ಬೆಳ್ತಂಗಡಿ: ಬಜಿರೆ ಹೊಸಪಟ್ಣ ಶಾಲೆಯಲ್ಲಿ ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನ
ಬೆಳ್ತಂಗಡಿ: ತಾಲೂಕಿನ ಬಜಿರೆ ಗ್ರಾಮದ ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 265ನೇ ಕಾರ್ಯಕ್ರಮವಾಗಿ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗಾಗಿ ಸಸ್ಯರಾಶಿಗಳ ಮಹತ್ವ ಎಂಬ ಘೋಷಣೆಯಡಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.
ಗುಬ್ಬಚ್ಚಿ ಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಮಕ್ಕಳೊಂದಿಗೆ ಸಂವಾದ ನಡೆಸಿ ಪಕ್ಷಿ ಸಂಕುಲಗಳ ಉಳಿವಿನ ಮಹತ್ವದ ಬಗ್ಗೆ ಮನವರಿಕೆ ಮಾಡಿದರು. ಶಿಕ್ಷಕಿಯರು, ಮಕ್ಕಳು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮುಖ್ಯ ಶಿಕ್ಷಕಿ ನಿರ್ಮಲ ಬಿ.ಎಸ್.ಕಾರ್ಯಕ್ರಮ ನಿರೂಪಿಸಿ ವಂದಿಸಿದರು.