಆರ್ ಗ್ರೂಪ್ ವತಿಯಿಂದ ಬಿಎಂಆರ್ ಟ್ರೋಫಿ-2024 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಹರಾಜು ಪ್ರಕ್ರಿಯೆ ಕೃಷ್ಣಾಪುರದ ಎಮ್‌ಜೆಎಮ್ ಹಾಲ್‌ನಲ್ಲಿ ನಡೆಯಿತು.

ಜನವರಿ 12 ರಿಂದ 21ರ ವರೆಗೆ 32ತಂಡಗಳ ಮದ್ಯೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವು ಕೃಷ್ಣಾಪುರದ ಪ್ಯಾರಡೈಸ್ ಮೈದಾನದಲ್ಲಿ ನಡೆಯಲಿದ್ದು, ಅದರ ಬಿಡ್ಡಿಂಗ್ ಪ್ರಕ್ರಿಯೆಯು ಗಣ್ಯರ ಸಮ್ಮುಖದಲ್ಲಿ ನೆರವೇರಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಮಾತನಾಡಿ, ಸಮಾಜಮುಖಿ ಕೆಲಸಗಳ ಮೂಲಕ ಹೆಸರುವಾಸಿಯಾಗಿದ್ದ ದಾವುದ್ ಹಕೀಮ್ ಅವರು ತಮ್ಮ ತಂಡದೊಂದಿಗೆ ಕ್ರಿಕೆಟ್‌ನ ಎಲ್ಲಾ ಕ್ಲಬ್‌ನ ಮಾಲಕರನ್ನು, ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ಸಂಪರ್ಕಿಸಿ ಇಂತಹ ಕ್ರಿಕೆಟ್ ಟೂರ್ನಮೆಂಟ್ ಮಾಡುವ ಕನಸನ್ನು  ನನಸು ಮಾಡಲು ಹೊರಟಿದ್ದು, ಜ.17ರಂದು ಆರಂಭವಾಗಿ ಜ.21ರಂದು ಪ್ರತಿಷ್ಠಿತ ಕಪ್ 32 ನಾಯಕರಲ್ಲಿ ಯಾರ ಮಡಿಲಿಗೆ ಸೇರಲಿದೆ ಎನ್ನುವುದನ್ನು ನೋಡುವ ಕಾತರದಲ್ಲಿದ್ದೇವೆ ಎಂದರು.

ಬಿಎಂಆರ್ ಗ್ರೂಪ್‌ನ ಆಡಳಿತ ನಿರ್ದೇಶಕರಾದ ದಾವೂದ್ ಹಕೀಮ್ ಅವರು ಮಾತನಾಡಿ, ಬಿಎಂ ಆರ್ ಟ್ರೋಫ್ 2024 ಎಂಬ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಅನ್ನು ಯಾವುದೇ ಲಾಭಕ್ಕಾಗಿ ಆಯೋಜಿಸಲದೆ, ಸೌಹಾರ್ದಯುತವಾಗಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಆಟವನ್ನು ಆಡಬೇಕೆಂಬ ಉದ್ದೇಶದಿಂದ ಆಯೋಜಿಸಲಾಗಿದೆ ಎಲ್ಲರೂ ಸಹಕರಿಸಿ ಯಶಸ್ವಿಗೊಳಿಸಿ ಎಂದರು.

ಮುನೀರ್ ಟ್ರೇಡರ್‍ಸ್ ಮಾಲಕರಾದ ಅನ್ವರ್, ಸ್ಕೈ ವಾಕ್ ಸಂಸ್ಥೆಯ ಮಾಲಕರು ಯೂನುಸ್, ಜೆ ಎ ಆರ್ ಕನ್ಟ್ರಕ್ಷನ್‌ನ ಮಾಲಕರಾದ ಕಬೀರ್, ಕೃಷ್ಣಾಪುರದ ನವರಂಗ್ ಸಂಸ್ಥೆಯ ಅಧ್ಯಕ್ಷರಾದ ರವಿ ಪೂಜಾರಿ, ಅಶ್ಯುಟ್ರೆಕ್ ಸಂಸ್ಥೆಯ ಮಾಲಕರಾದ ಮೆಫ್ಯೂಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.