Home Archive by category ಕರಾವಳಿ (Page 174)

ದಕ್ಷಿಣ ಕೊರಿಯಾ ಜಾಂಬೂರಿಯಲ್ಲಿ ಮೇಳೈಸಿದ ಯಕ್ಷಗಾನ, ಹುಲಿವೇಷ

ಅಂತರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ವತಿಯಿಂದ ದಕ್ಷಿಣ ಕೊರಿಯಾದ ಸಿಮನ್ ಗಾಮ್ ದ್ವೀಪದಲ್ಲಿ ನಡೆಯುತ್ತಿರುವ ವಿಶ್ವ ಜಾಂಬೂರಿಯಲ್ಲಿ ಮಂಗಳವಾರ ದ.ಕ ಜಿಲ್ಲೆಯ 25 ವಿದ್ಯಾರ್ಥಿಗಳ ತಂಡ ಕರಾವಳಿಯ ಯಕ್ಷಗಾನ ಹಾಗೂ ಹುಲಿವೇಷ ಪ್ರದರ್ಶನವನ್ನು ನೀಡುವ ಮೂಲಕ ಜನಮನ ಗೆದ್ದಿದೆ ಅಲ್ಲದೆ ಭರತನಾಟ್ಯ, ಕೇರಳದ ಮೋಹಿನಿಯಾಟ್ಯಂ, ಒರಿಸ್ಸಾದ ಒಡಿಸ್ಸಿ, ಗುಜರಾತ್‍ನ ಬಾಂಗ್ಡಾ,

ಮೂಡುಬಿದಿರೆಯ ಅಮರಶ್ರೀ ಟಾಕೀಸಿಗೆ ಬೀಗಮುದ್ರೆ

ಮೂಡುಬಿದಿರೆ: ಕಳೆದ 40 ವರ್ಷಗಳಿಂದ ಕಾರ್ಯಚರಿಸುತ್ತಾ ಜನರಿಗೆ ಸದಭಿರುಚಿಯ ಸಿನೆಮಾಗಳನ್ನು ನೀಡಿ ರಂಜಿಸುತ್ತಿದ್ದ ಮೂಡುಬಿದಿರೆಯ ಅಮರಶ್ರೀ ಚಿತ್ರಮಂದಿರಕ್ಕೆ ಬೀಗಮುದ್ರೆ ಬಿದ್ದಿದೆ. ಮಾಜಿ ಸಚಿವ ದಿ.ಕೆ.ಅಮರನಾಥ ಶೆಟ್ಟಿ ಅವರ ಮಗಳು ಅಮರಶ್ರೀ ಅವರ ಹೆಸರಿನಲ್ಲಿರುವ ಈ ಸಿನೆಮಾ ಮಂದಿರವನ್ನು ಕಳೆದ 10 ವರ್ಷಗಳಿಂದ ಕಾರ್ಕಳದ ಜೆರಾಲ್ಡ್ ಕುಟಿನ್ಹಾ ಅವರು ನಡೆಸುತ್ತಿದ್ದರು. ಕಳೆದ 2021ಕ್ಕೆ ಪರವಾನಿಗೆಯ ಅವಧಿಯು ಮುಕ್ತಾಯಗೊಂಡಿರುತ್ತದೆ. ನಂತರ ನವೀಕರಣಗೊಳಿಸದೆ

ಆ.12 ಮತ್ತು 13ರಂದು ಬ್ರಹ್ಮಾವರದಲ್ಲಿ ಸಸ್ಯ ಮೇಳ ಮತ್ತು ಆಹಾರೋತ್ಸವ

ಬ್ರಹ್ಮಾವರ ರೋಟರಿ ರೋಯಲ್, ಕೃಷಿ ಕೇಂದ್ರ ಬ್ರಹ್ಮಾವರ, ತೋಟಗಾರಿಕಾ ಇಲಾಖೆ, ಇವರ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66 ನಿರ್ಮಲ ಪ್ರೌಢಶಾಲಾ ಆವರಣದಲ್ಲಿ ಅಗಸ್ಟ್ 12 ಮತ್ತು 13ರಂದು ಸಸ್ಯ ಮೇಳ ಮತ್ತು ಆಹಾರೋತ್ಸವ ಜರುಗಲಿದೆ ಎಂದು ರೋಟರಿ ರೋಯಲ್ ಅಧ್ಯಕ್ಷ ಅಭಿರಾಮ್ ನಾಯಕ್ ಕಾರ್ಯಕ್ರಮದ ಆವರಣದಲ್ಲಿ ಹೇಳಿದರು. ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು ರೋಟರಿ , ಕೃಷಿ ವಿಜ್ಞಾನಿಗಳು ಇನ್ನಿತರ ಗಣ್ಯರ ಸಮ್ಮುಖದಲ್ಲಿ ಸಸ್ಯ ಮತ್ತು

ಆಗಸ್ಟ್ 12 : ವಿಸ್ಡಮ್ ಎಡ್ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರಿನ ಕೊಡಿಯಾಲ್ ಬೈಲ್‍ನಲ್ಲಿರುವ ವಿಸ್ಡಮ್ ಎಡ್ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗಾಗಿ ಡಬ್ಲ್ಯುಇ ತಂಡದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಗಸ್ಟ್ 12ರಂದು ಆಯೋಜಿಸಿದ್ದಾರೆ.ವಿಸ್ಡಮ್ ಕಚೇರಿಯಲ್ಲಿ ಉಚಿತ ದಂತ ತಪಾಸಣೆ, ರಕ್ತ ತಪಾಸಣೆ ಮತ್ತು ಕಣ್ಣಿನ ಪರೀಕ್ಷೆಯನ್ನು ಮಾಡಿಕೊಳ್ಳಲು ಅವಕಾಶವಿದೆ. ಆಗಸ್ಟ್ 12ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಆರೆಂಜ್ ಡೆಂಟಲ್ ಕ್ಲೀನಿಕ್, ಟೈಟನ್ ಐಪ್ಲಸ್

ಶ್ರೀ ನಿಧಿ ಮಹಿಳಾ ಮಂಡಳಿಯಿಂದ ಆಟಿ ಡೊಂಜಿ ದಿನ

ನಮ್ಮ ಹಿರಿಯರಿಗೆ ಹೊಟ್ಟೆಗೆ ತಿನ್ನಲೂ ಆಹಾರದ ಕೊರತೆ ಇದ್ದರೂ ದಾರಾಳ ಮನಸ್ಸಿಗೆ ನೆಮ್ಮದಿ ಇತ್ತು. ಆದರೆ ಇಂದಿನ ದಿನಗಳಲ್ಲಿ ಎಲ್ಲಾವೂ ಇದ್ದರೂ ಮನಸ್ಸಿಗೆ ನೆಮ್ಮದಿಯೇ ಇಲ್ಲ ಎಂಬುದಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ. ಅವರು ಎರ್ಮಾಳು ಶ್ರೀ ನಿಧಿ ಮಹಿಳಾ ಮಂಡಳಿ ಆಯೋಜಿಸಿದ ಆಟಿ ಡೊಂಜಿ ದಿನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಹಿರಿಯರಲ್ಲಿ ಆಸ್ತಿ ಅಂತಸ್ತಿನ ಕೊರತೆ ಇದ್ದರೂ ಮನಸ್ಸಿಗೆ ಮಾನಸಿಕ ನೆಮ್ಮದಿ

ಸ್ಕೂಲ್ ಬಸ್ ಮತ್ತು ಆಟೋ ರಿಕ್ಷಾ ಮಧ್ಯೆ ಅಪಘಾತ
ಐದು ಮಂದಿ ವಿದ್ಯಾರ್ಥಿಗಳಿಗೆ ಗಾಯ

ಸ್ಕೂಲ್ ಬಸ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಘಟನೆ ಇನ್ನಂಜೆ ಕಲ್ಲುಗುಡ್ಡೆ ಗರೋಡಿ ಬಳಿ ನಡೆದಿದೆ. ಅಪಘಾತದಲ್ಲಿ ಅಟೋ ರಿಕ್ಷಾದಲ್ಲಿದ್ದ ಐವರು ವಿದ್ಯಾರ್ಥಿಗಳು ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗಾಯಗೊಂಡವರು ಇನ್ನಂಜೆ ಎಸ್ ವಿ ಎಚ್ ಶಾಲಾ ವಿದ್ಯಾರ್ಥಿಗಳು ಎನ್ನಲಾಗಿದೆ. ಕಲ್ಲುಗುಡ್ಡೆಯ ಇಕ್ಕಾಟದ ರಸ್ತೆಯಲ್ಲಿ ಪಡುಬೆಳ್ಳೆ ನಾರಾಯಣ ಗುರು ವಿದ್ಯಾಸಂಸ್ಥೆಯ ಬಸ್ ಹಾಗೂ ಇನ್ನಂಜೆ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುವ ಅಟೋ

ಹೆಜಮಾಡಿ ಟೋಲ್ ಬಳಿ ಕುಡುಕ ಲಾರಿ ಚಾಲಕನ ಅವಾಂತರ

ವಿಪರೀತ ಮದ್ಯಪಾನ ಮಾಡಿ ಕಂಟೇನರ್ ಚಲಾಯಿಸಿಕೊಂಡು ಬಂದು ಹೆಜಮಾಡಿ ಟೋಲ್ ಬಳಿಯ ಬೃಹತ್ ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆದ ಘಟನೆ ನಡೆದಿದೆ.ಯು.ಪಿ. ಮೂಲದ ವ್ಯಕ್ತಿ ಮಹಾರಾಷ್ಟ್ರ ನೋಂದಾಯಿತ ಕಂಟೇನರ್ ಚಲಾಯಿಸಿಕೊಂಡು ಬಂದಿದ್ದು, ಅದೃಷ್ಟವಶಾತ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಬಳಿಕ ಸ್ಥಗಿತಗೊಂಡ ಕಂಟೇನರ್ ನಲ್ಲಿದ್ದ ಚಾಲಕನನ್ನು ಸ್ಥಳೀಯರು ವಿಚಾರಿಸಲು ಮುಂದಾದಾಗ ಮದ್ಯ ಸೇವಿಸಿದ್ದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸ್ರು ಚಾಲಕನನ್ನು ವಾಹನದಿಂದ

ಆಗಸ್ಟ್ 11ರಂದು ಕರಾವಳಿಯಾದ್ಯಂತ ಕೊರಮ್ಮ ತುಳು ಚಲನಚಿತ್ರ ಬಿಡುಗಡೆ

ತುಳುನಾಡ ಸಂಸ್ಕøತಿ, ಆಚಾರ-ವಿಚಾರ, ನಡೆ ನುಡಿ, ಜೀವನ ಪದ್ಧತಿ ಇವೆಲ್ಲವುಗಳೊಂದಿಗೆ ಮನೋರಂಜನೆಯನ್ನು ಬೆರೆಸಿಕೊಂಡು ಕುತೂಹಲ ಹುಟ್ಟಿಸುವ ಕಥೆ ಹೆಣೆದು ಸುಂದರವಾಗಿ ಮಾಡಿರುವ ತುಳು ಸಿನಿಮಾ ಕೊರಮ್ಮ. ಈ ಚಲನಚಿತ್ರ ಆಗಸ್ಟ್ 11ರಂದು ಕರಾವಳಿಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಸಫೈರ್ ಪ್ರೋಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ಅಡ್ಯಾರು ಮಾಧವ ನಾಯ್ಕ್ ಅರ್ಪಿಸಿರುವ ಈ ಚಿತ್ರದ ಹಾಡಿನ ದೃಶ್ಯದಲ್ಲಿ ತುಳುನಾಡಿನ ಪೂರ್ವಜರ ಬದುಕು ಮಾರ್ಮಿಕವಾಗಿ

ಉಡುಪಿ ಪ್ರಕರಣದ ತನಿಖೆ ಆದ ನಂತರ ಕೋರ್ಟಿಗೆ ವರದಿ ಕೊಡುತ್ತೇವೆ || ಮನೀಶ್ ಕರ್ಬೀಕರ್

ಉಡುಪಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ಉಡುಪಿಗೆ ಆಗಮಿಸಿ ಉಡುಪಿ ಬನ್ನಂಜೆ ಸರಕಾರಿ ಅತಿಥಿ ಗೃಹದಲ್ಲಿ ಉನ್ನತ ಮಟ್ಟದ ಪೆÇಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಸಿಐಡಿ ಎಸ್ ಪಿ ರಾಘವೇಂದ್ರ ಹೆಗಡೆ, ಉಡುಪಿ ಎಸ್ ಪಿ ಅಕ್ಷಯ್ ಮಚ್ಚೀಂದ್ರ ಹಾಕೆ, ಸಿಐಡಿ ಅಧಿಕಾರಿಗಳು, ಜಿಲ್ಲಾ ಪೆÇಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಮಹತ್ವದ ಚರ್ಚೆ ನಡೆಸಿದರು.ಎಡಿಜಿಪಿ ಅವರು ಅಧಿಕಾರಿಗಳಿಂದ ತನಿಖೆಯ ವಿವರಗಳನ್ನು

ಉಡುಪಿ ಜಿಲ್ಲಾ ಬಿಜೆಪಿ ಎಸ್ಸಿ, ಎಸ್ಟಿ ಮೋರ್ಚಾದಿಂದ ದಲಿತ ವಿರೋಧ ನೀತಿ ಖಂಡಿಸಿ ಪ್ರತಿಭಟನೆ

ಉಡುಪಿ ಜಿಲ್ಲೆಯ ಬಿಜೆಪಿ ಎಸ್‍ಸಿ ಮತ್ತು ಎಸ್.ಟಿ. ಮೋರ್ಚಾದ ವತಿಯಿಂದ ದಲಿತ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂಪಾಯಿ ಹಣವನ್ನು ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಉಡುಪಿಯ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಪ್ರತಿಭಟನೆಯಲ್ಲಿ ಬಿಜೆಪಿಯ ಪ್ರಮುಖರು