ಬ್ರಹ್ಮಾವರ : ಹೆದ್ದಾರಿ ಬದಿ ಸ್ವಚ್ಛತಾ ನಿರ್ವಹಣೆ
ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66 ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ಸರಿಯಾಗಿ ಹರಿದುಹೋಗದೆ ರಸ್ತೆಯಲ್ಲಿಯೇ ತುಂಬಿಹರಿಯುವ ಸಮಸ್ಯೆಗೆ ಬ್ರಹ್ಮಾವರ ಭಾಗದಲ್ಲಿ ಪೂರ್ವಸಿದ್ಧತೆ ಕಾರ್ಯ ಚುರುಕಿನಿಂದ ನಡೆಯುತ್ತಿದೆ.

ಪ್ರತೀವರ್ಷ ರಸ್ತೆಯಲ್ಲಿ ನೀರುನಿಂತು ರಸ್ತೆ ಬದಿಯಲ್ಲಿ ಹೋಗುವ ಪ್ರಯಾಣಿಕರಿಗೆ ಮತ್ತು ಬೇರೆ ವಾಹನಗಳಿಗೆ ಕೊಳಕು ನೀರು ಹಾರಿ ರಾದ್ಧಾಂತವಾಗುವ ಸಮಸ್ಯೆಗೆ ಹಿಂದೆ ಇದ್ದ ನವಯುಗ ಕಂಪೆನಿಯಿಂದ ಎಚ್ ಸಿ ನಂಬರ್ ಒನ್ ಸಂಸ್ಥೆಗೆ ಬಂದ ಬಳಿಕ ಈ ವರ್ಷ ಹೆದ್ದಾರಿಯ ಸ್ವಚ್ಛತಾ ನಿರ್ವಹಣೆ ಉತ್ತಮ ಕಾರ್ಯ ಮಾಡುತ್ತಿದೆ.

ಸಾಸ್ತಾನ ಟೋಲ್ ಗೇಟ್ಗೆ ಸಂಬಂಧಿಸಿ ಉದ್ಯಾವರದಿಂದ ಕುಂದಾಪುರ ತನಕ ಸ್ವಚ್ಛತಾ ನಿರ್ವಹಣೆ ಹೊಣೆ ಹೊತ್ತವರು ಕಳೆದ ಕೆಲವು ದಿನದಿಂದ ರಸ್ತೆಯ ಬದಿಯಲ್ಲಿ ಇರುವ ಕಸ ಕಡ್ಡಿಗಳು ಗಿಡಗಂಟಿಗಳನ್ನು ಕಟಾವು ಮಾಡಿ ರಸ್ತೆ ನಡುವೆ ಇರುವ ಹೂವಿನಗಿಡಕ್ಕೆ ನೀರು ಹಾಯಿಸಿ, ರಸ್ತೆಯ ಬದಿಯಲ್ಲಿ ಇರುವ ಮಣ್ಣು ಮರಳನ್ನು ಸ್ವಚ್ಛಗೊಳಿಸಿ ಅಲ್ಲಲ್ಲಿ ಬಿದ್ದ ರಾಶಿ ರಾಶಿ ಖಾಲಿ ಬಾಟಲಿಗಳನ್ನು ತೆರವು ಮಾಡುತ್ತಿದಾರೆ.

ಹಲವಾರು ಕಾರ್ಮಿಕರು ಒಂದೆಡೆ ಸ್ವಚ್ಛತಾ ಕಾರ್ಯ ಇನ್ನೊಂದೆಡೆಯಲ್ಲಿ ರಸ್ತೆ ನಡುವೆ ಇರುವ ದೀಪಗಳನ್ನು ಬದಲಿಸಿ ಬದಲಿ ಬೆಳಕಿನ ವ್ಯವಸ್ಥೆ ಕಾಮಗಾರಿ ನಡೆಯುತ್ತಿದ್ದು ಹೊಸ ಗುತ್ತಿಗೆದಾರರು ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಬರ್ಜರಿ ಪೂರ್ವ ಸಿದ್ಧತೆ ಕಂಡುಬರುತ್ತಿದೆ.



















