ಬ್ರಹ್ಮಾವರ : ಮಾದಕ ದ್ರವ್ಯ ವಿರೋಧಿ ಮತ್ತು ಜಾಗೃತಿ ಕಾರ್ಯಕ್ರಮ

ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್, ಬ್ರಹ್ಮಾವರ ಪೊಲೀಸ್ ಠಾಣೆಯ ಸಹಯೋಗದಲ್ಲಿ ಮಾದಕ ದ್ರವ್ಯ ವಿರೋಧಿ ಮತ್ತು ಜಾಗೃತಿ ಕಾರ್ಯಕ್ರಮ ಬ್ರಹ್ಮಾವರ ಕ್ರಾಸ್‍ಲ್ಯಾಂಡ್ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ರಾಜಶೇಖರ ವಂದಲಿ ಮಾತನಾಡಿ, ನಾನಾ ಮಾದಕ ವಸ್ತುಗಳ ಜಾಲಕ್ಕೆ ಯುವಜನರನ್ನೆ ಟಾರ್ಗೆಟ್ ಮಾಡಲಾಗುತ್ತಿರುವ ಕಾರಣ ಯುವಸಮೂಹ ಜಾಗೃತರಾಗ ಬೇಕಾಗಿದೆ.

ಮೋಜು ಮಜಾಕ್ಕೆ ಒಮ್ಮೆ ಕೂತೂಹಲಕ್ಕೆ ಉಪಯೋಗ ಮಾಡುವ ಮಾದಕ ವಸ್ತು ಮತ್ತೆ ಅದರ ಜಾಲದಿಂದ ಹೊರ ಬರಲಾಗದೆ ಸಮಾಜಕ್ಕೆ ಕಂಟಕರಾಗುವ ಹಂತಕ್ಕೆ ತಲುಪುತ್ತಾರೆ. ದೇಶದ ಯುವ ಸಂಪತ್ತು ಬಲಹೀನರಾಗದಂತೆ ಸಮಾಜದ ಆಸ್ತಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಠಾಣೆಯ ಮಹಿಳಾ ಸಬ್ ಇನ್ಸ್ ಪೆಕ್ಟರ್ ಪುಷ್ಪಾ ಕಾಲೇಜಿನ ಪ್ರಾಂಶುಪಾಲ ಪ್ರೋ.ಜಾನ್ಸನ್ ಜೇಕಬ್, ಬ್ರಹ್ಮಾವರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ದಿಲೀಪ್, ಸುರೇಶ್ ಬಾಬು, ಪ್ರಶಾಂತ್ ಹಾಜರಿದ್ದರು.

Related Posts

Leave a Reply

Your email address will not be published.