ಶ್ರೀಮಾಧವ ಮಂಗಲ ಪೂಜಾರ್ಯರ ಬ್ರಹತ್ ಕಂಚಿನ ಪುತ್ಥಳಿ ನಿರ್ಮಾಣದ ಮನವಿ ಪತ್ರ ಹಾಗೂ ರಶೀದಿ ಪುಸ್ತಕ ಬಿಡುಗಡೆ
ಉಚ್ಚಿಲ:ಮೊಗವೀರ ಸಮಾಜದ ಮೂಲ ಧಾರ್ಮಿಕ ಕೇಂದ್ರವಾದ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಲಭ್ಯವಿರುವ ಲಿಖಿತ ಮಾಹಿತಿಯಂತೆ, ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗುರು ಪರಂಪರೆಯ 9ನೇ ಹಾಗೂ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಬ್ರಹತ್ ಕಂಚಿನ ಪುತ್ಥಳಿಯನ್ನು ಅಂದಾಜು 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡುವ ಸಲುವಾಗಿ ರೂಪಿಸಿದ ಮನವಿ ಪತ್ರ ಹಾಗೂ ರಶೀದಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಶ್ರೀ ಕ್ಷೇತ್ರದ ಕಚೇರಿಯಲ್ಲಿ ನೆರವೇರಿತು.

ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ನಾಡೋಜ ಡಾ. ಜಿ. ಶಂಕರ್ ಅವರು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಗುರುಗಳ ಪುತ್ಥಳಿಯನ್ನು ಉಚ್ಚಿಲದಲ್ಲಿ ನಿರ್ಮಿಸಬೇಕೆಂಬ ವಿಚಾರದ ಪ್ರಸ್ತಾಪ ಆಗಿರುತ್ತದೆ ಹಾಗೂ ಸಮಾಜದ ಪ್ರತಿಯೊಂದು ಮನೆಯಿಂದಲೂ ಶಕ್ತಿ ಅನುಸಾರವಾಗಿ ಗುರು ಕಾಣಿಕೆ ರೂಪದಲ್ಲಿ ಗರಿಷ್ಠ ಮಟ್ಟದಲ್ಲಿ ವಂತಿಗೆಯನ್ನು ಸಲ್ಲಿಸಿ, ಮೊಗವೀರ ಸಮಾಜದ ಸ್ವಾಭಿಮಾನದ ಸಂಕೇತವಾಗಿರುವ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸಬೇಕೆಂದ ಮನವಿ ಮಾಡಿದರು.
ರಶೀದಿ ಪುಸ್ತಕವನ್ನು ಬಿಡುಗಡೆಗೊಳಿಸಿದ ದ.ಕ. ಮೊಗವೀರ ಮಹಾಜನ ಸಂಘ ರಿ. ಉಚ್ಚಿಲ ಇದರ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್ ಅವರು ಮಾತನಾಡಿ 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಸಮಾಜದ ಸರ್ವ ಬಂಧುಗಳು ಒಗ್ಗಟ್ಟಿನಿಂದ ಶ್ರಮವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಗಿರಿಧರ್ ಸುವರ್ಣ, ಮೋಹನ್ ಬೆಂಗ್ರೆ, ಮನೋಜ್ ಉಳ್ಳಾಲ, ಪದ್ಮಾಕರ್ ಮಸ್ಕತ್, ಶರಣ್ ಕುಮಾರ್ ಮಟ್ಟು, ಸತೀಶ್ ಕುಂದರ್ ಮಲ್ಪೆ, ರಾಜೇಶ್ ಉಳ್ಳಾಲ, ಪವನ್ ಆನಂದ್ ಎರ್ಮಾಳ್, ಶ್ರೀಮತಿ ಕವಿತಾ ಶರತ್, ವಾಸುದೇವ ಸಾಲ್ಯಾನ್, ದಿನೇಶ್ ಎರ್ಮಾಳ್, ಶಿವರಾಮ್ ಕೋಟ, ಶ್ರೀಮತಿ ಸುಗುಣ ಕರ್ಕೇರ, ಸದಾನಂದ ಬಂಗೇರ ಉಳ್ಳಾಲ, ಎಂ.ಎಸ್. ಸಂಜೀವ ಕೋಟ, ಅಶೋಕ್ ಉಪ್ಪಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


















