Home Archive by category ಕರಾವಳಿ (Page 123)

ಉಡುಪಿ: ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟಿಸುವ ಪರಿಸ್ಥಿತಿ ಸೃಷ್ಠಿ ಮಾಡಬೇಡಿ: ಕೋಟ ಶ್ರೀನಿವಾಸ ಪೂಜಾರಿ

ಕರ್ನಾಟಕದ ಎಲ್ಲಾ ವಿರೋಧ ಪಕ್ಷದ ಶಾಸಕರಿಗೆ ಅನ್ವಯಿಸುವ ಸಮಸ್ಯೆ ಇದು. ವಿರೋಧಪಕ್ಷದ ಶಾಸಕರನ್ನ ಸಿದ್ದರಾಮಯ್ಯ ಸರ್ಕಾರ ಹಣೆಯಲು ಹೊರಟಿದೆ. ಹಿಂದಿನ ಸರ್ಕಾರದ ಎಲ್ಲಾ ಯೋಜನೆಯನ್ನು ಈ ಸರ್ಕಾರ ತಡೆ ಹಿಡಿದಿದೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಉಡುಪಿಯಲ್ಲಿ ಅನುದಾನ ಬಿಡುಗಡೆಗೆ ಆಗ್ರಹಿಸಿ ಶಾಸಕ ಮುನಿರತ್ನ ಪ್ರತಿಭಟನೆ ಕುರಿತು ಮಾಧ್ಯಮಕ್ಕೆ

ಬಂಟ್ವಾಳ: ರೈಲ್ವೆ ಹಳಿ ಮೇಲೆ ಉರುಳಿಬಿದ್ದ ಸಿಮೆಂಟ್ ಮಿಕ್ಸರ್ ಯಂತ್ರವಿದ್ದ ವಾಹನ, ಚಾಲಕನಿಗೆ ಗಾಯ

ಬಂಟ್ವಾಳ ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್ ಫಾರ್ಮ್ ನಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಚಲಿಸುವ ಸಿಮೆಂಟ್ ಮಿಕ್ಸರ್ ಯಂತ್ರ ಒಳಗೊಂಡ ವಾಹನವೊಂದು ರೈಲ್ವೆ ಹಳಿ ಮೇಲೆ ಉರುಳಿಬಿದ್ದಿದೆ. ಘಟನೆಯಲ್ಲಿ ಅದನ್ನು ಚಲಾಯಿಸುತ್ತಿದ್ದ ಚಾಲಕ ಗಾಯಗೊಂಡಿದ್ದಾರೆ. ಎರಡನೇ ಪ್ಲಾಟ್ ಫಾರ್ಮ್ ನಲ್ಲೂ ರೈಲ್ವೆ ಸಂಚಾರವಿದ್ದು, ಘಟನೆ ಸಂಭವಿಸುವ ಹೊತ್ತಿನಲ್ಲಿ ರೈಲು ಇರದಿದ್ದ ಕಾರಣ ದೊಡ್ಡ ಅನಾಹುತ ತಪ್ಪಿಹೋಗಿದೆ. ಬಳಿಕ ಅದರ ತೆರವು ಕಾರ್ಯಾಚರಣೆಗೆ

ಮಂಗಳೂರು: ಪ್ರತಿಯೊಂದು ವಿಚಾರದಲ್ಲೂ ರಾಜ್ಯ ಸರ್ಕಾರದಿಂದ ಜನತೆಗೆ ಅನ್ಯಾಯ: ವೇದವ್ಯಾಸ ಕಾಮತ್ ಕಿಡಿ

ಮಂಗಳೂರು: “ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೇಳೋರು ಕೇಳೋರು ಯಾರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಗಲಭೆಯಲ್ಲಿ ನಾವಿದನ್ನು ಕಣ್ಣಾರೆ ಕಂಡಿದ್ದೇವೆ. ಅಲ್ಲಿ ಅಮಾಯಕರ ಮೇಲೆ ಹಲ್ಲೆ ಮನೆಗಳ ಮೇಲೆ ದಾಳಿಗಳು ನಡೆದಿವೆ. ಮುಖ್ಯಮಂತ್ರಿ, ಗೃಹಸಚಿವರು ಏನೂ ನಡೆದೇ ಇಲ್ಲವೆಂಬಂತೆ ಮಾತಾಡುತ್ತಿದ್ದಾರೆ” ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್

ಲೀಚ್ ಥೆರಪಿ

ಲೀಚ್ ಎಂದು ಆಂಗ್ಲಭಾಷೆಯಲ್ಲಿ ಕರೆಸಿಕೊಳ್ಳುವ ‘ಜಿಗಣೆ’ ಅಥವಾ ‘ಇಂಬಳ’ ಸಾಮಾನ್ಯವಾಗಿ ತೇವವಿರುವ ಜಾಗಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ. ಈ ಜೀವಿಯ ಆಹಾರ ಮತ್ತು ವಾಸಸ್ಥಳ ಎಲ್ಲವೂ ಜಲವೇ ಆಗಿರುವುದರಿಂದ ಇವುಗಳಿಗೆ ‘ಜಲೌಕ’ ಎಂದೂ ಕರೆಯುತ್ತಾರೆ. ವಿಷಕಾರಕ ಜಿಗಣೆ ಮತ್ತು ವಿಷರಹಿತ ಜಿಗಣೆ ಎಂದು ಎರಡು ವಿಧಗಳಿದ್ದು, ವಿಷರಹಿತ ಜಿಗಣೆಗಳನ್ನು ಚಿಕಿತ್ಸೆಗಾಗಿ ಬಳಸುತ್ತಾರೆ. ಕಾಡು ಪ್ರದೇಶಗಳಲ್ಲಿ ತೇವವಿರುವ ಜಾಗಗಳಲ್ಲಿ ಹೇರಳವಾಗಿ ಕಂಡು ಬರುವ ಈ

ಪುತ್ತೂರು: ಅ.15ರಿಂದ 26ರ ವರೆಗೆ ದಸರಾ ಮಹೋತ್ಸವ

ಪುತ್ತೂರು: ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿ ವತಿಯಿಂದ 21ನೇ ವರ್ಷದ `ಪುತ್ತೂರು ದಸರಾ ಮಹೋತ್ಸವ’ ಅ. 15ರಿಂದ 26ರ ತನಕ ಸಂಪ್ಯ ಉದಯಗಿರಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ವಿವಿಧ ವೈದಿಕ, ಧಾರ್ಮಿಕ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ತಿಳಿಸಿದ್ದಾರೆ. ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅ. 15ರಂದು ಬೆಳಿಗ್ಗೆ 10ಕ್ಕೆ ಗಣಪತಿ ಹಾಗೂ

ಉಳ್ಳಾಲ: ಬಸ್-ಸ್ಕೂಟರ್ ಗಳ ಸರಣಿ ಅಪಘಾತ, ಕೃಷ್ಣ ಶೆಟ್ಟಿ ತಾಮಾರ್ ಗೆ ಗಾಯ, ಆಸ್ಪತ್ರೆಗೆ ದಾಖಲು

ಉಳ್ಳಾಲ: ಕರ್ನಾಟಕ ಸಾರಿಗೆ ಬಸ್ ಹಾಗೂ ಸ್ಕೂಟರ್‍ಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಅಡ್ಕ ನಿವಾಸಿ ಕೃಷ್ಣ ಶೆಟ್ಟಿ ತಾಮಾರ್ ಎಂಬವರು ಗಂಭೀರ ಗಾಯಗೊಂಡಿರುವ ಘಟನೆ ಕೋಟೆಕಾರು ಬೀರಿ ಜಂಕ್ಷನ್ ನಲ್ಲಿ ಇಂದು ಸಂಜೆ ವೇಳೆ ಸಂಭವಿಸಿದೆ. ಕೋಟೆಕಾರು ಗ್ರಾಮದ ಕಾರಣೀಕ ಸ್ಥಳ ಕೊಂಡಾಣ ಪಿಲಿಚಾಮುಂಡಿ, ಬಂಟ, ಮುಂಡತ್ತಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಕೋಟೆಕಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಅವರು ಅಪಘಾತದಲ್ಲಿ

ಬೆಳ್ತಂಗಡಿ: ಅರಣ್ಯ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದ ಕಳೆಂಜದ ವಿವಾದಿತ ಜಾಗದಲ್ಲಿ ಸರ್ವೆ ಕಾರ್ಯ ಆರಂಭ

ಅರಣ್ಯ ಭೂಮಿ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಕಾರಣವಾಗಿದ್ದ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೇ ನಂಬರ್ 309ರ ಅಂದರೆ ನಿಡ್ಲೆ ವಿಸ್ತೃತ ಬ್ಲಾಕ್ 2ರ ಮತ್ತು ಕಳೆಂಜ ವಿಸ್ತೃತ ಬ್ಲಾಕ್ ನ ಜಂಟಿ ಸರ್ವೆ ಕಾರ್ಯವು ಆರಂಭಗೊಳ್ಳಲಿದೆ. ತಾಲೂಕು ತಹಶೀಲ್ದಾರ್, ಉಪ್ಪಿನಂಗಡಿ ವಲಯ ಅಧಿಕಾರಿ, ಕಂದಾಯ ಅಧಿಕಾರಿಗಳು, ಸರ್ವೆ ಅಧಿಕಾರಿಗಳ ಸಹಭಾಗಿತ್ವದಲ್ಲಿ ಎಡಿಎಲ್ಆರ್ ಸರ್ವೆ ಮೂಲಕ ಸುಮಾರು 8,446 ಎಕರೆಯಷ್ಟು ಪ್ರದೇಶವನ್ನು ಸರ್ವೆ ಮಾಡಲಾಗುವುದು ಎಂದು

ಉಳ್ಳಾಲ: ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತ್ಯು

ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ರಾ.ಹೆ.೬೬ರ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಮೃತ ಸವಾರನನ್ನು ಮೂಲತಃ ಉಳ್ಳಾಲದ ಪ್ರಸಕ್ತ ಕೋಟೆಕಾರ್‌ನಲ್ಲಿ ನೆಲೆಸುತ್ತಿದ್ದ ಹನೀಫ್ ಎಂಬವರ ಪುತ್ರ ಅಝ್‌ವೀನ್ (21) ಎಂದು ಗುರುತಿಸಲಾಗಿದೆ. ದಕ್ಕೆಗೆ ಮೀನುಗಾರಿಕೆಯ ಕೆಲಸಕ್ಕೆಂದು ಅಝ್‌ವೀನ್ ೩:೩೦ರ ವೇಳೆಗೆ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ನೇತ್ರಾವತಿ ಸೇತುವೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡರು

ಸುರತ್ಕಲ್: ಸುರತ್ಕಲ್ ರೈಲ್ವೇ ಸೇತುವೆ ಅಕ್ಕಪಕ್ಕದ ರಸ್ತೆ ಗುಂಡಿ ಮುಚ್ಚುವಂತೆ ಡಿವೈಎಫ್‍ಐ ಆಗ್ರಹ

ಸುರತ್ಕಲ್ ರೈಲ್ವೇ ಸೇತುವೆ ಅಕ್ಕಪಕ್ಕದ ರಸ್ತೆ ಗುಂಡಿ ಮುಚ್ಚಿ ವಾಹನ ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಿಸಲು ಒತ್ತಾಯಿಸಿ ಹಾಗೂ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿರುವ ಕೊಂಕಣ ರೈಲ್ವೆ ರೋರೋ ಘಟಕವನ್ನು ಶೀಘ್ರ ಸ್ಥಳಾಂತರಕ್ಕೆ ಆಗ್ರಹಿಸಿ ಡಿವೈಎಫ್‍ಐ ಸುರತ್ಕಲ್ ಘಟಕದಿಂದ ಪ್ರತಿಭಟನೆ ನಡೆಸಿದರು. ಡಿವೈಎಫ್‍ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಸುರತ್ಕಲ್ ಭಾಗದಲ್ಲಿ ರಸ್ತೆ ಹೊಂಡ

ಕುಂದಾಪುರ: ಸೇನಾಪುರ ರೈಲ್ವೇ ನಿಲ್ದಾಣದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆಗೆ ಹೋರಾಟ ಸಮಿತಿಯಿಂದ ಆಗ್ರಹ

ಕುಂದಾಪುರದ ಸೇನಾಪುರ ನಿಲ್ದಾಣದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಹೋರಾಟ ಸಮಿತಿ ನೇತೃತ್ವದಲ್ಲಿ ಸೇನಾಪುರ ನಿಲ್ದಾಣದಲ್ಲಿ ಎಕ್ಸ್‍ಪ್ರೆಸ್ ರೈಲು ನಿಲುಗಡೆ ಆಗ್ರಹಿಸಿ ಚಲೋ ಸೇನಾಪುರ ಬೃಹತ್ ಪ್ರತಿಭಟನೆ ನಡೆಸಿದರು. ಬೃಹತ್ ಪ್ರತಿಭಟನೆ ಮೆರವಣಿಗೆ ನಾಡಾ ಗ್ರಾಮ ಪಂಚಾಯತ್‍ನಿಂದ ಆರಂಭಗೊಂಡು ಸೇನಾಪುರ ರೈಲ್ವೇ ನಿಲ್ದಾಣದವರೆಗೆ ಸಾಗಿಬಂದು, ಬಳಿಕ ರೈಲ್ವೇ ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಹೋರಾಟ ಸಮಿತಿಯ ಸಂಚಾಲಕ ರಾಜೀವ್