Home ಕರಾವಳಿ Archive by category ಉಡುಪಿ (Page 11)

ಕಾರ್ಕಳ : ಕಾನೂನು ಬಾಹಿರ ಮಣ್ಣು ಸಾಗಾಟ ವಾಹನಗಳಿಗೆ ದಂಡ ವಿಧಿಸಲು ಡಿವೈಎಸ್ಪಿ ಸೂಚನೆ

ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿ ರಸ್ತೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ನಡೆಸುತ್ತಿರುವ ವಾಹನಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲ್ಲಗುಜ್ಜಿ ಕಾಪು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಕಟಪಾಡಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯಾವುದೇ ಮೂಲಾಜಿ ಇಲ್ಲದೆ ಟಿಪ್ಪರಲ್ಲಿ ಕ್ಯಾಬಿನ್

ಜೂಜಾಟದ ಕೋಳಿ ಅಂಕಕ್ಕೆ ದಾಳಿ : ಗ್ರಾಮ ಪಂಚಾಯತ್ ಸದಸ್ಯನ ಬಂಧನ

ಹಿರೇಬೆಟ್ಟು ಗ್ರಾಮದ ದೂಮಾವತಿ ದೈವಸಾನದ ಬಳಿಯ ಕಬ್ಯಾಡಿ ಕಂಬಳ ಗದ್ದೆಯ ಸೆರಗಲ್ಲಿ ಜೂಜು ಪಣವೊಡ್ಡಿ ಕೋಳಿ ಅಂಕ ನಡೆಸಿದ್ದ 11 ಮಂದಿಯನ್ನು ಮಣಿಪಾಲ ಠಾಣೆಯ ಪೋಲೀಸರು ಕೋಳಿಗಳ ಸಹಿತ ಬಂಧಿಸಿದ್ದಾರೆ. 80ನೇ ಬಡಗಬೆಟ್ಟು ಗ್ರಾಮ ಪಂಚಾಯತ್‍ನ ಬಿಜೆಪಿ ಬೆಂಬಲಿತ ಸದಸ್ಯ ಶುಭಕರ ಶೆಟ್ಟಿ, ರಾಕೇಶ, ಉಮೇಶ, ವಿಘ್ನೇಶ, ವಿವೇಕ, ದಿನೇಶ, ರತ್ನಾಕರ, ವಿಠಲ, ರಾಜೇಶ, ಜಯ, ಸುಂದರ ಬಂಧಿತ ಆರೋಪಿಗಳು. ಇವರಿಂದ 5,450 ರೂಪಾಯಿ ಮೌಲ್ಯದ 10 ಹುಂಜ, ಜೂಜಾಡಿದ 2,800 ರೂಪಾಯಿ

ಉಡುಪಿ: ತುಳು ಜಾನಪದ ಲೋಕ ಬರೆದಿಟ್ಟ ಬಾಬು ಅಮೀನ್: 80ರ ಪ್ರಾಯದ ಅಭಿನಂದನಾ ಸಮಾರಂಭ

ಉಡುಪಿ ಬನ್ನಂಜೆಯ ನಾರಾಯಣ ಗುರು ಭವನದ ಕೆ. ತೋಮ ಶ್ಯಾನುಭೋಗ ವೇದಿಕೆಯಲ್ಲಿ ನಡೆದ ಬನ್ನಂಜೆ ಬಾಬು ಅಮೀನ್ ಅವರಿಗೆ ೮೦ರ ಪ್ರಾಯದ ಅಭಿನಂದನಾ ಸಮಾರಂಭ ನಡೆಯಿತು. ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಅವರು ಬಾಬು ಅಮೀನರನ್ನು ಜಾನಪದ ಅಧ್ಯಯನ ವೀರ ಎಂದು ಬಣ್ಣಿಸಿದರು. ಬನ್ನಂಜೆಯವರ ಜಾನಪದ ಬರಹ ಸಂಪತ್ತು ಬೆಲೆ ಕಟ್ಟಲಾಗದ್ದು ಎಂದು ಅವರು ಕೊನೆಯಲ್ಲಿ ನಡೆದ ಅಭಿನಂದನಾ ನುಡಿ ಭಾಷಣದಲ್ಲಿ ಹೇಳಿದರು. ಬಾಬು ಅಮೀನರ ಮುದ್ರಿತ ಪುಸ್ತಕಗಳಿಂದಲೇ ಅವರ ಅಕ್ಷರ ತುಲಾಬಾರ

ಕಾಪು: ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ ಪ್ರಕರಣ: ಸಾಕು ಮಗಳನ್ನು ಕರೆದೊಯ್ದ ಪ್ರೇಮಿ ಮತ್ತು ನೆರವಾದ ಆರೋಪಿಗಳ ಬಂಧನ

ಸಾಕು ಮಗಳು ಮನೆಯಿಂದ ನಾಪತ್ತೆಯಾದ ಕಾರಣ ಮನನೊಂದು ನೇಣಿಗೆ ಶರಣಾದ ಸಮಾಜ ಸೇವಕ ಕೆ.ಲೀಲಾಧರ ಶೆಟ್ಟಿ ದಂಪತಿಯ ಸಾವಿಗೆ ಕಾರಣರಾದ ಸಾಕು ಪುತ್ರಿಯನ್ನು ಕಾಪು ಪೊಲೀಸರು ಕುಂಬಳೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಪ್ರಾಪ್ತ ವಯಸ್ಸಿನ ಸಾಕು ಮಗಳು, ಆಕೆಯ ಪ್ರಿಯಕರ ಮತ್ತು ಆತನಿಗೆ ನೆರವಾದ ಇತರ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ಮುಂದುವರಿಸಿದ್ದಾರೆ. ಬಾಲಕಿಯ ಪ್ರಿಯಕರ ಶಿರ್ವ ನಿವಾಸಿ ಗಿರೀಶ್, ಆತನಿಗೆ ನೆರವಾದ ರೂಪೇಶ್, ಅಜೀಜ್ ಮತ್ತು

ಶಿರೂರು: ದೋಣಿ ದುರಂತ, ಇಬ್ಬರು ಮೀನುಗಾರರು ದುರ್ಮರಣ

ಶಿರೂರು: ಮೀನುಗಾರಿಕೆಗೆ ತೆರಳಿ ವಾಪಾಸ್ಸು ಬರುವ ವೇಳೆ ದೋಣಿ ಮಗುಚಿ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡ ಘಟನೆ ಶಿರೂರು ಕಳುವಿತ್ಲುವಿನಲ್ಲಿ ನಡೆದಿದೆ. ಭಾನುವಾರ ರಾತ್ರಿ ಶಿರೂರು ಕಳುಹಿತ್ಲುನಿಂದ ಮೀನುಗಾರಿಕೆಗೆ ತೆರಳಿದ ನುಮೈರಾ ಅಂಜುಮ್ ದೋಣಿಯಲ್ಲಿ ೩ ಜನ ಮೀನುಗಾರರಿದ್ದರು. ಮೀನುಗಾರಿಕೆ ನಡೆಸಿ ವಾಪಾಸ್ಸು ಬರುವಾಗ ಶಿರೂರು ಕಳುಹಿತ್ಲು ಅಳಿವೆ ಸಮೀಪ ಅರಬ್ಬೀ ಸಮುದ್ರದಲ್ಲಿ ದೋಣಿ ಮಗುಚಿ ದೋಣಿಯಲ್ಲಿದ್ದ ಅಬ್ಸುಲ್ ಸತ್ತರ್ ಹಡವಿನಕೋಣೆ, ಶಿರೂರು ಮಿಸ್ಬಾ

ಕುಂದಾಪುರ: ಸೌಹಾರ್ದ ಕ್ರಿಸ್ಮಸ್ ಆಚರಣೆ

ಉಡುಪಿ: ಕ್ರಿಸ್ತ ಜಯಂತಿ ಹಬ್ಬವು ಶಾಂತಿಯನ್ನು ಸಾರುತ್ತದೆ. ಶಾಂತಿಯ ಸಾಧನವಾಗಲು, ಶಾಂತಿಯ ದೂತರಾಗಲು ನಮ್ಮನ್ನು ಪ್ರೇರೇಪಿಸುತ್ತದೆ. ಕ್ರಿಸ್ತ ಜಯಂತಿಯ ಪ್ರೀತಿಯ ಜ್ಯೋತಿ ನಮ್ಮ ತನುಮನಗಳಲ್ಲಿ ಪ್ರಜ್ವಲಿಸಬೇಕಾದರೆ ನಾವು ಕ್ರಿಸ್ತರಂತೆ ಪ್ರೀತಿ ಸ್ವರೂಪರಾಗಿ ಸೇವಾಮನೋಭಾವದಿಂದ ನಿಸ್ವಾರ್ಥಿಗಳಾಗಬೇಕು ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಶನಿವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ 

ಉಡುಪಿ: ಸೇಲ್ ಎಕ್ಸ್‌ ಪರ್ಟ್ ಬ್ಯುಸಿನೆಸ್ ಸೊಲ್ಯೂಷನ್ಸ್‌ ನಿಂದ ರೂಪಿ ಬಾಸ್ ಎಮ್‌ ಎಸ್‌ಎಮ್‌ ಇ ಮಿಲನ್ ಕಾರ್ಯಕ್ರಮ

ಸೇಲ್ ಎಕ್ಸ್‌ಪರ್ಟ್ ಬ್ಯುಸಿನೆಸ್ ಸೊ ಲ್ಯೂಷನ್ಸ್ ವತಿಯಿಂದ ಎನ್‌ಎಸ್‌ಇ ಎಮರ್ಜ್, ಮತ್ತು ರೋಟರಿ ಉಡುಪಿ ಮಿಡ್ ಟೌನ್ ಸಹಯೋಗದೊಂದಿಗೆ ಎಮ್‌ಎಸ್‌ಎಮ್‌ಇ ಮಿಲನ್ ಡಿ.19ರಂದು ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದಾರೆ. ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಎಮ್‌ಎಸ್‌ಎಮ್‌ಇ ಬ್ಯುಸ್‌ನೆಸ್ ಓನರ್ಸ್‌ಗಳಿಗೆ ಖುಷಿಯ ವಿಚಾರ. ರೂಪಿ ಬಾಸ್ಎ ಮ್‌ಎಸ್‌ಎಮ್‌ಇ ಮಿಲನ್ ಎಂಬ ಕಾರ್ಯಾಗಾರವನ್ನು ಆಯೋಜಿಸಿದ್ದು, ಅಮೂಲ್ಯವಾದ ನಾಯಕತ್ವದ ಜ್ಞಾನ, ಮಾರಾಟ

ಪಡುಬಿದ್ರಿ: ಅಕ್ರಮ ಮರಳು ಸಾಗಾಟ: ಮಾಲಕ-ಚಾಲಕನ ವಿರುದ್ಧ ಪ್ರಕರಣ ದಾಖಲು

ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯ ನಯಾತ್ ಕಟ್ಟಡದ ಮುಂಭಾಗ ಕದ್ದು ಅಕ್ರಮವಾಗಿ ಸಾಗಿಸುತ್ತಿದ್ದ ಟಿಪ್ಪರ್, ಮರಳು ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.ಆರೋಪಿಗಳಾದ ಮಂತ್ರದೇವತೆ ಹೆಸರಿನ ಟಿಪ್ಪರ್ ಮಾಲಕ ಗುರುಪುರದ ರಾಜೇಶ್ ಹಾಗೂ ಅದರ ಚಾಲಕ ನಂದಿಕೂರು ದೇವಸ್ಥಾನ ಬಳಿಯ ನಿವಾಸಿ ಸರ್ಫ್ರಾಜ್ ಆರೋಪಿಗಳು.ಟಿಪ್ಪರ್ ಮಾಲಿಕನ ಸೂಚನೆಯಂತೆ ವಾಹನದಲ್ಲಿ ಮರಳು ತುಂಬಿಸಿ ಪಡುಬಿದ್ರಿ ಬೀಚ್ ಕಡೆ ಸಾಗಿಸಲು ಹೋಗುತ್ತಿದ್ದ ಟಿಪ್ಪರನ್ನು ಪಡುಬಿದ್ರಿ ಪಿಎಸ್ ಐ

ಕಾಪು: ತನಿಯ ಮೋಟಾರ್ಸ್ ಸೂಪರ್ ಆಟೋ ಶೋರೂಂ ಶುಭಾರಂಭ

ಮೊಂಟ್ರಾ ಇಲೆಕ್ಟ್ರಿಕ್ ಅಧಿಕೃತ ಡೀಲರ್‌ನ ತನಿಯ ಮೋಟಾರ್ಸ್ ಸೂಪರ್ ಆಟೋ ಶೋರೂಂ ಕಾಪುವಿನ ಕೊಪ್ಪಲಂಗಡಿಯ ಸ್ವಸ್ತಿಕ್ ಎನ್‌ಕ್ಲೇವ್‌ನಲ್ಲಿ ಶುಭಾರಂಭಗೊಂಡಿತು. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹಾಗೂ ಉತ್ಪಾದನೆ ಹೆಚ್ಚಾಗಿದೆ. ಕಾರು, ಸ್ಕೂಟರ್, ಬೈಕ್ ಹಾಗೂ ತ್ರಿಚಕ್ರ ವಾಹನಗಳ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಿದೆ. ಅಂತೆಯೇ ಕಾಪು ವ್ಯಾಪ್ತಿಯ ಗ್ರಾಹಕರಿಗೆ ಸಿಹಿ ಸುದ್ದಿ ಎಂಬಂತೆ ಕಾಪುವಿನ ಕೊಪ್ಪಲಂಗಡಿಯ ಸ್ವಸ್ತಿಕ್ ಎನ್‌ಕ್ಲೇವ್‌ನಲ್ಲಿ ತನಿಯ

ಕಾಪು : ಡಿ.15ರಂದು ತನಿಯಾ ಮೋಟಾರ್ಸ್ ಸೂಪರ್ ಆಟೋ ಶೋರೂಂ ಉದ್ಘಾಟನೆ

ಮೊಂಟ್ರಾ ಇಲೆಕ್ಟ್ರಿಕ್ ಅಧಿಕೃತ ಡೀಲರ್‌ನ ತನಿಯಾ ಮೋಟಾರ್ಸ್ ಸೂಪರ್ ಆಟೋ ಶೋರೂಂ ಕಾಪುವಿನ ಕೊಪ್ಪಲಂಗಡಿಯ ಸ್ವಸ್ತಿಕ್ ಎನ್‌ಕ್ಲೇವ್‌ನಲ್ಲಿ ಡಿಸೆಂಬರ್ 15ರಂದು ಶುಭಾರಂಭಗೊಳ್ಳಲಿದ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹಾಗೂ ಉತ್ಪಾದನೆ ಹೆಚ್ಚಾಗಿದೆ. ಕಾರು, ಸ್ಕೂಟರ್, ಬೈಕ್ ಹಾಗೂ ತ್ರಿಚಕ್ರ ವಾಹನಗಳ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಿದೆ. ಇದೀಗ ಪ್ರತಿ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದೆ. ಈ ರಿಕ್ಷಾವನ್ನು ಒಂದು ಬಾರಿ ಚಾರ್ಜ್ ಮಾಡಿದರೆ 197 ಕಿಲೋ