Home Archive by category ಕರಾವಳಿ (Page 122)

ಕಡಬ: ನನ್ನ ಮಣ್ಣು ನನ್ನ ದೇಶ ಅಮೃತ ಕಲಶ ಯಾತ್ರೆ ಜಾಥಾಕ್ಕೆ ಚಾಲನೆ

ದೇಶದ ರಕ್ಷಣೆಯೊಂದಿಗೆ ನಮ್ಮಲ್ಲರ ರಕ್ಷಣೆ ಮಾಡುವ ಯೋಧರಿಗೆ ಸ್ಮಾರಕ ನಿರ್ಮಾಣ ಮಾಡುವ ಕಾರ್ಯಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿಯವರು ಯೋಧರಿಗೆ ಅತ್ಯತ ಹೆಚ್ಚು ಗೌರವ ನೀಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಸುಳ್ಯ ಕ್ಷೇತ್ರ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಕಡಬದಲ್ಲಿ ನೆಹರು ಯುವ ಕೇಂದ್ರ ಮಂಗಳೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,

ಬೈಂದೂರು: 62ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್, ಮಣಿಕಾಂತ ಹೋಬಳಿದಾರ್‍ಗೆ ಚಿನ್ನದ ಪದಕ

62ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‍ನಲ್ಲಿ ಬೈಂದೂರಿನ ಮಣಿಕಾಂತ ಹೋಬಳಿದಾರ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ. 62ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಸರ್ವಿಸರ್ಸ್ ತಂಡವನ್ನು ಪ್ರತಿನಿಧಿಸಿದ 21 ವರ್ಷದ ಮಣಿಕಾಂತ ಹೋಬಳಿದಾರ್ ಅವರು 100 ಮೀ. ಓಟದ ಸೆಮಿಫೈನಲನ್ನು ಕೇವಲ 10.23 ಸೆಕೆಂಡ್‍ಗಳಲ್ಲಿ ಓಡುವ ಮೂಲಕ ರಾಷ್ಟ್ರೀಯ ದಾಖಲೆ ಬರೆದು ಅಗ್ರಸ್ಥಾನದೊಂದಿಗೆ ಫೈನಲ್‍ಗೆ

ಮಂಜೇಶ್ವರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎನ್‍ಆರ್ ಇಜಿ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ

ಮಂಜೇಶ್ವರ: ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿಸುವ ಕ್ರಮವನ್ನು ಕೊನೆಗೊಳಿಸಿ, ಹೆಚ್ಚಿಸಿದ ಮಜೂರಿಯನ್ನು ಕೂಡಲೇ ವಿತರಿಸಿ, ಕಡಿತಗೊಳಿಸಿದ ಲೇಬರ್ ಬಜೆಟ್ ಪುನಸ್ತಾಪಿಸಿ ಇತ್ಯಾದಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಎನ್‍ಆರ್‍ಇಜಿ ಯೂನಿಯನ್ ನೇತೃತ್ವದಲ್ಲಿ ಮೀಯಪದವಿನಲ್ಲಿ ಪ್ರತಿಭಟನೆ ನಡೆಸಿದರು. ಸಭೆಯನ್ನು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಏ. ಕರೀಂ ಉದ್ಘಾಟಿಸಿದರು. ಮೀಂಜ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ ಅಧ್ಯಕ್ಷತೆ

ಮಂಗಳೂರು: ರಾಜ್ಯಾದ್ಯಂತ “ಕುದ್ರು” ಸಿನಿಮಾ ಬಿಡುಗಡೆ

ಮೋಕ್ಷ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಭಾಸ್ಕರ್ ನಾಯ್ಕ್ ರಚಿಸಿ ನಿರ್ದೇಶಿಸಿ, ನಿರ್ಮಿಸಿರುವ, ಕರಾವಳಿ ಭಾಗದ ಕಥಾಹಂದರ ಹೊಂದಿರುವ “ಕುದ್ರು” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿತು. ನಗರದ ಭಾರತ್ ಮಾಲ್‍ನ ಬಿಗ್ ಸಿನಿಮಾಸ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಲಿಕೆದ ಬೊಳ್ಳಿ ನಟ ಡಾ. ದೇವದಾಸ್ ಕಾಪಿಕಾಡ್ ಅವರು ದೀಪ ಬೆಳಗಿಸುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ರು. ಈ ವೇಳೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ಸಿನಿಮಾ

ನೆಲ್ಯಾಡಿ :ವಿಶ್ವವಿದ್ಯಾನಿಲಯ ಕಾಲೇಜು : ವಿದ್ಯಾರ್ಥಿ ಸಂಘದ ಆಯ್ಕೆ

ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜು ಆಗಿರುವ ನೆಲ್ಯಾಡಿಯ ವಿಶ್ವವಿದ್ಯಾನಿಲಯ ಪದವಿ ಕಾಲೇಜಿನಲ್ಲಿ 2023-24ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಆಯ್ಕೆ ಪ್ರಕ್ರಿಯೆಯು ನಡೆಯಿತು. ಅಧ್ಯಕ್ಷರಾಗಿ ತೃತೀಯ ವರ್ಷದ ಕಲಾ ವಿಭಾಗದ ವಿದ್ಯಾರ್ಥಿ ಸಂದೀಪ್ ಕುಮಾರ್ ಎಂ.ಬಿ ಕಾರ್ಯದರ್ಶಿಯಾಗಿ ಅನುಪ್ರಿಯ, ಸಹ ಕಾರ್ಯದರ್ಶಿಯಾಗಿ ವನಿತಾ, ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ಕೌಶಲ್ಯ ಡಿ.ಬಿ, ಲಲಿತಕಲಾ ಸಂಘದ ಜೊತೆ ಕಾರ್ಯದರ್ಶಿಯಾಗಿ ಮಾಲಿನಿ ಸಿ.ಎ, ಹಾಗೂ

ಮಂಗಳೂರು: ಅಕ್ಷಯ್ ಆರ್. ಶೆಟ್ಟಿಯವರ ‘ಪೆರ್ಗ’ ತುಳು ನಾಟಕ, ‘ಹಿಡಿ ಅಕ್ಕಿಯ ಧ್ಯಾನ’ ಕನ್ನಡ ಕವನ ಸಂಕಲನ ಬಿಡುಗಡೆ

ತುಡರ್ ಪ್ರಕಾಶನದಿಂದ ಪ್ರಕಟಿಸಲಾದ ಅಕ್ಷಯ್ ಆರ್. ಶೆಟ್ಟಿ ಅವರ ‘ಪೆರ್ಗ’ ತುಳು ನಾಟಕ ಹಾಗೂ ‘ಹಿಡಿ ಅಕ್ಕಿಯ ಧ್ಯಾನ’ ಕನ್ನಡ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವು ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆಯಿತು. ಪೆರ್ಗ ತುಳು ನಾಟಕ ಕೃತಿಯನ್ನು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅವರು ಅನಾವರಣಗೊಳಿಸಿದರು. ಇದೇ ವೇಳೆ ಮಾತನಾಡಿದ ಅವರು, ಲೇಖಕಿ ಅಕ್ಷಯ ಶೆಟ್ಟಿ ಅವರ ಗಮನ ಇರುವುದು ಸಂಸ್ಕøತಿಯನ್ನು

ಮಂಗಳೂರು: ಮಂಗಳೂರಿನಲ್ಲಿ ಅ.17ರಿಂದ 21ರ ತನಕ ರಾಷ್ಟ್ರೀಯ ಓಪನ್ ರೇಟೆಡ್ ಚೆಸ್ ಪಂದ್ಯಾವಳಿ

ರಾಷ್ಟ್ರೀಯ ಓಪನ್ ಮತ್ತು ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿಯು ಅಕ್ಟೋಬರ್ 17ರಿಂದ 21ರ ತನಕ ಮಂಗಳೂರಿನ ಟೌನ್ ಹಾಲ್‍ನಲ್ಲಿ 9 ರೌಂಡ್‍ಗಳ ಸ್ಪರ್ಧೆ ನಡೆಯಲಿದೆ ಎಂದು ಚೆಸ್ ಅಸೋಸಿಯೇಶನ್‍ನ ಅಧ್ಯಕ್ಷರಾದ ರಮೇಶ್ ಕೋಟೆ ಹೇಳಿದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಈ ಪಂದ್ಯಾಟಕ್ಕೆ ಬೇರೆ ಬೇರೆ ರಾಜ್ಯಗಳ ಆಟಗಾರರು, ಅಂತರಾಷ್ಟ್ರೀಯ ಮಟ್ಟದ ಆಟಗಾರರು ಸಹಿತ ಸುಮಾರು 400

ಕಾರ್ಕಳ: ಭರದಿಂದ ಸಾಗುತ್ತಿರುವ ಪರಶುರಾಮನ ಮೂರ್ತಿಯ ಕೆಲಸ

ಕಾರ್ಕಳದ ಬೈಲೂರಿನ ಉಮಿಕಲ್ ಬೆಟ್ಟದ ಪರಶುರಾಮ ಥೀಂ ಪಾರ್ಕಿನಲ್ಲಿ ಪರಶುರಾಮನ ಅಸಲಿ ಮೂರ್ತಿಯ ಕೆಲಸ ಭರದಿಂದ ನಡೆಯುತ್ತಿದೆ. ಆದರೆ ಪ್ರತಿಮೆಯ ನಕಲಿತನ ಬಹಿರಂಗಪಡಿಸಿದ ನಂತರ ಇದೀಗ ಶಾಸಕರು ಅಸಲಿ ಮೂರ್ತಿಯ ಕೆಲಸ ಪ್ರಾರಂಭಿಸಿದ್ದಾರೆ. ಇದು ಶಾಸಕರಿಗೆ ಶೋಭೆ ತರುವಂತದ್ದಲ್ಲ ಎಂದು ಕಾಂಗ್ರೆಸ್ ವಕ್ತಾರ ಶುಭೋದ್ ರಾವ್ ಹೇಳಿದರು. ಅವರು ಕಾರ್ಕಳದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಈಗಾಗಲೇ ನಕಲಿ ಪರಶುರಾಮ ಮೂರ್ತಿಗೆ ಟರ್ಪಾಲನ್ನು ಹೊದಿಸಿ, ಯಾರಿಗೂ ಕಾಣದಂತೆ

ಮಂಗಳೂರು: ರಸ್ತೆ ಅಪಘಾತದಲ್ಲಿ ಯುವಕ ಮೃತ್ಯು

ಮಂಗಳೂರು: ಎಜೆ ಆಸ್ಪತ್ರೆ ಮುಂಭಾಗ ಆಸ್ಪತ್ರೆ ಕಡೆಯಿಂದ ಹೊರ ಬರುತ್ತಿದ್ದಂತೆ ಆಕ್ಟೀವ ಸ್ಕೂಟರ್ ಆಟೋ ರಿಕ್ಷಾಕ್ಕೆ ತಗುಲಿ ದ್ವಿಚಕ್ರ ವಾಹನ ಸವಾರ ಕೆಳಗೆ ಬಿದ್ದಂತೆ ಮುಂಭಾಗದದಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಮೈಮೇಲೆ ಹರಿದು ಕಾವುರು ನಿವಾಸಿ ಕೌಶಿಕ್ (21) ಮೃತಪಟ್ಟಿರುತ್ತಾರೆ . ಮಂಗಳೂರು ಸಂಚಾರ ಪೂರ್ವ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ

ಕಡಬ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸರ್ವೋತ್ತಮ ಗೌಡ ನೇಮಕ

ಕಡಬ:ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸರ್ವೋತ್ತಮ ಗೌಡ ಇವರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆದೇಶ ಮಾಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಕಾರದಲ್ಲಿ ಪಕ್ಷ ಸಂಘಟನೆ ಮಾಡುವಂತೆ ಸೂಚಿಸಲಾಗಿದೆ‌‌ ಎಂದು ತಿಳಿದು ಬಂದಿದೆ. ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಹೊಸಮನೆ ನಿವಾಸಿಯಾಗಿರುವ ಸರ್ವೋತ್ತಮ ಗೌಡ ಅವರು ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್