ಉಚ್ಚಿಲ ಶ್ರೀ ಮಾಹಲಕ್ಷ್ಮೀ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ದಂಪತಿ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.ಶ್ರೀ ಕ್ಷೇತ್ರದ ವತಿಯಿಂದ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಪ್ರಸಾದ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಗಿರಿಧರ್ ಸುವರ್ಣ, ಪ್ರಧಾನ ಅಚರ್ಕರಾದ ರಾಘವೇಂದ್ರ ಉಪಾಧ್ಯಾಯ ಹಾಗೂ
ಉಚ್ಚಿಲ:ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರೀಮತಿ ಶ್ರುತಿಯವರು ಕುಟುಂಬ ಸಮೇತ ಇಂದು ಭೇಟಿ ನೀಡಿದರು. ಸ್ವ ಕುಟುಂಬ ಸಮೇತರಾಗಿ ಬಂದ ಅವರು ಶ್ರೀ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆದರು ಹಾಗೂ ಶ್ರೀ ಕ್ಷೇತ್ರದ ವತಿಯಿಂದ ಶ್ರುತಿಯವರಿಗೆ ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಪ್ರಸಾದ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಗಿರಿಧರ್ ಸುವರ್ಣ, ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ,
ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಗ್ರಾಮ ಆಡಳಿತಾಧಿಕಾರಿ ಕಚೇರಿ – ಪ್ರಯಾಣಿಕರ ತಂಗುದಾಣ ಹಾಗೂ ಗ್ರಂಥಾಲಯದ ಉದ್ಘಾಟನೆಯನ್ನು ಇಂದು ದಿನಾಂಕ 12-11-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಉಳಿಯಾರು ದಿl. ಪದ್ಮನಾಭ ಉಪಾಧ್ಯಾಯರ ಮಾರ್ಗ ನಾಮಕರಣ ಮಾಡಲಾಗಿದ್ದು ಶಾಸಕರು ಇದರ ನಾಮ ಫಲಕದ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಜೂರು ಗ್ರಾಮ ಪಂಚಾಯತ್
ಮೂಡುಬಿದಿರೆ: ಕರ್ನಾಟಕ ರಾಜ್ಯ ವೇಯ್ಟ್ ಲಿಫ್ಟಿಂಗ್ ಅಸೋಸಿಯೇಷನ್ (ರಿ.) ಮತ್ತು ಸ್ಫೋರ್ಟ್ಸ್ ಎಂಡ್ ಆರ್ಟ್ಸ್ ಅಸೋಸಿಯೇಷನ್ (ರಿ.) ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಟ್ಟದ ಜೂನಿಯರ್, ಸಬ್ ಜೂನಿಯರ್ (ಬಾಲಕ ಬಾಲಕಿಯರು), ಸೀನಿಯರ್ (ಪುರುಷ ಮತ್ತು ಮಹಿಳೆಯರು) ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು.ಜೂನಿಯರ್ ವಿಭಾಗದ ಬಾಲಕ ಬಾಲಕಿಯರ, ಸಬ್ ಜೂನಿಯರ್ ಬಾಲಕ ಬಾಲಕಿಯರ
ಮೂಡುಬಿದಿರೆ: ಹಿರಿಯ ಉದ್ಯಮಿ, ಪಂಚಾಯತ್ ಬೋರ್ಡ್ ಮಾಜಿ ಸದಸ್ಯ, ಸಾಮಾಜಿಕ ಪ್ರಮುಖ ಜಿ. ಮೋಹನ ಶೆಣೈ ( 88ವ) ಬೆಂಗಳೂರಿನ ವಾತ್ಸಲ್ಯ ನಿವಾಸದಲ್ಲಿ ಸೋಮವಾರ ನಿಧನ ಹೊಂದಿದರು. ಅವರು ಪತ್ನಿ, ಆರು ಮಂದಿ ಪುತ್ರರನ್ನು ಅಗಲಿದ್ದಾರೆ.ವರ್ತಕರಾಗಿ, ಉದ್ಯಮಿಯಾಗಿ ಮೂಡುಬಿದಿರೆಯಲ್ಲಿ ಸಾಮಾಜಿಕ ರಂಗದಲ್ಲಿಯೂ ಶೆಣೈಯವರು ಗುರುತಿಸಿಕೊಂಡಿದ್ದರು. ಜಿ. ವಾಸುದೇವ ಪೈ ಅವರಂತಹ ಸಾಮಾಜಿಕ ಧುರೀಣರ ನಿಕಟವರ್ತಿಯಾಗಿ ಸಮಾಜ ಮಂದಿರ ಸಭಾ,ಜಿ.ವಿ.ಪೈ ಮೆಮೋರಿಯಲ್ ಟ್ರಸ್ಟ್ , ರೋಟರಿ
ಒಮಾನ್:ಕೊಲ್ಲಿ ರಾಷ್ಟ್ರವಾದ ಒಮಾನ್ ದೇಶದ ಮಸ್ಕತ್ ನಗರದಲ್ಲಿರುವ ಅಲ್ ಹೈಲ್ ಕ್ರೀಡಾಂಗಣದಲ್ಲಿ ಒಮಾನ್ ಬಿಲ್ಲವಾಸ್ ಕೂಟದ ವತಿಯಿಂದ ದಿನಾಂಕ 14-11-2025 ರಂದು ಶುಕ್ರವಾರ ಬೆಳಿಗ್ಗೆ 8:00ರಿಂದ ಒಮಾನ್ ಬಿಲ್ಲವಾಸ್ ಸೂಪರ್ ಲೀಗ್ (OBSL 2025) ಕ್ರೀಡಾ ಕೂಟವು ನಡೆಯಲಿದೆ. ಒಮಾನ್ ಬಿಲ್ಲವಾಸ್ ಕೂಟವು ಕೂಟದ ಅಧ್ಯಕ್ಷರಾದ ಶ್ರೀ ಉಮೇಶ್ ಬಂಟ್ವಾಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಕ್ರೀಡಾ ಕೂಟಕ್ಕೆ ಮುಖ್ಯ ಅತಿಥಿಯಾಗಿ ಅಂತಾರಾಷ್ಟ್ರೀಯ ಪ್ರತಿಭಾನ್ವಿತ
ಚನ್ನಕೇಶವ ದೇವಾಲಯದಲ್ಲಿ ಭದ್ರತಾ ನಿರ್ಲಕ್ಷ-ಕಾರ್ಯನಿರ್ವಹಿಸದ ಮೆಟಲ್ ಡಿಟೆಕ್ಟರ್ ಮತ್ತು ಸಿಸಿಟಿವಿ ಕ್ಯಾಮೆರಾಗಳು ಬೇಲೂರು, ನವೆಂಬರ್ 11 — ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಭದ್ರತಾ ಕ್ರಮಗಳ ನಿರ್ಲಕ್ಷ್ಯ ಆತಂಕ ಹುಟ್ಟಿಸಿದೆ. ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಅಳವಡಿಸಿರುವ ಮೆಟಲ್ ಡಿಟೆಕ್ಟರ್ ಕಳೆದ ಒಂದೂವರೆ ತಿಂಗಳಿನಿಂದ ಕಾರ್ಯನಿರ್ವಹಿಸದೇ ನಿಂತಿದ್ದು, ಪ್ರಮುಖ ಸಿಸಿಟಿವಿ ಕ್ಯಾಮೆರಾವೂ ಸಹ ವರ್ಕ್
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ ಹಿರಿಯ ನಾಟಕಕಾರ ಮನು ಇಡ್ಯಾ ಅವರು ಬರೆದ ‘ಗಂಧದ ಕೊರಡ್ ಬೊಕ್ಕ ತಾಂಗ್ ನಿರೆಲ್’ ಎರಡು ನಾಟಕಗಳ ಪುಸ್ತಕ ಬಿಡುಗಡೆ ಮತ್ತು ಮನು ಇಡ್ಯಾ ಅವರಿಗೆ ಚಾವಡಿ ತಮ್ಮನ ಕಾರ್ಯಕ್ರಮ ನ.13 ರಂದು ಸಂಜೆ 4:00 ಗಂಟೆಗೆ ಬಿಲ್ಲವ ಸಮಾಜ ಸೇವಾ ಸಂಘ ಇಡ್ಯಾ ಸುರತ್ಕಲ್ ಇಲ್ಲಿ ನಡೆಯಲಿದೆ.ವಿಜಯ ಕರ್ನಾಟಕ ದಿನಪತ್ರಿಕೆಯ ನಿವೃತ್ತ ಸ್ಥಾನೀಯ ಸಂಪಾದಕ ಯು.ಕೆ.ಕುಮಾರನಾಥ ಅವರು ಪುಸ್ತಕ ಬಿಡುಗಡೆ
ಮೂಡುಬಿದಿರೆ: ಆಳ್ವಾಸ್ ಸ್ಪೋಟ್ಸ್೯ ಕ್ಲಬ್‌ನ ಪ್ರತಿಭಾನ್ವಿತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ, ಭಾರತದ ರಾಷ್ಟ್ರೀಯ ಕಬ್ಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರು ನವೆಂಬರ್ 15ರಿಂದ 25 ರವರೆಗೆ ಬಾಂಗ್ಲಾದೇಶದ ಡಾಕಾದಲ್ಲಿ ನಡೆಯಲಿರುವ ಎರಡನೇ ಮಹಿಳಾ ಕಬಡ್ಡಿ ವಲ್ಡ್ಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಧನಲಕ್ಷ್ಮೀ ದಕ್ಷಿಣ ಭಾರತದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಏಕೈಕ ಆಟಗಾರ್ತಿಯಾಗಿದ್ದಾರೆ. ತನ್ನ ಆಲ್‌ರೌಂಡರ್ ಆಟದಿಂದ ತಂಡದಲ್ಲಿ
ಕಡಬ:ಇಲ್ಲಿನ ನೂಜಿಬಾಳ್ತಿಲ ಗ್ರಾಮದ ಯುವಕನೋರ್ವ ಬೆಂಗಳೂರಿನ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.ಮೃತನನ್ನು ಕಲ್ಲುಗುಡ್ಡೆ ನಿವಾಸಿ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಜುಬಿನ್ ತೋಮಸ್ (24 ವರ್ಷ) ಎಂದು ಗುರುತಿಸಲಾಗಿದೆ. ಅವರು ವಿದೇಶಕ್ಕೆ ಹೋಗುವ ಸಿದ್ಧತೆ ನಡೆಸುತ್ತಿದ್ದರೆಂದು ತಿಳಿದುಬಂದಿದ್ದು, ಈ ನಡುವೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆತಂಕ ಉಂಟುಮಾಡಿದೆ.ಆತ್ಮಹತ್ಯೆಯ ನಿಖರ ಕಾರಣ ತಿಳಿದುಬಾರದಿದ್ದು,




























